Mandya News: ಮಂಡ್ಯ: ಮಂಡ್ಯದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಮಾತನಾಡಿದ ರವೀಂದ್ರ, ಊಟ ಹಾಕುವ ಜಿಲ್ಲೆಯ ಜನರನ್ನ ಕಾಂಗ್ರೆಸ್ ನಾಯಕರು ದುಡ್ಡಿನಲ್ಲಿ ಅಳೆಯುತ್ತಿದ್ದಾರೆ. ಮಂಡ್ಯದಲ್ಲಿ ಸ್ಪಲ್ಪ ದಿನ ಕರೆಯಲ್ಲಿ ಬೋಟ್ ನಿಲ್ಲಿಸಿ ಗೋವಾ ತರ ಕ್ಯಾಸಿನೊ ಶುರುಮಾಡ್ತಾರೆ ಎಂದು ಹೇಳಿದ್ದಾರೆ.
ಕೈ ಗ್ಯಾರಂಟಿ ವಿರುದ್ದ ಸ್ವತಃ ಕಾಂಗ್ರೆಸ್ ಮುಖಂಡನಿಂದಲೇ ವಿರೋಧ ವ್ಯಕ್ತವಾಗಿದೆ. ಜನರಿಗೆ ಆರೋಗ್ಯ ಮತ್ತು ಶಿಕ್ಷಣ ಮಾತ್ರ ಉಚಿತ ಬೇಕು. ಉಳಿದ ಯಾವುದು ಕೂಡ ಫ್ರೀ ಬೇಡ.. ಒಬ್ಬ ವ್ಯಕ್ತಿಯ ಆರೋಗ್ಯ ಕೆಟ್ಟರೆ ಸಾವಿರಾರು ರೂಪಾಯಿ ಖರ್ಚಾಗುತ್ತೆ. ಆ ಬಡ ವ್ಯಕ್ತಿ ಒಂದು ವರ್ಷ ಜಮೀನಲ್ಲೆ ಕೆಲಸ ಮಾಡಬೇಕು. ಮಣಿಪಾಲ್ ಆಸ್ಪತ್ರೆ ಗೆ ಸೇರಿಸಿದ್ರೆ ರೈತ ತನ್ನ ಜಮೀನನ್ನೆ ಮಾರಿಕೊಳ್ಳಬೇಕು ಎಂದು ಅಸಮಾಧಾನ ಹೊರಹಾಕಿದ್ದಾರೆ.
ಪರಿಸ್ಥಿತಿ ಕೆಟ್ಟದಿದೆ ಆರೋಗ್ಯ ಫ್ರೀ ಕೊಡುವ ಬಗ್ಗೆ ಸಿದ್ದರಾಮಯ್ಯ ಅವರ ಜೊತೆ ಮಾತನಾಡಿದ್ದೆ. ಒಳ್ಳೆಯ ಕಾನ್ಸೆಪ್ಟ್ ಬಜೆಟ್ ನಲ್ಲಿ ಘೋಷಣೆ ಮಾಡೋಣ ಅಂತ ಸಿಎಂ ಹೇಳಿದ್ರು. ಅದ್ರೆ ಸಿಎಂ ಅವರು ಸಿಗಲಿಲ್ಲ, ಕಡೆಗೆ ಡೆಲ್ಲಿಗೆ ಸಿದ್ದರಾಮಯ್ಯ ನೋಡಲು ಹೋಗಿದ್ದೆ. ಅಲ್ಲೂ ಕೂಡ ಹೊಸ ಹೊಸ ಮುಖದ ಜನರು ಇದ್ದಾರೆ.
ಪಕ್ಷಕ್ಕಾಗಿ ಮಣ್ಣು ಒತ್ತವರು ಯಾರೋ ವ್ಯವಹಾರ ಮಾಡಲು ಬೇರೆ ಸೆಟಾಪ್ ಇದ್ದಾರೆ. ಒಬ್ಬ ಬಡವನು ಕೂಡ ವರ್ಷಕ್ಕೆ ಒಂದು ಬಾರಿ ಕುರಿ ಕಡಿದು ಪರ ಮಾಡ್ತಾನೆ.
25 ಸಾವಿರ ರೂ ಖರ್ಚು ಮಾಡಿ ಪರ ಮಾಡಿ ಜನಕ್ಕೆ ಊಟ ಹಾಕುವ ಮನಸ್ಥಿತಿ ಇರುವ ಜಿಲ್ಲೆಯ ಜನ.
ಯಾವನೋ 100ಕೋಟಿ ತರ್ತಾನೆ ದುಡ್ಡು ಇಲ್ಲದೆ ಚುನಾವಣೆ ಗೆಲ್ಲಕ್ಕಾಗಲ್ಲ ಅಂದ್ರೆ ಅರ್ಥ ಏನು?
