Thursday, October 23, 2025

Latest Posts

ಕಾಂಗ್ರೆಸ್ ನಾಯಕನ ಗ್ಯಾರಂಟಿ ರದ್ದು ಹೇಳಿಕೆ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆ

- Advertisement -

Political News: ಕಾಂಗ್ರೆಸ್ ನಾಯಕ, ಮಾಗಡಿ ಶಾಸಕ ಬಾಲಕೃಷ್ಣ ಗ್ಯಾರಂಟಿ ವಾಪಸ್ ಪಡೆಯುವ ಮಾತನಾಡಿದ್ದು, ಈ ಬಗ್ಗೆ ಜೆಡಿಎಸ್ ನಾಯಕರು ಆಕ್ರೋಶ ಹೊರಹಾಕಿದ್ದು, ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದರು. ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರ್ ನೇತೃತ್ವದಲ್ಲಿ, ದೂರು ನೀಡಿದ್ದು, ಈ ಬಗ್ಗೆ ನಿಖಿಲ್ ಟ್ವೀಟ್ ಮಾಡಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋತರೆ ಈಗಾಗಲೇ ಜಾರಿ ಮಾಡಿರುವ ಐದು ಗ್ಯಾರೆಂಟಿಗಳು ರದ್ದಾಗುತ್ತವೆ ಎಂದು ಚುನಾವಣೆಗೆ ಮೊದಲೇ ಜನತೆಗೆ ಬ್ಲ್ಯಾಕ್ ಮೇಲ್ ಮಾಡಿರುವ ಮಾಗಡಿ ವಿಧಾನಸಭೆ ಕ್ಷೇತ್ರದ ಶಾಸಕರಾದ ಹೆಚ್.ಸಿ.ಬಾಲಕೃಷ್ಣ ಅವರ ವಿರುದ್ಧ ಚುನಾವಣಾ ಆಯೋಗಕ್ಕೆ ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ) ವತಿಯಿಂದ ದೂರು ನೀಡಲಾಯಿತು.

ಶಾಸಕರಾದ ಬಾಲಕೃಷ್ಣ ಅವರ ಶಾಸಕತ್ವವನ್ನು ರದ್ದು ಮಾಡಬೇಕು ಹಾಗೂ ಕಾಂಗ್ರೆಸ್ ಪಕ್ಷದ ಮಾನ್ಯತೆಯನ್ನೂ ರದ್ದುಪಡಿಸಬೇಕು ಎಂದು ಮುಖ್ಯ ಚುನಾವಣಾಧಿಕಾರಿಗಳಾದ ಶ್ರೀ ಮನೋಜ್ ಕುಮಾರ್ ಮೀನಾ ಅವರಿಗೆ ಮನವಿ ಸಲ್ಲಿಸಲಾಯಿತು.

ಶಾಸಕರಾದ ಶ್ರೀ ಸುರೇಶ್ ಬಾಬುರವರು, ಶ್ರೀಮತಿ ಕರೆಮ್ಮ ನಾಯಕ್ ಅವರು, ಶ್ರೀ ಹೆಚ್.ಟಿ.ಮಂಜುನಾಥ್ ಅವರು, ಶ್ರೀ ಹರೀಶ್ ಗೌಡರು, ಶ್ರೀ ಸ್ವರೂಪ್ ಪ್ರಕಾಶ್ ಅವರು ಎ.ಪಿ ರಂಗನಾಥ್ ಅವರು ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯರಾದ ಶ್ರೀ ಚೌಡರೆಡ್ಡಿ ತೂಪಲ್ಲಿರವರು , ಶ್ರೀ ರಮೇಶ್ ಗೌಡ ಸೇರಿ ಅನೇಕ ನಾಯಕರು ನನ್ನ ಜತೆಯಲ್ಲಿ ಇದ್ದರು ಎಂದು ನಿಖಿಲ್ ಟ್ವೀಟ್ ಮಾಡಿದ್ದರು.

11 ದಿನದಲ್ಲಿ 25 ಲಕ್ಷ ಜನರಿಂದ ಬಾಲಕರಾಮನ ದರ್ಶನ: 11 ಕೋಟಿ ಕಾಣಿಕೆ ಸಂಗ್ರಹ

ಬಾಲಿವುಡ್ ನಟಿ, ಮಾಡೆಲ್ ಪೂನಂ ಪಾಂಡೆ ನಿಧನ

ವಿವಾದದ ಬಳಿಕ ಫೋಟೋ ಶೇರ್ ಮಾಡಿದ ಪವಿತ್ರಾಗೌಡ: ಎಲ್ಲರ ಕಣ್ಣು ಟ್ಯಾಟೂ ಮೇಲೆ

- Advertisement -

Latest Posts

Don't Miss