Sports News: ಕರ್ನಾಟಕದ ಅಳಿಯ ಟೀ ಇಂಡಿಯಾ ನಾಯಕ ಸೂರ್ಯ ಕುಮಾರ್ ಯಾದವ್ ಮುದ್ದಾದ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ. ಈ ಸಿಹಿಸುದ್ದಿಯನ್ನು ಸೂರ್ಯ ಕುಮಾರ್ ಅವರೇ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಕೆಲ ದಿನಗಳ ಹಿಂದೆ ಭಾರತ ವರ್ಲ್ಡ್ ಕಪ್ ಮ್ಯಾಚ್ ಗೆದ್ದಾಗ, ಫಿನಾಲೆ ದಿನ ದೇವಿಶಾ ಕೂಡ ಪಂದ್ಯ ವೀಕ್ಷಣೆಗೆ ಬಂದಿದ್ದರು. ಆ ವೇಳೆ ಅವರು ಗರ್ಭಿಣಿಯಾಗಿರಬಹುದು ಎಂದು ಹಲವರು ಅಂದಾಜು ಮಾಡಿದ್ದರು. ಇದೀಗ ಸೂರ್ಯ ಕುಮಾರ್ ಸಿಹಿ ಸುದ್ದಿ ನೀಡಿದ್ದು, ಅಭಿಮಾನಿಗಳ ಅಂದಾಜು ಸತ್ಯವಾಗಿದೆ.
ದೇವಿಶಾ ಉಡುಪಿ ಜಿಲ್ಲೆಯವರು. ಅವರು ಮುಂಬೈನಲ್ಲಿ ನೆಲೆಸಿದ್ದರೂ, ಆಗಾಗ ಉಡುಪಿಗೆ ಬಂದು, ಇಲ್ಲಿ ಪುಣ್ಯ ಕ್ಷೇತ್ರಗಳ ದರ್ಶನ ಮಾಡುತ್ತಾರೆ. ಅಲ್ಲದೇ, ಕಾಪು ಮಾರಿಯಮ್ಮ ದೇವಿಯ ಆರಾಧಕರಾಗಿದ್ದು, ಆಕೆಯ ಆಶರ್ವಾದಿಂದಲೇ ಸೂರ್ಯ ಕುಮಾರ್ ಈ ಮಟ್ಟಿಗೆ ಬೆಳೆದಿರೋದು ಅಂದ್ರೂ ತಪ್ಪಾಗಲಿಕ್ಕಿಲ್ಲ. 2016ರಲ್ಲಿ ವಿವಾಹವಾಗಿದ್ದ ದೇವಿಶಾ ಮತ್ತು ಸೂರ್ಯ ಕುಮಾರ್, ಇದೀಗ ತಂದೆ ತಾಯಿಯಾಗಿ ಭಡ್ತಿ ಪಡೆದಿದ್ದಾರೆ.




