ಮಾರಕ ಡೆಂಗ್ಯೂ ಜ್ವರಕ್ಕೆ ಹಾಸನದಲ್ಲಿ 7 ವರ್ಷದ ಬಾಲಕಿ ಬಲಿ

Hassan News: ಹಾಸನ : ಮಾರಕ ಡೆಂಗ್ಯೂ ಜ್ವರಕ್ಕೆ ಬಾಲಕಿ ಬಲಿಯಾದ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ನಗರದ ಬೆಥನಿ ಸೆಂಟ್ರಲ್ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದ ಸಾತ್ವಿಕ(7) ಸಾವನ್ನಪ್ಪಿದ ಬಾಲಕಿಯಾಗಿದ್ದಾಳೆ.

ಸಾತ್ವಿಕ ಬಂಡಿಹಳ್ಳಿ ಗ್ರಾಮದ ಉಪನ್ಯಾಸಕ ಗಂಗಾಧರ್ ಅವರ ಪುತ್ರಿಯಾಗಿದ್ದು, ಕಳೆದ ಮೂರ್ನಾಲ್ಕು ದಿನದಿಂದ ಈಕೆ ಜ್ವರದಿಂದ ಬಳಲುತ್ತಿದ್ದಳು. ಹಾಗಾಗಿ ಆಕೆಯನ್ನು ಖಾಸಗಿ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಬಳಿಕ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಹಿಮ್ಸ್‌ಗೆ ಸಾತ್ವಿಕಳನ್ನು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ, ಸಾತ್ವಿಕ ಸಾವನ್ನಪ್ಪಿದ್ದಾಳೆ. ಈ ಕಾರಣಕ್ಕೆ ಇಂದು ನಡೆಯಬೇಕಿದ್ದ ಎಲ್ಲಾ ಪರೀಕ್ಷೆ ರದ್ದುಗೊಳಿಸಿ ಶಾಲಾ ಆಡಳಿತ ಮಂಡಳಿ ಶಾಲೆಗೆ ರಜೆ ನೀಡಿದೆ.

ಕಾಂಗ್ರೆಸ್ ಸರ್ಕಾರ ಹಾಸನದ ರೈತರಿಗೂ ದ್ರೋಹ ಬಗೆದಿದೆ: ಮಾಜಿ ಶಾಸಕ ಪ್ರೀತಂಗೌಡ

ಮಾಜಿ ಸಿಎಂ ಯಡಿಯೂರಪ್ಪ, ವಿಜಯೇಂದ್ರ ಅವರನ್ನು ಭೇಟಿಯಾದ ಮಾಜಿ ಸಚಿವ ರೇವಣ್ಣ, ಪ್ರಜ್ವಲ್

ನನ್ನನ್ನು ಆ ಹೆಸರಿನಿಂದ ಕರೆಯಬೇಡಿ, ಮುಜುಗರವಾಗತ್ತೆ: ವಿರಾಟ್ ಕೊಹ್ಲಿ

About The Author