Monday, November 17, 2025

Latest Posts

ನಾಳೆ ಕಲಬುರಗಿಗೆ ಪ್ರಧಾನಿ ಆಗಮನ: 6 ಪ್ರಶ್ನೆ ಮುಂದಿಟ್ಟು ಮೋದಿಯನ್ನು ಸ್ವಾಗತಿಸಿದ ಪ್ರಿಯಾಂಕ್ ಖರ್ಗೆ

- Advertisement -

Political News: ನಾಳೆ ಪ್ರಧಾನಿ ಮೋದಿ ಕಲಬುರಗಿಗೆ ಆಗಮಿಸುತ್ತಿದ್ದು, ಸಚಿವ ಪ್ರಿಯಾಂಕ್ ಖರ್ಗೆ, ಪಿಎಂ ಮುಂದೆ ಕೆಲವು ಪ್ರಶ್ನೆಗಳನ್ನು ಇರಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಿಯಾಂಕ್ ಪ್ರಧಾನಿ ಮುಂದೆ 6 ಸವಾಲುಗಳನ್ನು ಇರಿಸಿ, ಇದಕ್ಕೆ ನೀವು ಉತ್ತರಿಸುತ್ತೀರಿ ಎಂದುಕೊಂಡಿದ್ದೇನೆ ಎಂದಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆ ಕೇಳಿದ ಪ್ರಶ್ನೆಗಳು ಇಂತಿದೆ..

1. ನರೇಗಾ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರಿಗೆ ಕೇಂದ್ರ ಸರ್ಕಾರ ಯಾಕೆ ವೇತನ ಬಿಡುಗಡೆ ಮಾಡುತ್ತಿಲ್ಲ..? ದಿವಾಳಿಯಾಗಿದೆಯೇ..?

2. ಕರ್ನಾಟಕ ತೀವ್ರ ಬರಗಾಲ ಎದುರಿಸುತ್ತಿದ್ದರೂ, ಮೋದಿ ಸರ್ಕಾರ ಎನ್‌ಡಿಆರ್‌ಎಫ್ ಅಡಿಯಲ್ಲಿ, ಯಾಕೆ ಅನುದಾನ ಬಿಡುಗಡೆ ಮಾಡುತ್ತಿಲ್ಲ..?

3. ಕಳೆದ ಚುನಾವಣೆಯಲ್ಲಿ ಬಿಜೆಪಿ ಕೊಟ್ಟ ಭರವಸೆಯ ಪ್ರಕಾರ, ಕೋಲಿ ಮತ್ತು ಗೋಂಡ ಸಮುದಾಯವನ್ನು ಯಾವಾಗ ಪರಿಶಿಷ್ಠ ಪಂಗಡಕ್ಕೆ ಸೇರಿಸುತ್ತೀರಿ..?

4. ಮಲ್ಲಿಕಾರ್ಜುನ್ ಖರ್ಗೆ ಅವಧಿಯಲ್ಲಿ ಮಂಜೂರಾಗಿದ್ದ ಕಲಬುರಗಿ ರೈಲ್ವೆ ವಲಯವನ್ನು ನಿಮ್ಮ ಅವಧಿಯಲ್ಲಿ ಏಕೆ ಸ್ಥಾಪಿಸಲಿಲ್ಲ..?

5. ಕಲಬುರಗಿಯಲ್ಲಿ ರಾಷ್ಟ್ರೀಯ ಹೂಡಿಕೆ ತಯಾರಿಕಾ ವಲಯವನ್ನು ನಿಮ್ಮ ಸರ್ಕಾರ ಕೈ ಬಿಟ್ಟಿದ್ದೇಕೆ..?

6. ಕಲಬುರಗಿ ಹೊರ ವರ್ತುಲ ರಸ್ತೆಗೆ ಏಕೆ ಅನುದಾನ ಬಿಡುಗಡೆ ಮಾಡಿಲ್ಲ..?

ಇವಿಷ್ಟು ಸಚಿವ ಪ್ರಿಯಾಂಕ್ ಖರ್ಗೆ, ಪ್ರಧಾನಿ ಮೋದಿಯವರಿಗೆ ಕೇಳಿದ ಪ್ರಶ್ನೆಗಳಾಗಿದೆ.

ನಮ್ಮ ಪಕ್ಷ ಸರಿ ಇಲ್ಲ ಎನ್ನುವುದಾದರೆ ನಮ್ಮ ಪಕ್ಷದ ಬಳಿ ಏಕೆ ಬಂದಿದ್ದರು..?: ಕಾಂಗ್ರೆಸ್ ವಿರುದ್ಧ ರೇವಣ್ಣ ವಾಗ್ದಾಳಿ

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹಣೆಗೆ ಗಾಯ: ದಯವಿಟ್ಟು ಅವರಿಗಾಗಿ ಪ್ರಾರ್ಥಿಸಿ ಎಂದ ಟಿಎಂಸಿ

ವಾಹನ ಸವಾರರಿಗೆ ಗುಡ್‌ನ್ಯೂಸ್: ಪೆಟ್ರೋಲ್, ಡಿಸೇಲ್ ದರದಲ್ಲಿ ಇಳಿಕೆ

- Advertisement -

Latest Posts

Don't Miss