Bengaluru Crime News: ಪತಿಯೋರ್ವ ಪತ್ನಿಯನ್ನು ಕೊಂದು ದೇಹ ಕತ್ತರಿಸಿ ಸೂಟ್ ಕೇಸ್ ಗೆ ತುಂಬಿದ ನಡೆದಿರುವುದು ಬೆಳಕಿಗೆ ಬಂದಿದೆ. ಬೆಂಗಳೂರಲ್ಲಿ ನಡೆದಿರುವ ಈ ಘಟನೆಗೆ ನಗರವೇ ಬೆಚ್ಚಿ ಬಿದ್ದಿದೆ.
ಇನ್ನೂ ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಕನ್ನಹಳ್ಳಿಯಲ್ಲಿ ನಡೆದ ಘಟನೆ ಇದಾಗಿದ್ದು ಕೊಲೆಯಾದ ಪತ್ನಿಯ ಹೆಸರು ಗೌರಿ ಎಂದು ತಿಳಿದುಬಂದಿದೆ.ಇನ್ನೂ ಪತ್ನಿಯನ್ನು ಕೊಂದ ಪಾಪಿಯ ಹೆಸರು ರಾಕೇಶ್ ಎಂಬ ಮಾಹಿತಿ ಲಭ್ಯವಾಗಿದೆ. ಮೂಲತಃ ಮಹಾರಾಷ್ಟ್ರದವನಾಗಿರುವ ಪತಿಯಿಂದ ಈ ಕೃತ್ಯ ನಡೆಸಿದ್ದಾನೆ.
ಕೊಲೆಯಾದ ಮಹಿಳೆ ಪೋಷಕರಿಂದ ತಕ್ಷಣ ಸ್ಥಳಿಯ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಮಹಾರಾಷ್ಟ್ರ ಪೊಲೀಸರು ನೀಡಿರುವ ಮಾಹಿತಿಯನ್ನು ಆಧರಿಸಿ ಹುಳಿಮಾವು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ದೊಡ್ಡಕಲ್ಲನಹಳ್ಳಿಯ ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಕೊಲೆಯ ಬಗ್ಗೆ ತಾನೇ ಬಾಯಿಬಿಟ್ಟಿದ್ದ ಆರೋಪಿ..
ಇನ್ನೂ ಗಂಡ ರಾಕೇಶ್‌ನೇ ತನ್ನ ಹೆಂಡತಿ ಗೌರಿಯನ್ನು ಕೊಲೆ ಮಾಡಿ, ಆಕೆಯ ದೇಹವನ್ನು ತುಂಡರಿಸಿ ಸೂಟ್‌ಕೇಸ್‌ಗೆ ತುಂಬಿದ್ದಾನೆ. ಈ ಮೃತದೇಹವನ್ನು ಬೀಸಾಡಬೇಕು ಎಂದುಕೊಂಡಾಗ ಕೊಲೆ ಮಾಡಿದ ನಂತರ ಪಶ್ಚಾತ್ತಾಪದಿಂದ, ಹೆಂಡತಿ ಮನೆಯವರಿಗೆ ಕೊಲೆ ಮಾಡಿ, ಸೂಟ್‌ಕೇಸ್‌ಗೆ ತುಂಬಿದ್ದಾಗಿ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಮಹಾರಾಷ್ಟ್ರದಲ್ಲಿರುವ ಯುವತಿ ಗೌರಿ ಮನೆಯವರು ಮುಂಬೈ ಪೊಲೀಸರನ್ನು ಸಂಪರ್ಕ ಮಾಡಿದ್ದಾರೆ. ಆಗ ಮುಂಬೈ ಪೊಲೀಸರು ಬೆಂಗಳೂರು ಪೊಲೀಸರಿಗೆ ಮಾಹಿತಿ ರವಾನಿದ್ದಾರೆ.
ಸಂತೋಷದಿಂದಲೇ ಇದ್ದ ಗಂಡ ಹೆಂಡತಿ ನಡುವೆ ಇದ್ದಕ್ಕಿದ್ದಂತೆ ಜಗಳ ಆರಂಭವಾಗಿದ್ದು, ಗಂಡನೇ ತನ್ನ ಹೆಂಡತಿಯನ್ನು ಕೊಲೆ ಮಾಡಿ, ಆಕೆಯ ದೇಹವನ್ನು ತುಂಡರಿಸಿ ಸೂಟ್‌ಕೇಸ್‌ಗೆ ತುಂಬಿದ್ದಾನೆ.