National News: ಬೆಂಗಳೂರಿನಿಂದ ಚೆನ್ನೈಗೆ ಹೋಗುತ್ತಿದ್ದ ಇಂಡಿಗೋ ವಿಮಾನದಲ್ಲಿ ನೀಡಿದ್ದ ಸ್ಯಾಂಡ್‌ವಿಚ್‌ನಲ್ಲಿ ಬೋಲ್ಟ್ ಕಂಡುಬಂದಿದೆ.
ಈ ಸ್ಯಾಂಡ್‌ವಿಚ್ ತೆಗೆದುಕೊಂಡಿದ್ದ ಪ್ರಯಾಣಿಕರೇ, ಈ ಫೋಟೋವನ್ನು ಎಕ್ಸ್ ಖಾತೆಯಲ್ಲಿ ಶೇರ್ ಮಾಡಿ, ಬೇಸರ ವ್ಯಕ್ತಪಡಿಸಿದ್ದಾರೆ. ಪ್ರಯಾಣಿಸುವ ವೇಳೆ ಈ ವ್ಯಕ್ತಿಗೆ ಸ್ಪೀನಚ್ ಮತ್ತು ಕಾರ್ನ್ ಸ್ಯಾಂಡ್‌ವಿಚ್ ನೀಡಲಾಗಿತ್ತು. ಆದರೆ ಇವರು ಪ್ರಯಾಣಿಸುವ ವೇಳೆ ಸ್ಯಾಂಡ್‌ವಿಚ್ ತಿಂದಿರಲಿಲ್ಲ. ಆದರೆ ವಿಮಾನದಿಂದ ಇಳಿದ ಬಳಿಕ, ಇವರು ಸ್ಯಾಂಡ್‌ವಿಚ್ ತಿನ್ನಲು ಮುಂದಾದಾಗ, ಸ್ಯಾಂಡ್‌ವಿಚ್‌ನಲ್ಲಿ ಬೋಲ್ಟ್ ಪತ್ತೆಯಾಗಿದೆ.
ಈ ಬಗ್ಗೆ ಇಂಡಿಗೋ ಕಚೇರಿಗೆ ಕರೆ ಮಾಡಿ, ಕ್ಷಮೆ ಕೇಳಿ ಎಂದು ಆಗ್ರಹಿಸಿದಾಗ. ನೀವು ವಿಮಾನ ಚಲಿಸುವ ವೇಳೆಯೇ ಸ್ಯಾಂಡ್‌ವಿಚ್ ತಿಂದು. ಈ ಬಗ್ಗೆ ದೂರು ನೀಡಬೇಕಿತ್ತು. ವಿಮಾನ ಹಾರಾಟ ಮುಗಿದ ಮೇಲೆ, ಸ್ಯಾಂಡ್‌ವಿಚ್ ತಿಂದಿರುವುದರಿಂದ, ಈ ಆರೋಪವನ್ನು ನಾವು ಒಪ್ಪುವುದಿಲ್ಲವೆಂದು ಹೇಳಿದ್ದಾರೆ. ಇನ್ನು ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಇಂಡಿಗೋ ಬಗ್ಗೆ ಆಕ್ರೋಶ ಹೊರಹಾಕಿದ್ದು, ದಾಖಲೆ ಸಮೇತ ಕೇಸ್ ಹಾಕಿ, ಎಂದು ಆಗ್ರಹಿಸಿದ್ದಾರೆ.
ಈ ಹಿಂದೆ ವಿಮಾನದಲ್ಲಿ ನೀಡಿದ ಆಹಾರದಲ್ಲಿ ಹುಳ, ಹಲ್ಲಿ, ಕಲ್ಲು ಎಲ್ಲವೂ ಪತ್ತೆಯಾಗಿದೆ. ಇದೀಗ ಬೋಲ್ಟ್ ಪತ್ತೆಯಾಗಿದ್ದು, ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಇಂಥ ತಿಂಡಿಯನ್ನು ಮಕ್ಕಳಿಗೆ ತಿನ್ನಲು ಕೊಟ್ಟಾಗ, ಅವರು ಇದನ್ನು ತಿಂದರೆ ಏನು ಗತಿ ಎಂದು ಪ್ರಶ್ನಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ, ಇಂಡಿಗೋ ವಿಮಾನದಲ್ಲಿ ಸಸ್ಯಾಹಾರ ಕೇಳಿದ್ದ ಮಹಿಳೆಯೊಬ್ಬರಿಗೆ, ಸಸ್ಯಾಹಾರದಲ್ಲಿ ಮಾಂಸಾಹಾರ ನೀಡಿದ್ದಾರೆಂಬ ಆರೋಪ ಕೇಳಿ ಬಂದಿತ್ತು.
ರೈತರ ಮೇಲಿನ ದಾಳಿ ಖಂಡನೀಯ. ರೈತರಿಗೆ ಕನಿಷ್ಠ ಬೆಂಬಲ ಬೆಲೆ, ಇದು ʼಇಂಡಿಯಾʼ ಗ್ಯಾರಂಟಿ: ಡಿಸಿಎಂ ಡಿಕೆಶಿ