Sunday, May 26, 2024

Latest Posts

ಮದುವೆ ಮನೆಯಲ್ಲಿ ಅಗ್ನಿ ಅವಘಡ, ವಧು ವರ ಸೇರಿ 6 ಮಂದಿಯ ದುರ್ಮರಣ

- Advertisement -

National News: ಬಿಹಾರದಲ್ಲಿ ಮದುವೆ ಚಪ್ಪರಕ್ಕೆ ಬೆಂಕಿ ಹೊತ್ತಿಕೊಂಡು, ಅಲ್ಲೇ ಇದ್ದ ಸಿಲಿಂಡರ್ ಸ್ಪೋಟಗೊಂಡು ವಧು ವರ ಸೇರಿ 6 ಮಂದಿ ಸಾವಿಗೀಡಾಗಿದ್ದಾರೆ. ಹಲವರಿಗೆ ಗಾಯವಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

ನರೇಶ್ ಪಾಸ್ವಾನ್ ಎಂಬುವವರ ಮಗಳ ಮದುವೆ ಇತ್ತು. ಮದುವೆ ತಯಾರಿ ಎಲ್ಲ ಭರ್ಜರಿಯಾಗೇ ನಡೆದಿತ್ತು. ಚಪ್ಪರವೊಂದನ್ನು ಹಾಕಿ, ಅದರಲ್ಲೇ ವಿವಾಹಕ್ಕೆ ಸಿದ್ಧತೆ ಮಾಡಿಕೊಳ್ಳಲಾಾಗಿತ್ತು. ಚಪ್ಪರದ ಹತ್ತಿರವೇ ಅಡುಗೆ ಮಾಡುವ ವ್ಯವಸ್ಥೆ ಮಾಡಲಾಗಿತ್ತು. ಆದರೆ ವಿವಾಹ ಶುರುವಾದ ಬಳಿಕ ಪಟಾಕಿ ಹೊಡೆಯಲಾಗಿದೆ. ವಿವಾಹದಲ್ಲಿ ಪಟಾಕಿ ಸಿಡಿಸಿ, ನೃತ್ಯ ಮಾಡಿ ಸಂಭ್ರಮಿಸುವುದು ಬಿಹಾರಿಗಳ ಪದ್ಧತಿ. ಹಾಗಾಗಿ ಪಟಾಕಿ ಹೊಡೆದಿದ್ದಾರೆ. ಆದರೆ ಪಟಾಕಿ ಕಿಡಿ ತಗುಲಿ ಚಪ್ಪರಕ್ಕೆ ಬೆಂಕಿ ಬಿದ್ದಿದೆ. ಇದೇ ಬೆಂಕಿಯಿಂದ ಸಿಲಿಂಡರ್ ಸ್ಪೋಟಗೊಂಡು, ವಧು ವರ, ಮೂವರು ಮಕ್ಕಳು ಸೇರಿ ಒಟ್ಟು 6 ಜನ ಸಾವನ್ನಪ್ಪಿದ್ದಾರೆ.

ಕೆಲಸಕ್ಕೆ ರಿಸೈನ್ ಕೊಟ್ಟು, ಬಾಸ್ ಎದುರು ಢೋಲು ಬಾರಿಸಿ, ಡಾನ್ಸ್ ಮಾಡಿದ ಯುವಕ, ವೀಡಿಯೋ ವೈರಲ್

ಮತಗಟ್ಟೆಗೆ ಹೋಗಿ ಮತ ಚಲಾಯಿಸಿ ಬಂದ ಬಾಣಂತಿ, ಮಿಮಿಕ್ರಿ ಆರ್ಟಿಸ್ಟ್ ಇಂದುಶ್ರೀ..

ಮೋದಿ ಶೌಚಾಲಯ ಕಟ್ಟಿಸಿದ್ದಾರೆ. ಕಾಂಗ್ರೆಸ್‌ನವರು ಚೊಂಬು ಹಿಡ್ಕೊಂಡು ಓಡಾಡುತ್ತಿದ್ದಾರೆ: ಜೋಶಿ

 

- Advertisement -

Latest Posts

Don't Miss