Kerala: ಯೂಟ್ಯೂಬ್‌ಗೆ ತಮ್ಮ ದೈನಂದಿನ ವ್ಲಾಗ್ ಅಪ್ಲೋಡ್ ಮಾಡಿದ ದಂಪತಿ ಕೆಲ ಸಮಯದಲ್ಲೇ ಸಾವಿಗೀಡಾದ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ.
ಸೆಲ್ವರಾಜ್(45) ಮತ್ತು ಅವರ ಪತ್ನಿ ಪ್ರಿಯಾ (37) ಇಬ್ಬರೂ ಯೂಟ್ಯೂಬ್‌ನಲ್ಲಿ ಪ್ಲಾಗ್ ಮಾಡಿ ಹಾಕುತ್ತಿದ್ದರು. ಆದರೆ ಭಾನುವಾರ ವ್ಲಾಗ್ ಅಪ್ಲೋಡ್ ಮಾಡಿದ ಕೆಲ ಗಂಟೆಗಳಲ್ಲೇ, ಅನುಮಾನಾಸ್ಪದವಾಗಿ ಇಬ್ಬರೂ ಸಾವನ್ನಪ್ಪಿದ್ದಾರೆ.
ಈ ದಂಪತಿಯ ಪುತ್ರ ಮನೆಗೆ ಬಂದು ನೋಡಿದಾಗ, ತಾಯಿ ಬೆಡ್ ಮೇಲೆ ಬಿದ್ದಿದ್ದು, ತಂದೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಬಿದ್ದದ್ದರು ಎನ್ನಲಾಗಿದೆ. ಈ ದೃಶ್ಯ ನೋಡಿದ ಬಳಿಕ ಪುತ್ರ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ತಕ್ಷಣ ಮನೆಗೆ ಬಂದ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ.
ತನಿಖೆಯಲ್ಲಿ ಆತ್ಮಹತ್ಯೆ ಪ್ರಕರಣ ಎಂದದು ತಿಳಿದುಬಂದಿದ್ದು, ಪ್ರಿಯಾ ಕುತ್ತಿಗೆ ಹಿಸುಕಿದಂತೆ, ಕೈ ಅಚ್ಚು ಕಂಡಿದೆ. ಹಾಗಾಗಿ ಕೊಲೆ ಎನ್ನುವ ಆಯಾಮದಲ್ಲೂ ಇದನ್ನು ತನಿಖೆ ಮಾಡಲಾಗುತ್ತಿದೆ. ಕೌಟುಂಬಿಕ ಕಲಹ ಕಾರಣ, ಪತ್ನಿಯನ್ನು ಕೊಂದು, ಬಳಿಕ ಸೆಲ್ವರಾಜ್ ತಾನೂ ಆತ್ಮಹತ್ಯೆಗೆ ಶರಣಾಗಿರಬಹುದೆಂದು ಶಂಕಿಸಲಾಗಿದೆ. ಶವ ಬೇರೆ ಬೇರೆ ರೂಮ್‌ನಲ್ಲಿ ಪತ್ತೆಯಾಗಿದ್ದು, ಸಾವಿಗೂ ಮುನ್ನ ಅವರು ಅಪ್ಲೋಡ್ ಮಾಡಿದ್ದ ವ್ಲಾಗ್‌ನಲ್ಲಿ ವಿದಾಯದ ಹಾಡನ್ನೂ ಹಾಕಲಾಗಿತ್ತು. ಹಾಗಾಗಿ ಇಬ್ಬರೂ ವ್ಲಾಗ್ ಮಾಡುವಾಗಲೇ, ಸಾವನ್ನಪ್ಪಬೇಕು ಎಂದು ನಿರ್ಧರಿಸಿರಬೇಕು ಎಂದು ಅಂದಾಜಿಸಲಾಗಿದೆ.
ಏಕೆಂದರೆ ಅವರು ಅಪ್ಲೋಡ್ ಮಾಡಿದ್ದ ವೀಡಿಯೋದಲ್ಲಿ ತಾವು ಜೀವನಕ್ಕೆ ವಿದಾಯ ಹೇಳುತ್ತಿದ್ದೇವೆ ಎಂಬ ರೀತಿ ತಮ್ಮ ಎಲ್ಲ ಫೋಟೋಗಳನ್ನು ಅಪ್ಲೋಡ್ ಮಾಡಿ, ಅದಕ್ಕೆ ವಿದಾಯದ ಹಾಡು ಹಾಕಿದ್ದರು.
ಸೆಲ್ವರಾಜ್ ಮೇಸ್ತ್ರಿ ಕೆಲಸ ಮಾಡುತ್ತಿದ್ದು, ಪ್ರಿಯಾ ಕೂಡ ಕೆಲಸ ಮಾಡುತ್ತಿದ್ದರು. ಸೆಲ್ಲು ಫ್ಯಾಮಿಲಿ ಎಂಬ ವ್ಲಾಗ್ ಅಪ್ಲೋಡ್ ಮಾಡಿ, ರೆಸಿಪಿ ಸೇರಿ ಬೇರೆ ಬೇರೆ ವಿಷಯದ ಬಗ್ಗೆ ಮಾತನಾಡುತ್ತಿದ್ದರು.