Hubballi News: ಹುಬ್ಬಳ್ಳಿ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ದಿನಗಣನೇ ಆರಂಭ ಆಗುತ್ತಿದ್ದಂತೆ, ದೇಶದಲ್ಲಿ ಎಲ್ಲಿಲ್ಲದ ಸಡಗರ ಸಂಭ್ರಮ ಮನೆಮಾಡಿದೆ. ಅದರಂತೆ ಹುಬ್ಬಳ್ಳಿಯಲ್ಲಿ ಯುವಕನೊಬ್ಬ ತನ್ನ ಕಾರಿಗೆ ಸಂಪೂರ್ಣವಾಗಿ ರಾಮ, ಹನುಮಂತನ ಸ್ಟಿಕ್ಕರ್ ಮಾಡಿಸಿ, ತನ್ನ ಭಕ್ತಿಯನ್ನು ವ್ಯಕ್ತಪಡಿಸಿದ್ದಾನೆ.
ಹೌದು, ನಗರದ ಹೊಸೂರಿನ ನಿವಾಸಿಯಾಗಿರುವ ಸಚಿನ್ ಮಿಸ್ಕಿನ್ ರಾಮಭಕ್ತನಾಗಿದ್ದು, ಈ ಹಿಂದಿನಿಂದಲೂ ಹಿಂದೂ ಧಾರ್ಮಿಕ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಿದ್ದ. ಈತ ಇದೀಗ ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಮಾಡುತ್ತಿರುವ ಹಿನ್ನೆಲೆಯಲ್ಲಿ, ತನ್ನ ಕಾರಿಗೆ ಸಂಪೂರ್ಣವಾಗಿ ಜೈಶ್ರೀರಾಮ ಘೋಷಣೆಗಳು, ಹನುಮಂತ, ರಾಮನ ಭಾವಚಿತ್ರದ ಸ್ಟಿಕ್ಕರ್ ಹಚ್ಚುವ ಮೂಲಕ ತನ್ನ ವಿಶೇಷ ಅಭಿಮಾನವನ್ನು ತೋರಿಸಿದ್ದಾನೆ. ಇನ್ನೂ ಈತನ ಈ ಕಾರ್ಯಕ್ಕೆ ಸ್ಥಳೀಯರು ಸಹ ಸಾಥ್ ನೀಡಿದ್ದು, ಕಮರಿಪೇಟೆ ಸರ್ಕಲ್ ಬಳಿ 20 ಫುಟ್’ನ ಬ್ಯಾನರ್ ನಿರ್ಮಿಸಿದ್ದಾರೆ. ನಾಳೆಯಿಂದ ಸಚಿನ್ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ತನ್ನ ಕಾರನ್ನು ಓಡಾಡಿಸುವ ಮೂಲಕ ಶ್ರೀರಾಮನ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಲಿದ್ದಾರೆ.
ಶಾನುಬೋಗರ ಮಾತು ಕೇಳಿದ್ದರೆ ನಾನು ಕುರಿ ಕಾಯ್ಕೊಂಡು ಇರಬೇಕಾಗಿತ್ತು: ಸಿಎಂ ಸಿದ್ದರಾಮಯ್ಯ
‘ನನ್ನ ಕನಸಿನಲ್ಲಿ ಬಂದ ರಾಮ, ನಾನು ಜ.22ರಂದು ಅಯೋಧ್ಯೆಗೆ ಹೋಗುವುದಿಲ್ಲವೆಂದು ಹೇಳಿದ್ದಾನೆ’