- Advertisement -
Hubballi News: ಹುಬ್ಬಳ್ಳಿ: ಭಕ್ತರೊಂದಿಗೆ ಪಾದಯಾತ್ರೆ ಮಾಡುತ್ತಾ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೊರಟ ನಾಯಿಯೊಂದು ಎಲ್ಲರ ಗಮನ ಸೆಳೆದಿದೆ. ಹುಬ್ಬಳ್ಳಿಯ ಉಣಕಲ್ ನಿವಾಸಿಗಳು ಕಳೆದ ಮೂರು ದಿನಗಳ ಹಿಂದೆ ತಿರುಪತಿಗೆ ಪಾದಯಾತ್ರೆ ಹೊರಟಿದ್ದರು. ಇವರ ಜೊತೆ ನಾಯಿಯೊಂದು ಸಹ ಅತ್ತಿತ್ತ ಕದಲದೇ ಹೆಜ್ಜೆ ಹಾಕುತ್ತಿದೆ.
ಹುಬ್ಬಳ್ಳಿಯ ಮಂಜನಾಥ್ ರೆಡ್ಡಿ ಕಿರೇಸೂರ ಸ್ನೇಹ ಬಳಗದಿಂದ ಪಾದಯಾತ್ರೆ ಸಾಗಿದೆ. ಉಣಕಲ್‌ನಿಂದ ತಿರುಪತಿಗೆ ಪಾದಯಾತ್ರೆ ಹೊರಟ ಸ್ನೇಹಿತರ ಜೊತೆಗೆ ಶ್ವಾನವೂ ದೇವರ ದರ್ಶನಕ್ಕೆ ಹೊರಟಿದೆ.
ಮೂರು ದಿನಗಳಿಂದ ಜೊತೆ ಜೊತೆಗೆ ಹೆಜ್ಜೆ
ಕಳೆದ ಮೂರು ದಿನಗಳಿಂದ ಪಾದಯಾತ್ರೆ ಮಾಡುವ ಭಕ್ತರೊಂದಿಗೆ ಶ್ವಾನ ಹೆಜ್ಜೆ ಹಾಕುತ್ತಿದೆ. ಭಕ್ತರ ಹೆಜ್ಜೆಗೆ ಹೆಜ್ಜೆಯಾಗಿ ಹೊರಟ ಶ್ವಾನ ಎಲ್ಲರ ಗಮನ ಸೆಳೆದಿದೆ.
ದೇಶದ ತೆರಿಗೆಗಳ್ಳರ ಮೇಲೆ ಐಟಿ ದಾಳಿ: ನೋಟು ಎಣಿಸಿ ಎಣಿಸಿ ಕೌಂಟಿಂಗ್ ಮೆಷಿನ್‌ಗೆ ಸುಸ್ತು!
- Advertisement -