Wednesday, November 13, 2024

Latest Posts

ಬಿಹಾರ ಸಂಸದ ಪಪ್ಪು ಯಾದವ್‌ಗೆ ಬಿಷ್ಣೋಯ್ ಗ್ಯಾಂಗ್‌ನಿಂದ ಎಚ್ಚರಿಕೆ..!

- Advertisement -

Bollywood News: ಸಲ್ಮಾನ್ ಖಾನ್ ವಿರುದ್ಧ ದ್ವೇಷ ಸಾಧಿಸುತ್ತಿರುವ ಬಿಷ್ಣೋಯ್ ಗ್ಯಾಂಗ್, ಸಲ್ಮಾನ್ ಖಾನ್‌ಗೆ ಯಾರ್ಯಾರು ಸಪೋರ್ಟ್ ಮಾಡುತ್ತಿದ್ದಾರೋ, ಅವರ ವಿರುದ್ಧವೂ ಹಗೆ ಸಾಧಿಸುತ್ತಿದ್ದಾರೆ. ಆ ಕಾರಣಕ್ಕೆಯೇ ಬಾಬಾ ಸಿದ್ಧಕಿಯ ಹತ್ಯೆ ಮಾಡಿದ್ದಾರೆ ಬಿಷ್ಣೋಯ್ ಗ್ಯಾಂಗ್. ಇದೀಗ ಬಿಹಾರ ಸಂಸದ ಪಪ್ಪು ಯಾದವ್ ಸಲ್ಮಾನ್ ಖಾನ್‌ ಬೆಂಬಲಕ್ಕೆ ನಿಂತಿದ್ದು, ನಿಮ್ಮ ಜೀವ ಉಳಿಯಬೇಕು ಎಂದರೆ, ಸಲ್ಮಾನ್‌ ಖಾನ್‌ನಿಂದ ದೂರವಿರಿ ಎಂದು ಬಿಷ್ಣೋಯ್ ಗ್ಯಾಂಗ್ ಎಚ್ಚರಿಕೆ ನೀಡಿದೆ.

ಅಲ್ಲದೇ, ಸಲ್ಮಾನ್ ಖಾನ್‌ನಿಂದ ದೂರವಿರುವುದು ನಿಮಗೆ ಒಳ್ಳೆಯದು. ಇಲ್ಲದಿದ್ದರೆ, ನಿಮ್ಮನ್ನೂ ನಾವು ಕೊಲ್ಲುತ್ತೇವೆ ಎಂದು ಬಿಷ್ಣೋಯ್ ಗ್ಯಾಂಗ್ ತಿಳಿಸಿದೆ. ಇದಕ್ಕೆ ಒಂದು ಕಾರಣವೂ ಇದೆ. ಅದೇನೆಂದರೆ, ಬಾಬಾ ಸಿದ್ಧಕಿ ಹತ್ಯೆಯಾದಾಗ, ಈ ಹತ್ಯೆ ತಾವು ಮಾಡಿದ್ದು ಎಂದು ಬಿಷ್ಣೋಯ್ ಗ್ಯಾಂಗ್ ಹೇಳಿಕೆ ಕೊಟ್ಟಿತ್ತು.

ಆಗ ಪಪ್ಪು ಯಾದವ್, ನಮಗೆ ಅವಕಾಶ ಕೊಟ್ಟರೆ, ಬಿಷ್ಣೋಯ್ ಗ್ಯಾಂಗ್‌ನ್ನು ನಾವು ಹತ್ತಿಕ್ಕುತ್ತೇವೆ ಎಂದಿದ್ದರು. ಹಾಗಾಗಿಯೇ ಸಲ್ಮಾನ್ ಖಾನ್‌ನಿಂದ ದೂರವಿರಿ, ನಾವು ನಿಮ್ಮ ಮೇಲೆ ಕಣ್ಣಿಟ್ಟಿದ್ದೇವೆ. ಸಲ್ಮಾನ್ ಖಾನ್‌ನ್ನು ಹೆಚ್ಚು ಬೆಂಬಲಿಸಿದರೆ, ನಿಮ್ಮನ್ನೂ ಕೊಲ್ಲಲಿದ್ದೇವೆ ಎಂದು ಬೆದರಿಕೆ ಹಾಕಿದ್ದಾರೆ.

ಇನ್ನು ಪಪ್ಪು ಯಾದವ್‌ಗೆ ಈ ಸಂದೇಶ ಬರುತ್ತಿದ್ದಂತೆ, ಪೊಲೀಸ್ ಠಾಣೆಯಲ್ಲಿ ಬಿಷ್ಣೋಯ್ ಗ್ಯಾಂಗ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ, ಬಾಬಾ ಸಿದ್ಧಕಿ ಕೊಲೆಯಾಗಿದೆ. ಇದೀಗ ನನಗೆ ಜೀವ ಬೆದರಿಕೆ ಬಂದಿದೆ. ನಮಗೇ ಹೀಗಾದರೆ, ಸಾಮಾನ್ಯರ ಗತಿ ಏನು ಎಂದು ಪಪ್ಪು ಯಾದವ್ ಪ್ರಶ್ನಿಸಿದ್ದಾರೆ.

- Advertisement -

Latest Posts

Don't Miss