ಮೆಹಬೂಬ್ ನಗರ (ತೆಲಂಗಾಣ): ತನ್ನ ಪತ್ನಿಯ ಜತೆ ಅಕ್ರಮ ಸಂಬಂಧ ಹೊಂದಿದ್ದ ಪೊಲೀಸ್ ಇನ್ಸ್ಟೆಕ್ಟರ್ ಒಬ್ಬರ ಮರ್ಮಾಂಗಕ್ಕೆ ಚೂರಿಯಿಂದ ಚುಚ್ಚಿ ಕತ್ತರಿಸಿದ ಘಟನೆ ತೆಲಂಗಾಣ ರಾಜ್ಯ ಮೆಬಬೂಬ್ ನಗರ ಜಿಲ್ಲೆಯಲ್ಲಿ ನಡೆದಿದೆ. ಒಂದೇ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರ ನಡುವಿನ ಗಲಾಟೆ ಇದಾಗಿದ್ದರೂ, ಪ್ರಕರಣ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ.
ಮೆಹಬೂಬ್ನಗರ ಠಾಣೆಯ ಇನ್ಸ್ಪೆಕ್ಟರ್ ಇಫ್ತಿಕಾರ್ ಹಲ್ಲೆಗೊಳಗಾದವು. ಕಾನ್ಸ್ಟೇಬಲ್ ಜಗದೀಶ್ ಆರೋಪಿಯಾಗಿದ್ದಾರೆ. ಗುರುವಾರ ಬೆಳಗ್ಗೆ ಇಫ್ತಿಕಾರ್ ಅವರ ಕೊಠಡಿಗೆ ತೆರಳಿದ್ದ ಜಗದೀಶ್ ಏಕಾಏಕಿ ಅವರ ಮರ್ಮಾಂಗಕ್ಕೆ ಚೂರಿ ಹಾಕಿದ್ದಾರೆ. ಜತೆಗೆ ದೇಹದ ಹಲವೆಡೆಗೆ ಚುಚ್ಚಿ ಗಾಯಗೊಳಿಸಿದ್ದಾರೆ. ಗದ್ದಲ ಕೇಳಿದ ಉಳಿದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಅವರನ್ನು ಇಫ್ತಿಕಾರ್ ಅವರನ್ನು ಜಗದೀಶ್ನ ಕೋಪದ ಕೈಯಿಂದ ಬಿಡಿಸಿ ಹೈದರಾಬಾದ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಜಗದೀಶ್ನ ಪತ್ನಿಯೂ ಪೊಲೀಸ್ ಕಾನ್ಸ್ಟಬಲ್ ಆಗಿದ್ದಾರೆ. ಆಕೆಯ ಜತೆಗೆ ಇಫ್ತಿಕಾರ್ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಜಗದೀಶ್ ಸಂಶಯಿಸಿದ್ದ. ಈ ವಿಚಾರದಲ್ಲಿ ಸಿಟ್ಟಿಗೆದ್ದ ಆತ ಚೂರಿಯಿಂದ ಇರಿದಿದ್ದಾನೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಸರ್ಕಾರಿ ಶಾಲೆಯ ಮಕ್ಕಳ ಅಭಿವೃದ್ಧಿಯತ್ತ ಚಿತ್ತಹರಿಸಿದ ಕಾಂಗ್ರೆಸ ಶಾಸಕ
‘ಅವರಲ್ಲಿ ಹೊಂದಾಣಿಕೆ ಇಲ್ಲ ಅನ್ನೋದು ಗೊತ್ತಾಗ್ತಿದೆ. ಬೆಳಗ್ಗೆ ಎದ್ರೆ ನಾಯಿ, ನರಿ ತರ ಕಿತ್ತಾಡ್ತಿದ್ದಾರೆ’
‘ಆ ನಾಲ್ಕು ಜನರ ನಡುವೆ ಜಗಳ ಹಚ್ಚಿ, ಸಿದ್ದರಾಮಯ್ಯ ಸಿಎಂ ಆಗಿರಬೇಕು ಅಂದುಕೊಂಡಿದ್ದಾರೆ’

