Monday, December 23, 2024

Latest Posts

ಶಾಲೆಯಲ್ಲಿ ಅಡುಗೆಗೆಂದು ಇಟ್ಟಿದ್ದ ಕುಕ್ಕರ್ ಸ್ಫೋಟ

- Advertisement -

ಕಂಪ್ಲಿ: ಅಡುಗೆಗೆಂದು ಒಲೆಯ ಮೇಲಿಟ್ಟಿದ್ದ ಕುಕ್ಕರ್ ಒಂದು ಸ್ಫೋಟಗೊಂಡ ಘಟನೆ ತಾಲೂಕಿನ ಮೆಟ್ರಿ ಗ್ರಾಮದ ಹೊನ್ನಳ್ಳಿ ಸಿದ್ದಪ್ಪನವರ ಪಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಶಾಲೆಯ ಬಿಸಿಯೂಟ ಅಡುಗೆ ಕೊಠಡಿಯಲ್ಲಿ ಗ್ಯಾಸ್ ಒಲೆ ಮೇಲೆ 20 ಲೀಟರ್ ಕುಕ್ಕರ್‌ನಲ್ಲಿ 3 ಸೇರು ತೊಗರಿಬೇಳೆ ಬೇಯಿಸುತ್ತಿದ್ದಾಗ ವಿಜಿಲ್ ಬಾರದೇ ಏಕಾಏಕಿ ಸ್ಫೋಟಗೊಂಡಿತು ಅದರಿಂದ ಕೊಠಡಿಯ ಚಾವಣಿ, ಅಕ್ಕಪಕ್ಕದ ಗೋಡೆಗೆ ತೊಗರಿಬೇಳೆ ಸಿಡಿದಿರುವುದು ಕಂಡು ಬಂತು. ಇನ್ನು ಅಡುಗೆ ಕೆಲಸದಲ್ಲಿ ತೊಡಗಿಕೊಂಡಿದ್ದ ಲೋಕಮ್ಮ ಎಂಬುವವರ ಮುಖಕ್ಕೆ ಬಿಸಿನೀರು ಸಿಡಿದಿದೆ. ಇನ್ನುಳಿದ ಮೂವರು ಅಡುಗೆಯವರು ತಕ್ಷಣ ಹೊರಗಡೆ ಬಂದಿದ್ದು ಅಪಾಯದಿಂದ ಪಾರಾಗಿದ್ದಾರೆ.

ಬಿಸಿಯೂಟ ತಯಾರಿಸುವ ಪಾತ್ರೆ, ಇತರೆ ಸಾಮಾನುಗಳು ತುಂಬಾ ಹಳತಾಗಿವೆ. ಸುಸ್ಥಿತಿಯಲ್ಲಿ ಇಲ್ಲದ ಕಾರಣ ಒಂದಿಲ್ಲೊಂದು ಸಮಸ್ಯೆ ಎದುರಿಸುವಂತಾಗಿದೆ. 600 ವಿದ್ಯಾರ್ಥಿಗಳು ಇಲ್ಲಿ ಅಭ್ಯಾಸ ಮಾಡುತ್ತಿದ್ದು, ಶಿಕ್ಷಕರು ಪಾಠದ ಕಡೆ ಗಮನಹರಿಸಲು ಆಗದೇ ಬಿಸಿಯೂಟದ ಕಡೆಗೆ ಹೆಚ್ಚಿನ ಲಕ್ಷ್ಯ ಕೊಡಬೇಕಾದ ಸ್ಥಿತಿ ಇದೆ. ಶಿಕ್ಷಕರು ಶಾಲೆಯಲ್ಲಿ ಗುಣಾತ್ಮಕ ಶಿಕ್ಷಣ ನೀಡಲು ಇಸ್ಕಾನ್ ಬಿಸಿಯೂಟ ಸೌಲಭ್ಯ ಒದಗಿಸಬೇಕು ಎಂದು ಎಸ್ ಡಿ ಎಂ ಸಿ ಅಧ್ಯಕ್ಷ ಎಚ್. ಜಗದೀಶ್ ಸೇರಿದಂತೆ ಗ್ರಾಮದ ಮುಖಂಡರು ಒತ್ತಾಯಿಸಿದ್ದಾರೆ.

ಸಂಸದ ತೇಜಸ್ವಿ ಸೂರ್ಯ, ಡಿಸಿಎಂ ಡಿಕೆಶಿಯವರನ್ನು ಯಾಕೆ ಭೇಟಿಯಾಗಿದ್ದು ಗೊತ್ತಾ..?

ಸತೀಶ್ ಜಾರಕಿಹೊಳಿ-ಡಿಕೆ ಸುರೇಶ್ ಮಹತ್ವದ ಭೇಟಿ! ಮಾತುಕತೆ ಬಳಿಕ ಡಿಕೆ ಬ್ರದರ್ ಅಂದಿದ್ದೇನು ಗೊತ್ತಾ?

‘ಕಾಂಗ್ರೆಸ್ ಸೇಡಿನ ರಾಜಕೀಯ ಮಾಡುತ್ತಿದೆ, ಈ ತಿಂಗಳ ಅಂತ್ಯದಲ್ಲಿ ಮೂರು ದಿನ ಸತ್ಯಾಗ್ರಹ ಮಾಡುತ್ತೇನೆ ‘

- Advertisement -

Latest Posts

Don't Miss