ತಾಲಿಬಾನ್ ಆಡಳಿತವಿರುವ ಅಫ್ಘಾನಿಸ್ತಾನದ ಧಾರ್ಮಿಕ ಶಾಲೆಯೊಂದರಲ್ಲಿ ಬಾಂಬ್ ಸ್ಪೋಟವಾಗಿದ್ದು, 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಸಮಂಗನ್ ರಾಜಧಾನಿ, ಐಬಕ್‌ನ ಅಲ್ ಜಿಹಾದ್ ಮದರಸಾದಲ್ಲಿ ಮಧ್ಯಾಹ್ನ ಪ್ರಾರ್ಥನೆ ನಡೆಯುವ ವೇಳೆ ಈ ಘಟನೆ ನಡೆದಿದೆ.
ನೀರು ಎಂದುಕೊಂಡು ಡಿಸೇಲ್ ಕುಡಿದು ಸಾವನ್ನಪ್ಪಿದ ಕಂದಮ್ಮ..
ಸ್ಥಳ ರಕ್ತ ಸಿಕ್ತವಾಗಿದ್ದು, ಅಲ್ಲಿರುವ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿದೆ. ಅಲ್ಲದೇ, ಇನ್ನೂ ಹಲವು ಮಕ್ಕಳು ಗಾಯಗೊಂಡು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ವರ್ಷ ಆಗಸ್ಟ್ನಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಬಂದಿದ್ದು, ಇದರ ನಂತರದಿಂದ ಇಸ್ಲಾಮಿಕ್ ಸ್ಟೇಟ್ ಗ್ಯಾಂಗ್‌ನ ಅಫ್ಘಾನ್ ಸಂಸ್ಥೆಯೊಂದು, ಪದೇ ಪದೇ ತೊಂದರೆ ಕೊಡುತ್ತಿದೆ ಎಂಬ ಆರೋಪ ಉಂಟು.
ಕೆ.ಜಿ.ಎಫ್ ತಾತನ ಆರೋಗ್ಯದಲ್ಲಿ ಏರುಪೇರು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ
ಹಾಗಾಗಿ ಈ ದಾಳಿಯನ್ನು ಅದೇ ಸಂಸ್ಥೆಯವರೇ ಮಾಡಿರಬೇಕೆಂದು ಇಲ್ಲಿನ ಸ್ಥಳೀಯರು ಆರೋಪಿಸಿದ್ದಾರೆ. ತಾಲಿಬಾನ್ ಸರ್ಕಾರಕ್ಕೆ ಒಳಗೊಂಡ ಶಾಲೆ, ಮದರಸಾ, ಕಂಪನಿ ಎಲ್ಲವನ್ನೂ ಈ ಟೇರರ್ ಸಂಸ್ಥೆ ಗುರಿಯಾಗಿಸಿಕೊಂಡಿದ್ದು, ಪದೇ ಪದೇ ತೊಂದರೆ ನೀಡುತ್ತಿದೆ. ಹಾಗಾಗಿ ದೇಶದೊಳಗಿನ ವಿರೋಧಿಗಳೇ ಈ ಕೆಲಸ ಮಾಡಿದ್ದೆಂದು ಅನುಮಾನ ವ್ಯಕ್ತವಾಗಿದೆ.