Hubli News: ಹುಬ್ಬಳ್ಳಿ: ಗೂಡ್ಸ್ ವಾಹನ ಹಾಗೂ ಸೈಕಲ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಸೈಕಲ್ ಸಾವಾರ ದಾರುಣವಾಗಿ ಸಾವನಪ್ಪಿರುವ ಘಟನೆ ಹುಬ್ಬಳ್ಳಿಯ ಬಸವೇಶ್ವರ ಪಾರ್ಕ ಬಳಿಯ ಸುಳ್ಳ ರಸ್ತೆಯಲ್ಲಿ ನಡೆದಿದ್ದು, ಘಟನೆಗೆ ಗೂಡ್ಸ್ ವಾಹನ ನಿರ್ಲಕ್ಷ್ಯ ಚಾಲನವೇ ಕಾರಣ ಎಂದು ತಿಳಿದು ಹೇಳಲಾಗುತ್ತಿದೆ.
ಸುಳ್ಳ ಗ್ರಾಮದ ನಿವಾಸಿ ಸಿದ್ಧರಾಮಪ್ಪಾ ಕಲ್ಲಪ್ಪ ನಂದೆಣ್ಣವರ (55) ಮೃತನೆಂದು ಗುರುತಿಸಲಾಗಿದೆ. ಮೃತ ಸಿದ್ದರಾಮಪ್ಪ ಬಸವೇಶ್ವರ ಪಾರ್ಕನ ಬಿಲ್ಡಿಂಗ್ ಒಂದರಲ್ಲಿ ವಾಚಮನ್ ಕೆಲಸ ಮಾಡುತ್ತಿದ್ದ, ಅಂಗಡಿಗೆ ಸೈಕಲ್ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಹುಬ್ಬಳ್ಳಿ ಕಡೆಯಿಂದ ಸುಳ್ಳದ ಮಾರ್ಗವಾಗೆ ತೆರಳುತ್ತಿದ್ದ ಕಡಿ ತುಂಬಿದ ಲಾರಿ ಸೈಕಲ್‌ಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಸೈಕಲ್ ಸವಾರನ ತಲೆ ಭಾಗಕ್ಕೆ ತೀವವಾದ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಸಿದರಾಮಪ್ಪ ಸಾವನಪ್ಪಿದ್ದಾರೆ.
ಸ್ಥಳೀಯರ ಮಾಹಿತಿ ಮೇರೆಗೆ ಪೂರ್ವ ಸಂಚಾರಿ ಪೊಲೀಸ ಠಾಣೆ ಇನ್ಸಪೆಕ್ಟರ್ ಡಿಸೋಜಾ ಮತ್ತು ಕೆಶ್ವಾಪೂರ ಪೊಲೀಸ ಠಾಣೆ ಪಿಎಸ್ಐ ಸಚ್ಚಿದಾನಂದ ಕಾನಟ್ಟಿ ಸ್ಥಳಕ್ಕೆ ಬೇಟಿ ನೀಡಿ, ಮೃತ ದೇಹವನ್ನು ತಾವೇ ಸ್ವತಃ ಮುಂದೆ ನಿಂತು ಗಾಡಿಯಲ್ಲಿ ಗೌರವಯುತವಾಗಿ ಎತ್ತಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಈ ಕುರಿತು ಪೂರ್ವ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Expressionless ಆ್ಯಕ್ಟಿಂಗ್‌ನಿಂದಾಗಿ ಟ್ರೋಲ್ ಆಗುತ್ತಿದ್ದಾರೆ ಹೀರಾಮಂಡಿ ನಟಿ ಶರ್ಮಿನ್ ಸೇಗಲ್
ಪಕ್ಕದ ಮನೆಯಿಂದ ಬರುವ ಹೆಗ್ಗಣಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ ವ್ಯಕ್ತಿ

