Hyderabad News: ನಿನ್ನೆಯಷ್ಟೇ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಚುನಾವಣೆ ನಡೆದಿದ್ದು, ಮತದಾನ ಮಾಡಲಾಗಿದೆ. ಮತದಾನ ಮಾಡುವ ವೇಳೆ ಮುಸ್ಲಿಂ ಮಹಿಳೆಗೆ ಬುರ್ಖಾ ತೆಗೆದು, ಮತದಾನ ಮಾಡು ಎಂದು ಹೇಳಿದ್ದಕ್ಕೆ, ಬಿಜೆಪಿ ಲೋಕಸಭಾ ಚುನಾವಣಾ ಸ್ಪರ್ಧಿ ಮಾಧವಿ ಲತಾ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ಮತಗಟ್ಟೆಗೆ ಮತದಾನ ಮಾಡಲು ಬಂದು ಕುಳಿತಿದ್ದ ಬುರ್ಖಾಧಾರಿ ಮಹಿಳೆಯರ ವೋಟರ್ ಐಡಿ ನೋಡಿ, ಬುರ್ಖಾ ತೆಗೆಯುವಂತೆ ಹೇಳಿದ್ದ ವೀಡಿಯೋ ವೈರಲ್ ಆಗಿತ್ತು. ಅಲ್ಲದೇ, ಆಧಾರ್ ಕಾರ್ಡ್ ಕೂಡ ಕೇಳಿದ್ದಾರೆ. ಈ ಕಾರಣಕ್ಕೆ ಮಾಧವಿ ಲತಾ ವಿರುದ್ಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಈ ಬಗ್ಗೆ ಮಾತನಾಡಿರುವ ಮಾಧವಿ ಲತಾ, ನಾನು ಓರ್ವ ಅಭ್ಯರ್ಥಿಯಾಗಿ, ಕಾನೂನಿನ ಪ್ರಕಾರ ನನ್ನ ಕರ್ತವ್ಯ ಮಾಡಿದ್ದೇನೆ. ನಾನು ಹೀಗೆ ಪರಿಶೀಲಿಸಿರುವುದರಲ್ಲಿ ಏನೂ ತಪ್ಪಿಲ್ಲ. ನಾನು ಮಹಿಳೆಯಾದ ಕಾರಣ, ಬುರ್ಖಾ ತೆಗೆಯಲು ಹೇಳಿದ್ದರಲ್ಲೇನೂ ತಪ್ಪಿಲ್ಲವೆಂದು ಮಾಧವಿ ಲತಾ ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ.
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆ ಅಧೋಗತಿಗೆ ಇಳಿದಿದೆ: ಪ್ರೀತಂಗೌಡ
ನಮ್ಮ ಶಾಸಕರು ಯಾರೂ ಮಾರಾಟವಾಗಲು ತಯಾರಿಲ್ಲ, ಆಪರೇಶನ್ ಕಮಲ ಬಿಜೆಪಿಯ ಹಗಲುಗನಸು: ಸಿಎಂ ಸಿದ್ದರಾಮಯ್ಯ