Sports News: ಕ್ರಿಕೇಟಿಗ ಸಂಜಯ್ ಬಂಗಾರ್ ಅವರ ಪುತ್ರ ಆರ್ಯನ್ ಇದೀಗ ಲಿಂಗ ಬದಲಿಸಿ, ಅನಾಯಾ ಆಗಿದ್ದಾರೆ. ಇವರು ಇಂಗ್ಲೇಂಡ್‌ನ ಮಹಿಳಾ ಕ್ರಿಕೇಟ್ ತಂಡಕ್ಕೆ ಸೇರಬೇಕು ಎಂದು ಬಯಸಿದ್ದರು. ಆದರೆ ಟ್ರಾನ್ಸ್‌ಜಂಡರ್‌ಗಳಿಗೆ ಯಾವುದೇ ಸ್ಥಾನವಿಲ್ಲವೆಂದು ಅವರನ್ನು ನಿಷೇಧಿಸಲಾಯಿತು. ಹಾಗಾಗಿ ಈಗ ಅನಾಯಾ ಹಿಂದಿ ರಿಯಾಲಿಟಿ ಶೋನಲ್ಲಿ ಮಿಂಚಲು ರೆಡಿಯಾಗಿದ್ದಾರೆ.
ಇತ್ತೀಚೆಗೆ ಆರ್ಯನ್ ಅನಾಯಾ ಆಗಿ ಬದಲಾಗಿದ್ದಾರೆ. ಅದಾದ ಬಳಿಕ ಅವರು ಸೋಶಿಯಲ್ ಮೀಡಿಯಾಗೆ ಬಂದು, ಆ್ಯಕ್ಟೀವ್ ಆಗಿದದಾರೆ.ಹೀಗಿರುವಾಗ ಓರ್ವ ಪ್ರಸಿದ್ಧ ಕ್ರಿಕೇಟಿಗ ಅವರ ಬಳಿ ಮಾತನಾಡಲು ಶುರು ಮಾಡಿ, ಕೆಲ ಸಮಯದಲ್ಲೇ ಅವರಿಗೆ ಬೆತ್ತಲೆ ಫೋಟೋ ಕಳುಹಿಸಲು ಶುರು ಮಾಡಿದನಂತೆ. ಈ ಬಗ್ಗೆ ಅನಾಯಾ ರೈಸ್ ಆ್ಯಂಡ್ ಫಾಲ್ ರಿಯಾಲಿಟಿ ಶೋನಲ್ಲಿ ಹೇಳಿಕ“ಂಡಿದ್ದಾರೆ.
ಈ ವೇಳೆ ಆ ಕ್ರಿಕೇಟಿಗ ಎಲ್ಲರಿಗೂ ಪರಿಚಯನಾ ಅಂತಾ ಕೇಳಿದಾಗ, ಹೌದು ಅವರು ಪ್ರಸಿದ್ಧರೇ ಎಂದು ಅನಾಯಾ ಹೇಳಿದ್ದಾರೆ. ಅಲ್ಲದೇ ಅವರು ನೇರವಾಗಿ ನನಗೆ ಆ ರೀತಿಯ ಫೋಟೋ ಕಳುಹಿಸಲು ಶುರು ಮಾಡಿದರು ಎಂದು ಅನಾಯಾ ಹೇಳಿದ್ದಾರೆ. ಇದರಿಂದ ಅಲ್ಲಿದ್ದ ಸ್ಪರ್ಧಿಗಳು ಶಾಕ್ ಆಗಿದ್ದಾರೆ. ಸದ್ಯ ಕಮೆಂಟ್ ಬಾಕ್ಸ್‌ನಲ್ಲಿ ನೆಟ್ಟಿಗರೆಲ್ಲ ಬೇರೆ ಬೇರೆ ಕ್ರಿಕೇಟಿಗರ ಹೆಸರು ಹೇಳಿ, ತಮಾಷೆ ಮಾಡುತ್ತಿದ್ದಾರೆ. ಅನಾಯಾರ ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿರೋದಂತೂ ಸತ್ಯ.