Sunday, May 26, 2024

Latest Posts

ಕಂತೆ ಕಂತೆ ನೋಟು ಹಿಡಿದು ಮನೆ ಮನೆಗೆ ಹಣ ಹಂಚಲು ಬಂದ ಬಿಜೆಪಿ ಕಾರ್ಯಕರ್ತ

- Advertisement -

Dharwad News: ಧಾರವಾಡ: ಬಿಜೆಪಿ ಅಭ್ಯರ್ಥಿ ಪರವಾಗಿ ಮತದಾರರಿಗೆ ಹಣದ ಆಮಿಷ ತೋರಿಸಲಾಗಿದ್ದು, ಧಾರವಾಡ ತಾಲೂಕಿನ ತಡಕೋಡ ಗ್ರಾಮದಲ್ಲಿ ಮನೆ ಮನೆಗೆ ಹಣ ಹಂಚಲಾಗುವ ದೃಶ್ಯ ಕಂಡುಬಂದಿತ್ತು. ಬಿಜೆಪಿ ಕಾಾರ್ಯಕರ್ತ ಕಂತೆ ಕಂತೆ ನೋಟು ಹಿಡಿದು ಮತದಾರನಿಗೆ ಹಂಚುವ ದೃಷ್ಯ ಕಂಡುಬಂದಿದ್ದು, ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದರು.

ಧಾರವಾಡದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಮತದಾನ ಮಾಡಿದ್ದಾರೆ. ನವಲಗುಂದ ಪಟ್ಟಣದ ಮತಗಟ್ಟೆ ಸಂಖ್ಯೆ 85ರಲ್ಲಿ, ಸರತಿ ಸಾಲಿನಲ್ಲಿ ನಿಂತು ವಿನೋದ್ ಅಸೂಟಿ ಮತದಾನ ಮಾಡಿದ್ದಾರೆ.

ಇನ್ನೊಂದೆಡೆ ಬಿಜೆಪಿ ನಾಯಕ ಅರವಿಂದ್ ಬೆಲ್ಲದ್ ಕೂಡ ಮತದಾನ ಮಾಡಿದ್ದು, ನಗರದ ಬುದ್ಧರಕ್ಕಿತ ಶಾಲೆಯ ಮತಗಟ್ಟೆ ಸಂಖ್ಯೆ 19ರಲ್ಲಿ, ತಂದೆ ಚಂದ್ರಕಾಂತ ಬೆಲ್ಲದ್, ತಾಯಿ ಲೀಲಾವತಿ ಬೆಲ್ಲದ್, ಪುತ್ರ ಅಗಸ್ತ್ಯ ಜೊತೆಗೆ ಆಗಮಿಸಿ ಮತದಾನ ಮಾಡಿದ್ದಾರೆ.

ನವಲಗುಂದ ಶಾಸಕ ಎನ್ ಎಚ್ ಕೋನರೆಡ್ಡಿ,ನವಲಗುಂದ ತಾಲೂಕಿನ ಚಿಲಕವಾಡ ಗ್ರಾಮದಲ್ಲಿರುವ ಮತದಾನ ಕೇಂದ್ರದಲ್ಲಿ, ಮತಗಟ್ಟೆ ಸಂಖ್ಯೆ 117 ರಲ್ಲಿ ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ್ದಾರೆ.

ಮುಷ್ಕರ ಮುಂದೂಡಿದ ಸರ್ಕಾರಿ ಆ್ಯಂಬುಲೆನ್ಸ್ ಸಿಬ್ಬಂದಿಗಳು

ಪಿಓಕೆ ತಂಟೆಗೆ ಹೋದರೆ ಭಾರತದ ಮೇಲೆ ಅಣುಬಾಂಬ್ ಬೀಳುತ್ತೆ: ಫಾರೂಕ್ ಅಬ್ದುಲ್ಲಾ

ಮೇಲ್ಜಾತಿಯವರು ಪೇಪರ್ ಸೆಲೆಕ್ಟ್‌ ಮಾಡುವ ಕಾರಣಕ್ಕೆ ದಲಿತರು ಫೇಲ್ ಆಗುತ್ತಿದ್ದಾರೆ: ರಾಹುಲ್ ಗಾಂಧಿ

- Advertisement -

Latest Posts

Don't Miss