Thursday, October 16, 2025

Latest Posts

Recipe: ರಸಂ ವಡಾ ರೆಸಿಪಿ

- Advertisement -

ಬೇಕಾಗುವ ಸಾಮಗ್ರಿ: ಒಂದು ಕಪ್ ಉದ್ದಿನ ಬೇಳೆ, 4 ಹಸಿಮೆಣಸು, ಕೊಂಚ ಕಾಯಿಯ ಚಿಕ್ಕ ಚಿಕ್ಕ ತುಂಡುಗಳು, ತುರಿದ ಶುಂಠಿ, ಕೊತ್ತೊಂಬರಿ ಸೊಪ್ಪು, ಕರಿಬೇವು, ಜೀರಿಗೆ, 2 ಟೊಮೆಟೋ, ಕೊಂಚ ಹುಣಸೆ ರಸ, ಬೆಲ್ಲ, ಕಾಲು ಕಪ್ ತೊಗರಿ ಬೇಳೆ, 1 ಈರುಳ್ಳಿ, 4 ಬೆಳ್ಳುಳ್ಳಿ ಎಸಳು, ಒಗ್ಗರಣೆೆಗೆ ಎಣ್ಣೆ, ಕರಿಬೇವು, ಹಿಂಗು, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲು ಒಂದು ಕಪ್ ಉದ್ದಿನ ಬೇಳೆಯನ್ನು ರಾತ್ರಿ ನೀರಿನಲ್ಲಿ ನೆನೆಸಿಡಬೇಕು. ಬಳಿದ ಉದ್ದಿನ ಬೇಳೆಯನ್ನು ಚೆನ್ನಾಗಿ ತೊಳೆದು, ವಡಾ ಮಾಡುವಷ್ಟು ಗಟ್ಟಿಯಾಗಿ ಹಿಟ್ಟು ರೆಡಿ ಮಾಡಿಕೊಳ್ಳಬೇಕು. ಬಳಿಕ ಈ ಹಿಟ್ಟಿಗೆ ಉಪ್ಪು, ಜೀರಿಗೆ, ಕರಿಬೇವು, ಕೊತ್ತೊಂಬರಿ ಸೊಪ್ಪು, ಕಾಯಿ ತುಂಡುಗಳು, ಶಂಠಿತುರಿ ಹಾಕಿ ಮಿಕ್ಸ್ ಮಾಡಬೇಕು. ಇದನ್ನು ಬದಿಗಿರಿಸಿ.

ಈಗ ರಸಂ ರೆಡಿ ಮಾಡಿಕೊಳ್ಳಿ. ಮೊದಲು ತೊಗರಿ ಬೇಳೆ ಬೇಯಿಸಿಕೊಳ್ಳಿ. ಬಳಿಕ ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು, ಈರುಳ್ಳಿ, ಜೀರಿಗೆಯನ್ನು ಚೆನ್ನಾಗಿ ಕುಟ್ಟಿ, ತರಿ ತರಿಯಾಗಿ ಪುಡಿ ಮಾಡಿಕೊಳ್ಳಬೇಕು. ಪ್ಯಾನ್ ಬಿಸಿ ಮಾಡಿ, ಎಣ್ಣೆ ಕರಿಬೇವು, ಕುಟ್ಟಿ ಪುಡಿ ಮಾಡಿದ ಮಸಾಲೆ ಹಾಕಿ ಹುರಿದುಕೊಳ್ಳಿ. ಬಳಿಕ ಟೊಮೆಟೋ ಹಾಕಿ ಹುರಿದುಕೊಳ್ಳಿ.

ಬಳಿಕ ಇದಕ್ಕೆ ನೀರು, ಹುಣಸೆ ರಸ, ಬೆಲ್ಲ ಹಾಕಿ ರಸಂ ತಯಾರಿಸಿಕೊಳ್ಳಿ. ಈಗ ಇದಕ್ಕೆ ಎಣ್ಣೆ, ಹಸಿಮೆಣಸು, ಕರಿಬೇವು, ಹಿಂಗು ಹಾಕಿ ಒಗ್ಗರಣೆ ಕೊಟ್ಟರೆ ರಸಂ ರೆಡಿ. ಕಾವಲಿಯಲ್ಲಿ ಎಣ್ಣೆಯನ್ನು ಕಾಯಿಸಿ, ಚಿಕ್ಕ ಚಿಕ್ಕ ವಡೆ ತಯಾರು ಮಾಡಿಕೊಳ್ಳಿ. ಬೌಲ್‌ಗೆ ವಡೆ ಹಾಕಿ, ಅದರ ಮೇಲೆ ರಸಂ ಹಾಕಿ, ಬಿಸಿ ಬಿಸಿಯಾಗಿಯೇ ಸರ್ವ್ ಮಾಡಿ.

- Advertisement -

Latest Posts

Don't Miss