ಜಿಲ್ಲೆಯ ಸಾಮಾನ್ಯ ಕುಟುಂಬ ವರ್ಗದವರು ಪ್ರತಿ ವರ್ಷ ದೇವರ ಸೇವೆ ಮಾಡಿ ನೂರಾರು ಜನಕ್ಕೆ ಊಟ ಹಾಕುತ್ತಾರೆ. ಆದರೆ ಕಾಂಗ್ರೆಸ್ ನಾಯಕರು ಅನ್ನ ಹಾಕುವ ಜನರನ್ನು ದುಡ್ಡಿನಲ್ಲಿ ಅಳೆಯಲು ಮುಂದಾಗಿದ್ದಾರೆ.
ದುಡ್ಡು ಕೊಡದಿದ್ದರೆ ಜಿಲ್ಲೆಯ ಜನತೆ ಮತ ಹಾಕೊಲ್ಲ ಎಂದು ಜಿಲ್ಲೆಯ ಜನರನ್ನು ಅವಮಾನಿಸಲು ಮುಂದಾಗಿದ್ದಾರೆ.
ದುಡ್ಡಿಗೆ ಓಟ್ ಹಾಕ್ತಾರೆ ಅಂದ್ರೆ ಕಳೆದ ಬಾರಿ ಸುಮಲತಾ ಗೆಲ್ಲೋದಕ್ಕೆ ಸಾಧ್ಯ ಇತ್ತ.? ವಿಜಯಮಲ್ಯಗೆ ಇರುವ ಶೋಕಿಗೆ ಪ್ರಧಾನ ಮಂತ್ರಿ ಆಗೋನು. ದುಡ್ಡಲ್ಲೆ ಎಲ್ಲ ಆಗಲ್ಲ, ಜನರ ಪ್ರೀತಿ, ವಿಶ್ವಾಸ ಇರಬೇಕು. ಸಿದ್ದರಾಮಯ್ಯ ಮೈಸೂರಿನ ಮಾತ್ರ ಕ್ಲಬ್ ಬ್ಯಾನ್ ಮಾಡಿಸ್ತಾರೆ. ಮಂಡ್ಯ ಜಿಲ್ಲೆಯಲ್ಲಿ ಕ್ಲಬ್ ಬ್ಯಾನ್ ಮಾಡಬೇಕು ಅನ್ನೋ ಅದೇ ತಾಕತ್ ಯಾಕಪ್ಪ ನಿನಗಿಲ್ಲ? ಕ್ಲಬ್, ಇಸ್ಪಿಟ್, ಗದ್ದೆ, ಎಲ್ಲಾ ಕಡೆ ನಡೆಯುತ್ತಿದೆ. ಸ್ಪಲ್ಪ ದಿನ ಕರೆಯಲ್ಲಿ ಬೋಟ್ ನಿಲ್ಲಿಸಿ ಗೋವಾ ತರ ಕ್ಯಾಸಿನೊ ಶುರುಮಾಡ್ತಾರೆ ನಾನು ರಾಜಿನಾಮೆ ಕೊಡ್ತಿದ್ದೇನೆ. ನಾನು ಯಾವ ಪಕ್ಷಕ್ಕೂ ಸೇರಲ್ಲ, ನನ್ನ ಪಕ್ಷ ಕಾಂಗ್ರೆಸ್ ಅಷ್ಟೆ ಎಂದು ರವೀಂದ್ರ ಹೇಳಿದ್ದಾರೆ.
ಶೇಕ್ ಹ್ಯಾಂಡ್ ಮಾಡಲು ಬಂದ ರಾಹುಲ್ ಗಾಂಧಿಗೆ ಆಲೂಗಡ್ಡೆ ಕೊಟ್ಟ ಬಿಜೆಪಿ ಕಾರ್ಯಕರ್ತರು
ಅಯೋಧ್ಯೆಗೆ ಭೇಟಿ ನೀಡಿ, ಚಾಮರ ಸೇವೆ ಸಲ್ಲಿಸಿದ ಬಿಜೆಪಿ ನಾಯಕ ನಳೀನ್ ಕುಮಾರ್ ಕಟೀಲ್
ಅನಂತ್-ರಾಧಿಕಾ ಪ್ರಿವೆಡ್ಡಿಂಗ್ ಕಾರ್ಯಕ್ರಮದಲ್ಲಿ ಚಿನ್ನದ ಶರ್ಟ್‌ನಲ್ಲಿ ಮಿಂಚಿದ ಮಾರ್ಕ್