ಚೆನ್ನೈ: ಪ್ರಪಂಚದಲ್ಲಿ ನಮಗೆ ಗೊತ್ತಿರದ ಹಲವು ವಿಷಯಗಳಿದೆ. ಅವುಗಳಲ್ಲಿ ವಿಷಪೂರಿತ ಹಾವುಗಳ ಮಾರಾಟ ಕೂಡ ಒಂದು. ಇಂಥ ವಿಷಪೂರಿತ ಹಾವುಗಳಿಂದ ಮಾದಕ ವಸ್ತುಗಳನ್ನ ತಯಾರಿಸಲಾಗುತ್ತದೆ. ಅಲ್ಲದೇ, ಇನ್ನೂ ಹಲವು ಬೇಡದ ಕೆಲಸಗಳಿಂದ ಈ ವಿಷ ಬಳಕೆಯಾಗುತ್ತದೆ. ಒಂದು ದೇಶದಿಂದ, ಇನ್ನೊಂದು ದೇಶಕ್ಕೆ ಈ ಹಾವುಗಳನ್ನ ಕಳ್ಳದಾರಿಯಲ್ಲಿ ಸಾಗಿಸುವ ಕೆಲಸ ನಡೆಯುತ್ತಿದೆ. ಆದರೆ ಹೀಗೆ ಮೋಸದಿಂದ ಹಾವು ಸಾಗಿಸುವ ವೇಳೆ, ಓರ್ವ ಮಹಿಳೆಯ ಬ್ಯಾಗ್‌ನಲ್ಲಿ 22 ಹಾವು ಪತ್ತೆಯಾಗಿದೆ.
ಚೆನ್ನೈ ಏರ್ಪೋರ್ಟ್‌ನಲ್ಲಿ ಈ ಘಟನೆ ನಡೆದಿದ್ದು, ಮಲೇಶಿಯಾದಿಂದ ಚೆನ್ನೈಗೆ ಬಂದಿಳಿದ ಮಹಿಳೆಯ ಮೇಲೆ ಅನುಮಾನ ಬಂದಿದೆ. ಆಗ ಆಕೆಯ ಬ್ಯಾಗ್ ಚೆಕ್ ಮಾಡಿದಾಗ, 22 ಹಾವುಗಳು ಪತ್ತೆಯಾಗಿದೆ. ಅದು ಕೂಡ ವಿವಿಧ ಜಾತಿಯ ಜೀವಂತ ಹಾವುಗಳಾಗಿದೆ. ಈಕೆ ಏಪ್ರಿಲ್ 28ರಂದು ಈ ಹಾವುಗಳನ್ನು ಹಿಡಿದುಕೊಂಡು, ಕೌಲಾಲಂಪುರದಿಂದ ಹೊರಟಿದ್ದಾನೆ. ಇದರೊಂದಿಗೆ ಒಂದು ಗೋಸುಂಬೆಯೂ ಇದ್ದು, ವನ್ಯಜೀವಿ ರಕ್ಷಣಾ ಇಲಾಖೆ ಅಧಿಕಾರಿಗಳು, ಇವನ್ನೆಲ್ಲ ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಈಕೆಯನ್ನ ಕೂಡ ಚೆನ್ನೈ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
‘ಕಾಂಗ್ರೆಸ್ ಪಕ್ಷ ಹಿಂದೆಯೂ ಶ್ರಮಿಕರ ಜೊತೆ ನಿಂತಿತ್ತು, ಮುಂದೆಯೂ ನಿಲ್ಲಲಿದೆ. ‘
ವಿಚ್ಛೇದನಕ್ಕಾಗಿ ಇನ್ನು 6 ತಿಂಗಳು ಕಾಯುವ ಅಗತ್ಯವಿಲ್ಲ ಎಂದ ಸುಪ್ರೀಂಕೋರ್ಟ್..
ಎ.ಆರ್.ರೆಹಮಾನ್ ಸಂಗೀತ ಕಾರ್ಯಕ್ರಮದಲ್ಲಿ ಪೊಲೀಸರ ಎಂಟ್ರಿ, ಅರ್ಧಕ್ಕೆ ನಿಂತ ಕಾರ್ಯಕ್ರಮ..