National News: ಆಗ್ರಾದಲ್ಲಿ ಸೊಸೆಯೊಬ್ಬಳು, ತನ್ನ ಅತ್ತೆ ತನ್ನ ಮೇಕಪ್ ಕಿಟ್ ಬಳಸಿದ್ದಕ್ಕೆ ಕೋಪಗೊಂಡು, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಘಟನೆ ನಡೆದಿದೆ.
ಒಂದೇ ಮನೆಯ ಇಬ್ಬರು ಸಹೋದರರಿಗೆ ಇಬ್ಬರು ಸಹೋದರಿಯರನ್ನು ಮದುವೆ ಮಾಡಿಕೊಡಲಾಗಿತ್ತು. ಈ ಮನೆಯಲ್ಲಿನ ಸಮಸ್ಯೆ ಅಂದ್ರೆ ಅತ್ತೆಯ ಬಳಿ ಮೇಕಪ್ ಕಿಟ್ ಇಲ್ಲದ ಕಾರಣ, ಅತ್ತೆ ತನ್ನ ಸೊಸೆಯಂದಿರ ಮೇಕಪ್ ಕಿಟ್ ಬಳಸಿದ್ದಾರೆ. ಅದರಲ್ಲೂ ಸೊಸೆಯ ಪರ್ಮಿಷನ್ ತೆಗೆದುಕೊಳ್ಳದೇ, ಅತ್ತೆ ಮೇಕಪ್ ಕಿಟ್ ಬಳಸಿದ್ದಾರೆ. ಇದಕ್ಕೆ ಸಿಟ್ಟಾದ ಸೊಸೆ, ಅತ್ತೆ ಮತ್ತು ಗಂಡನೊಂದಿಗೆ ಜಗಳವಾಡಿದ್ದಾಳೆ.
ಜಗಳ ವಿಕೋಪಕ್ಕೇರಿ, ಪತಿ ಈಕೆಯನ್ನು ಮತ್ತು ಇನ್ನೋರ್ವ ಸಹೋದರಿಯನ್ನೂ ಮನೆಯಿಂದ ಹೊರಹಾಕಿದ್ದಾನೆಂದು, ಈ ಸೊಸೆ ಆರೋಪಿಸಿದ್ದಾಳೆ. ಅಲ್ಲದೇ, ತನ್ನ ಅತ್ತೆ ಹೊರಗೆ ಹೋಗುವಾಗ ಮಾತ್ರ ಮೇಕಪ್ ಕಿಟ್ ಬಳಸಿದರೆ ಸಮಸ್ಯೆಯಾಗುತ್ತಿರಲಿಲ್ಲ. ಆಕೆ ಮನೆಯಲ್ಲಿ ಇದ್ದಾಗಲೂ ಮೇಕಪ್ ಕಿಟ್ ಬಳಸುತ್ತಾರೆ. ಹಾಗಾಗಿ ನನಗೆ ಕೋಪ ಬಂದು ಜಗಳವಾಡಿದೆ ಎಂದು ಸೊಸೆ ಹೇಳಿದ್ದಾಳೆ.
ಈ ಜಗಳ ನಡೆದು ಎರಡು ತಿಂಗಳಾಗಿದೆ. ಎರಡು ತಿಂಗಳಿನಿಂದ ಸಹೋದರಿಯರು ತವರು ಮನೆಯಲ್ಲೇ ಇದ್ದಾರೆ. ಈ ಸಹೋದರಿಯರು ಮತ್ತು ಅತ್ತೆ, ಪತಿಯನ್ನು ಕರೆಸಿ, ಕೌನ್ಸೆಲಿಂಗ್ ಮಾಡಿದರೂ ಕೂಡ, ಸೊಸೆಯಂದಿರು ಗಂಡನ ಮನೆಗೆ ಹೋಗಲು ತಯಾರಿಲ್ಲ. ಏಕೆಂದರೆ, ಬರಿ ಮೇಕಪ್ ಕಿಟ್ ವಿಷಯವಷ್ಟೇ ಅಲ್ಲದೇ, ಪತಿ ಅಮ್ಮನ ಮಾತು ಕೇಳಿ ತಮ್ಮ ಮೇಲೆ ದೌರ್ಜನ್ಯವೆಸಗಿಸಿದ್ದಾರೆಂದು ಮಹಿಳೆಯರು ದೂರಿದ್ದಾರೆ.
‘ನಾನು ಕೇಸರಿ ಶಾಲು ಹಾಕಿದ್ದೇ ತಪ್ಪಾ? ದಲಿತರ ಕಾರ್ಯಕ್ರಮದಲ್ಲಿ ನೀಲಿ ಶಾಲು ಹಾಕ್ತೀನಿ. ಫೋಟೋ ಬೇಕಾ?’
ಡ್ರೋನ್ ಪ್ರತಾಪ್ ವಿನ್ನರ್ ಆಗದ ಕಾರಣ, ಚಾಲೆಂಜ್ ಸೋತ ಅಭಿಮಾನಿ: ಅರ್ಧ ಗಡ್ಡ, ಮೀಸೆಗೆ ಕತ್ತರಿ
ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಯ ತಲೆಗೆ 50 ಬಾರಿ ಸುತ್ತಿಗೆಯಿಂದ ಬಡಿದು ಕೊಲೆ