Tuesday, October 22, 2024

Latest Posts

ಶ್ರೀಕೃಷ್ಣನ ಲೀಲೆ ಪರೀಕ್ಷಿಸಲು ಹೋಗಿ ಕಣ್ಣು- ಬಾಯಿ ಕಳೆದುಕೊಂಡ ವಿದೇಶಿಗ

- Advertisement -

Spiritual: ಛತ್ತೀಸ್‌ಘಡದ ಬಸ್ತಾರ ಎಂಬಲ್ಲಿ ಶ್ರೀಕೃಷ್ಣನ ದೇಗುಲವಿದೆ. ಈ ದೇಗುಲಕ್ಕೆ ಹಲವಾರು ಪ್ರವಾಸಿಗರು, ಭಕ್ತರು ಭೇಟಿ ನೀಡಿ, ಶ್ರೀಕೃಷ್ಣನ ದರ್ಶನ ಪಡೆದು ಹೋಗುತ್ತಾರೆ. ಆದರೆ ಸಂಜೆ 7 ಗಂಟೆಯ ಬಳಿಕ ಇಲ್ಲಿ ದರ್ಶನ ಮಾಡಲು ಅನುಮತಿ ಇರುವುದಿಲ್ಲ. ಏಕೆಂದರೆ, 7 ಗಂಟೆಗೆ ಈ ದೇವಸ್ಥಾನವನ್ನು ಬಂದ್ ಮಾಡಲಾಗುತ್ತದೆ. ಮರುದಿನ ಬೆಳಿಗ್ಗೆ 7 ಗಂಟೆಯ ಬಳಿಕ, ಮತ್ತೆ ದರ್ಶನಕ್ಕೆ ಅವಕಾಶವಿದೆ.

ಇಷ್ಟು ಪ್ರಸಿದ್ಧ ದೇವಸ್ಥಾನವಿದ್ದರೂ, ಇಲ್ಲಿ ಭಕ್ತರು, ಪ್ರವಾಸಿಗರು ಬಂದರೂ, ಯಾಕೆ ಇಷ್ಟು ಬೇಗ ದೇವಸ್ಥಾನವನ್ನು ಬಂದ್ ಮಾಡಲಾಗುತ್ತದೆ ಅನ್ನೋ ಪ್ರಶ್ನೆ ನಿಮ್ಮಲ್ಲಿ ಉದ್ಭವಿಸಿರಬಹುದು. ಅದಕ್ಕೆ ಕಾರಣವೇನೆಂದರೆ, 7 ಗಂಟೆಯ ಬಳಿಕ, ಇಲ್ಲಿ ರಾಧಾ ಕೃಷ್ಣರು ಬರುತ್ತಾರೆ. ಮತ್ತು ವಿಶ್ರಮಿಸುತ್ತಾರೆ ಅನ್ನೋ ನಂಬಿಕೆ ಇದೆ.

ಹಾಗಾಗಿಯೇ ಈ ದೇವಸ್ಥಾನದಲ್ಲಿ ಸಂಜೆ ದೇವಸ್ಥಾನದ ಬಾಗಿಲು ಮುಚ್ಚುವ ಮುನ್ನ, ಕೃಷ್ಣ ರಾಧೆ ಬಂದು ವಿಶ್ರಮಿಸಲಿ ಎಂದು, ಹಾಸಿಗೆ ಹಾಸಿರುತ್ತಾರೆ. ರಾತ್ರಿ ಬಾಗಿಲು ಮುಚ್ಚುವ ಮುನ್ನ ಹಾಸಿಗೆ ನೀಟ್ ಆಗಿರುತ್ತದೆ. ಅದೇ ಬೆಳಿಗ್ಗೆ ದೇವಸ್ಥಾನದ ಬಾಗಿಲು ತೆಗೆದಾಗ, ಹಾಸಿಗೆ ಮೇಲೆ ಯಾರೋ ಮಲಗಿ ಎದ್ದ ಹಾಗೆ ಇರುತ್ತದೆ.

ಈ ಪವಾಡದ ಬಗ್ಗೆ ಕೇಳಿದ ವಿದೇಶಿಗನೊಬ್ಬ, ತಾನು ಈ ದೇವಸ್ಥಾನದಲ್ಲಿ ಏನಾಗುತ್ತದೆ ಎಂದು ಕಣ್ಣಾರೆ ನೋಡಬೇಕು. ಬಳಿಕ ಜನರಿಗೆ ಸತ್ಯ ತಿಳಿಸಬೇಕು ಎಂದು ಬರುತ್ತಾನೆ. ಇಂಥ ಪರೀಕ್ಷೆ ಮಾಡುವುದು ತಪ್ಪು ಎಂದು ಜನ ಎಷ್ಟೇ ಹೇಳಿದರೂ, ನಾನು ಈ ದೇವಸ್ಥಾನದಲ್ಲಿ ಏನಾಗುತ್ತದೆ ಎಂದು ನೋಡಲೇಬೇಕು ಎಂದು ಹಠ ಹಿಡಿಯುತ್ತಾನೆ.

ಹೀಗೆ ಹಠ ಹಿಡಿಯುವ ಮುನ್ನ ಆ ವಿದೇಶಿಗ ಆರೋಗ್ಯವಾಗಿದ್ದ. ಅವನ ಕಣ್ಣು, ಬಾಯಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ, ಸಂಜೆ 7 ಗಂಟೆಯ ಬಳಿಕ, ದೇವಸ್ಥಾನದ ಬಾಗಿಲು ಮುಚ್ಚಿದ ಬಳಿಕವೂ, ಕೆಟ್ಟ ಕುತೂಹಲದಿಂದ ಆ ದೇವಸ್ಥಾನದಲ್ಲಿ ಏನಾಗುತ್ತದೆ ಎಂದು ನೋಡಲು ಹೋಗಿದ್ದ ಆತನಿಗೆ ಮರುದಿನ ದೊಡ್ಡ ಶಾಕ್ ಕಾದಿತ್ತು.

ರಾತ್ರಿ ಆತ ದೇವಸ್ಥಾನದಲ್ಲಿ ಏನು ನಡೆದಿತ್ತು ಎಂದು ತನ್ನ ಕಣ್ಣಾರೆ ನೋಡಿದ್ದ. ಆದರೆ ಮರುಕ್ಷಣವೇ ಕುರುಡನಾಗಿದ್ದ. ಅಲ್ಲಿ ತಾನೇನು ನೋಡಿದೆ ಎಂದು ವಿವರಿಸಲು ಹೊರಟ, ಆದರೆ ಅದಾಗಲೇ, ಅವನ ಮಾತು ನಿಂತು ಹೋಗಿತ್ತು. ಪರೀಕ್ಷೆ ಮಾಡಲೆಂದು ವಿದೇಶದಿಂದ ಬಂದಿದ್ದ ಆತ, ಇಂದಿನವರೆಗೂ ಅದೇ ದೇವಸ್ಥಾನದಲ್ಲಿ ಇದ್ದಾನೆ. ಸದಾಕಾಲ ಮುಗುಳ್ನುತ್ತ, ಮನಸ್ಸಿನಲ್ಲೇ ದೇವರ ಭಜನೆ ಮಾಡುತ್ತಾನೆ.

- Advertisement -

Latest Posts

Don't Miss