Political News: ಧಾರವಾಡ: ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಮೂಲಕ ಬರದಿಂದ ತತ್ತಿರಿಸಿ ಹೋಗಿರುವ ಕರುನಾಡಿನ ಜನರ ಸಮಸ್ಯೆಗೆ ಮಿಡಿಯುವ ಮೂಲಕ ಹಾಲಿ ಶಾಸಕ ಹಾಗೂ ಮಾಜಿ ಸಚಿವ ವಿನಯ ಕುಲಕರ್ಣಿ ಇಡಿ ರಾಜ್ಯಕ್ಕೆ ಮಾದರಿಯಾಗಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಿ ಸಹಾಯ ಮಾಡಿ ಎನ್ನುವ ಮೂಲಕ ಬಡವರ ಪರ ಕಾಳಜಿ ಮೆರೆದಿದ್ದಾರೆ.
ನನ್ನ ಜನ್ಮದಿನದಂದು ಯಾರು ಕೂಡ ಪೇಟಾ, ಶಾಲು, ಹಾರ, ತುರಾಯಿ ತಂದು ದುಂದು ವೆಚ್ಚ ಮಾಡಬೇಡಿ ಎಂದು ಪೋಸ್ಟರ್ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ.
ಕ್ಷೇತ್ರದಿಂದ ಹೊರಗಿದ್ದರೂ ಕೂಡ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಜನನಾಯಕ ಮಾಜಿ ಸಚಿವ ಹಾಗೂ ಧಾರವಾಡದ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ.
ವಿನಯ ಕುಲಕರ್ಣಿ ಅವರಿಗೆ ನವೆಂಬರ್ 7 ಅಂದ್ರೆ ಇವರ ಲಕ್ಕಿ ನಂಬರ್. ಏಕೆಂದ್ರೆ ಇದು ಅವರ ಜನ್ಮದಿನದ ನಂಬರ್. ಹೀಗಾಗಿ ತಾವು ತಿರುಗಾಡುವ ವಾಹನಗಳ ಸಂಖ್ಯೆಯಲ್ಲಿಯೂ 0711 ನಂಬರ್ ಇದ್ದೆ ಇರುತ್ತೆ.
ಹೀಗಾಗಿ ಈ ಬಾರಿ ವಿಶೇಷ ದಿನದಂದು ಅಭಿಮಾನಿಗಳಿಗೆ ಕಾರ್ಯಕರ್ತರಿಗೆ ಕಾಂಗ್ರೆಸ್ ಶಾಸಕರು ಹೊಸದಾಗಿ ವಿಭಿನ್ನವಾಗಿ ಮನವಿ ಮಾಡಿದ್ದಾರೆ.
ಕಳೆದ ಬಾರಿ ಕ್ಷೇತ್ರದಿಂದ ಹೊರಗಿದ್ದರೂ ಕೂಡ ಕಿತ್ತೂರಿನಲ್ಲಿ ಅದ್ದೂರಿಯಾಗಿ ಅಭಿಮಾನಿಗಳು ವಿನಯ ಕುಲಕರ್ಣಿ ಅವರ ಬರ್ತಡೆ ಆಚರಿಸಿದ್ದರು.
ಇದಕ್ಕಾಗಿ ಸಿದ್ದರಾಮಯ್ಯಾ, ಡಿಕೆ ಶಿವಕುಮಾರ ಇಬ್ಬರು ಜೋತೆಯಾಗಿ ಬರ್ತಡೆ ವಿಶ್ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
‘ಅವರಲ್ಲಿ ಹೊಂದಾಣಿಕೆ ಇಲ್ಲ ಅನ್ನೋದು ಗೊತ್ತಾಗ್ತಿದೆ. ಬೆಳಗ್ಗೆ ಎದ್ರೆ ನಾಯಿ, ನರಿ ತರ ಕಿತ್ತಾಡ್ತಿದ್ದಾರೆ’
‘ಆ ನಾಲ್ಕು ಜನರ ನಡುವೆ ಜಗಳ ಹಚ್ಚಿ, ಸಿದ್ದರಾಮಯ್ಯ ಸಿಎಂ ಆಗಿರಬೇಕು ಅಂದುಕೊಂಡಿದ್ದಾರೆ’

