Movie News: ಕರ್ನಾಟಕ ಟಿವಿ : ರಾಕ್ ಲೈನ್ ವೆಂಕಟೇಶ್ ರ ಕಾಟೇರ ಸಕ್ಸಸ್ ಪಾರ್ಟಿ ಸಾಕಷ್ಟು ಕಾಂಟ್ರವರ್ಸಿಯಾಗಿ ನಟ ದರ್ಶನ್ ಸೇರಿದಂತೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ರು. ಎಂಪೈರ್ ಹೋಟೆಲ್ ರಾತ್ರಿಯೆಲ್ಲಾ ಓಪನ್ ಮಾಡಿ ಊಟ ಕೊಟ್ರು ಕಾನೂನು ಕಣ್ಣುಮುಚ್ಚಿ ಕುಳಿತಿರುತ್ತೆ. ಆದ್ರೆ ನಾವು ಊಟ ಮಾಡೋದು ಕಾಂಟ್ರವರ್ಸಿ ಮಾಡಿ ಠಾಣೆಗೆ ಕರೆಸ್ತಾರೆ ಅಂತ ಹೇಳೋದರ ಮೂಲಕ ನಮ್ಮನ್ನ ಟಾರ್ಗೆಟ್ ಮಾಡಲಾಗ್ತಿದೆ ಅಂತ ಸಿನಿಮಾ ತಂಡ ಹೇಳಿತ್ತು.. ಇದೀಗ ಕಾಟೇರ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರನ್ನ ಬಿಬಿಎಂಪಿ ಅಧಿಕಾರಿಗಳು ಟಾರ್ಗೆಟ್ ಮಾಡಿದಂತೆ ಕಾಣ್ತಿದೆ. ಹತ್ತಾರು ಕೋಟಿ ಟ್ಯಾಕ್ಸ್ ಕಟ್ಟಿಲ್ಲ ಅಂತ ರಾಕ್ ಲೈನ್ ಮಾಲ್ ಬೀಗ ಜಡಿದಿದ್ದಾರೆ. ಅಷ್ಟಕ್ಕೂ ಈ ಪ್ರಕರಣ ಏನೂ ಅಂತ ನೋಡೋದಾದ್ರೆ..
April 20, 2023 : 1 ಕೋಟಿ 92 ಲಕ್ಷ ಕಟ್ಟಲು ಕೋರ್ಟ್ ಆದೇಶ.
May 22, 2023ರಂದು 99 ಲಕ್ಷ ರೂಪಾಯಿಯನ್ನು, 93 ಲಕ್ಷ ಡಿಡಿ ರೂಪದಲ್ಲಿ ರಾಕ್‌ಲೈನ್ ಕಂಪನಿ, ಕಮಿಷನರ್ ಬಿಬಿಎಂಪಿಗೆ ಸಂದಾಯ ಮಾಡಿದ್ದಾರೆ.
July 31, 2023ರಂದು 26 ಲಕ್ಷ 68 ಸಾವಿರ 2022-23 ಟ್ಯಾಕ್ಸ್ ಗಾಗಿ ಚೆಕ್ ಸಲ್ಲಿಸಲಾಗಿದೆ.
ಆದರೆ November 2023ರಂದು ಚೆಕ್ ಕಳೆದಿದೆ ಎಂದು ತಿಳಿಸಿ ಬಿಬಿಎಂಪಿ ಮತ್ತೆ ಚೆಕ್ ಕೇಳಿದ್ದಾರೆ.
November 2023ರಂದು ಚೆಕ್ ಕಳೆದುಹೋಗಿದೆ ಎಂದು ಲಿಖಿತವಾಗಿ ತಿಳಿಸಲು ರಾಕ್ ಲೈನ್ ಮನವಿ ಮಾಡಿದ್ದಾರೆ.
Feb 2024ಯಲ್ಲಿ ಆದರೆ ಚೆಕ್ ಕಳೆದುಹೋದ ಬಗ್ಗೆ ಬಿಬಿಎಂಪಿ ಲಿಖಿತವಾಗಿ ತಿಳಿಸಿಲ್ಲ.
ಬಳಿಕ Feb 8, 2024 ರಂದು ಸರಿಯಾಗಿ ಅಂದಾಜು ಮಾಡಿ ಪ್ರಾಪರ್ಟಿ ಟ್ಯಾಕ್ಸ್ ಮೊತ್ತ ತಿಳಿಸಲು ಮನವಿ ಮಾಡಲಾಗಿದೆ.
Feb 13,2024 ರಂದು ರಾತ್ರಿ ಅಧಿಕಾರಿಗಳು ದಿಢೀರ್ ಬಂದು ನೋಟೀಸ್ ನೀಡುವ ಹೈಡ್ರಾಮಾ ಮಾಡಿದ್ದಾರೆ.
Feb 14, 2024ರಂದು ಅಂದರೆ ಇಂದು ಟ್ಯಾಕ್ಸ್ ಬಾಕಿ ಇದೆ ಎಂದು ರಾಕ್ ಲೈನ್ ಮಾಲ್ ಗೆ ಬೀಗ ಹಾಕಲಾಗಿದೆ. 11 ಕೋಟಿ ಗೂ ಅಧಿಕ ಟ್ಯಾಕ್ಸ್ ಕೊಡಬೇಕೆಂದು ಸುಳ್ಳು ಮಾಹಿತಿ ನೀಡಲಾಗಿದೆ. ಅಲ್ಲದೇ, ಬೀಗ ಜಡಿಯಲು ಮೇಲಿಂದ ಆದೇಶವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಅಧಿಕಾರಿಗಳು ಕೆಲವು ಪ್ರಭಾವಿಗಳ ಒತ್ತಡಕ್ಕೆ ಮಣಿದಿರುವ ಸಾಧ್ಯತೆ ಇದೆ ಎಂಬ ಅಂದಾಜಿದೆ. ಹೀಗಾಗಿ ಇಂಥವರಿಗೆ ಕಾನೂನಿನ ಮೂಲಕವೇ ಪಾಠ ಕಲಿಸಬೇಕು ಎಂದು ರಾಕ್‌ಲೈನ್ ನಿರ್ಧರಿಸಿದ್ದಾರೆ.