ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿ, ಅಲ್ಲೇ ಉದ್ಯೋಗ ಮಾಡುವುದೆಂದರೆ ತಮಾಷೆಯ ಮಾತಲ್ಲ. ಅದಕ್ಕಾಗಿ ಉತ್ತಮ ನಾಲೆಡ್ಜ್ ಇರುವುದು ಅತ್ಯಗತ್ಯ. ಅದೇ ರೀತಿ ನಿಮಗೂ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿ, ಉದ್ಯೋಗವೂ ಹುಡುಕಿಕೊಳ್ಳಬೇಕೆಂಬ ಆಸೆ ಇದ್ದಲ್ಲಿ, ನೀವು ಕೇರಿಯರ್ ಗ್ಯಾನ್ ಪ್ರೈವೇಟ್ ಲಿಮಿಟೆಡ್ ನೇತೃತ್ವದಲ್ಲಿ, ಶಿವಕೃಷ್ಣ ಸಾರಥ್ಯದಲ್ಲಿ, ವಿದೇಶದಲ್ಲಿ ವಿದ್ಯಾಭ್ಯಾಸ ಪಡಿಯಬಹುದು. ಜೊತೆಗೆ ಪಾರ್ಟ್ ಟೈಮ್ ಕೆಲಸವೂ ಮಾಡಬಹುದು. ಇಷ್ಟೇ ಅಲ್ಲದೇ, ನಿಮಗೆ ಸ್ಕಾಲರ್ ಶಿಪ್, ಎಜುಕೇಶನ್ ಲೋನ್ ಕೂಡ ಸಿಗುತ್ತದೆ.
ನೀವು ವಿದ್ಯಾಭ್ಯಾಸ ಮುಗಿದ ಬಳಿಕ, ಅದೇ ದೇಶದಲ್ಲಿ ಕೆಲಸವನ್ನ ಕೂಡ ಪಡೆಯಬಹುದು. ಈ ಬಗ್ಗೆ ಶಿವಕೃಷ್ಣ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದು, ಸಂಪೂರ್ಣ ಮಾಹಿತಿಯನ್ನು ಕೊಟ್ಟಿದ್ದಾರೆ. ವಿದೇಶದಲ್ಲಿ ಕೆಲವು ಕಾಲೇಜು ಸೇರಬೇಕು ಅಂದ್ರೆ, ಭಾರತದಲ್ಲಿ ನಾಲ್ಕು ವರ್ಷದ ಡಿಗ್ರಿಯನ್ನು ನೀವು ಮುಗಿಸಿರಬೇಕು. ಆ ರೀತಿ 4 ವರ್ಷದ ಡಿಗ್ರಿಯಾದವರಿಗೆ, ವಿದೇಶದ ಯಾವ ಕಾಲೇಜಿನಲ್ಲಾದರೂ, ಸೀಟ್ ಸಿಗುತ್ತದೆ ಎನ್ನುತ್‌ತಾರೆ ಶಿವಕೃಷ್ಣ.
ಇಷ್ಟೇ ಅಲ್ಲದೇ, ಯಾವ ಯಾವ ದೇಶದಲ್ಲಿ, ವಸತಿ, ಶಿಕ್ಷಣ ಸೇರಿ, ಎಷ್ಟು ಫೀಸ್ ಆಗಬಹುದು ಅನ್ನುವುದರ ಬಗ್ಗೆಯೂ ಶಿವಕೃಷ್ಣ ಮಾಹಿತಿ ನೀಡಿದ್ದಾರೆ. ಯುರೋಪ್‌ನಲ್ಲಿ 10 ಲಕ್ಷದಿಂದ 40 ಲಕ್ಷದವರೆಗೂ ಪೀಸ್ ಆಗಬಹುದು. ಯುಕೆನಲ್ಲಿ ಓದಲು 15ರಿಂದ 30 ಲಕ್ಷ, ಅಮೆರಿಕಾ, ಆಸ್ಟ್ರೇಲಿಯಾದಲ್ಲಿ ಓದಲು 40ರಿಂದ 60 ಲಕ್ಷ, ಕೆನಡಾದಲ್ಲಿ ಓದಲು 20ರಿಂದ 40 ಲಕ್ಷ ರೂಪಾಯಿ ಫೀಸ್ ಆಗಬಹುದು. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಈ ವೀಡಿಯೋ ನೋಡಿ..
ಸುಳ್ಳು ಗ್ಯಾರಂಟಿಗಳ ವಿರುದ್ಧ ಹೋರಾಟ; ಮುಖಂಡರಿಗೆ ರಣವೀಳ್ಯ ನೀಡಿದ ಕುಮಾರಸ್ವಾಮಿ
ರಾಜ್ಯ ಯುವ ಜನತಾದಳ ಅಧ್ಯಕ್ಷ ಸ್ಥಾನಕ್ಕೆ ನಿಖಿಲ್ ಕುಮಾರಸ್ವಾಮಿ ಅವರ ರಾಜೀನಾಮೆ