10ನೇ ಕ್ಲಾಸಿನಲ್ಲಿ 10 ಬಾರಿ ಫೇಲ್ ಆಗಿ 11ನೇ ಬಾರಿ ಪಾಸ್ ಆದವನಿಗೆ ಭರ್ಜರಿ ಸನ್ಮಾನ

National News: ಮಹಾರಾಷ್ಟ್ರದ ಗ್ರಾಮವೊಂದರಲ್ಲಿ ಓರ್ವ ಯುವಕ ಹತ್ತನೇ ತರಗತಿಯಲ್ಲಿ ಹತ್ತು ಸಲ ಫೇಲ್ ಆಗಿ, ಇದೀಗ ಹನ್ನೊಂದನೇ ಬಾರಿಗೆ ಪಾಸ್ ಆಗಿದ್ದಾನೆ.

ಹೀಗಾಗಿ ಈತನನ್ನು ಊರುತುಂಬ ಮೆರವಣಿಗೆ ಮಾಡಿ, ಪಟಾಕಿ ಸಿಡಿಸಿ, ಗ್ರಾಮಸ್ಥರು ಸಂಭ್ರಮಿಸಿದ್ದಾರೆ. ಈತನಿಗೆ ಹೂಮಾಲೆ ಹಾಕಿ, ಇವನ ಪರ ಜೈಕಾರವೂ ಕೂಗಿದ್ದಾರೆ, ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ಸಖತ್ ವೈರಲ್ ಆಗಿದೆ.

ಕೃಷ್ಣ ನಾಮದೇವ್‌ ಮುಂಡೆ ಎಂಬ ಯುವಕ, 10ನೇ ತರಗತಿಯಲ್ಲಿ ಹತ್ತು ಬಾರಿ ಫೇಲ್ ಆಗಿ, ಹನ್ನೊಂದನೇ ಬಾರಿ ಪಾಸ್ ಆಗಿದ್ದಾನೆ. ಈತ ಹತ್ತನೇ ತರಗತಿಯಲ್ಲಿ ಪ್ರತೀ ವರ್ಷ ಒಂದೊಂದೇ ಸಬ್ಜೆಕ್ಟ್‌ನಲ್ಲಿ ಪಾಸ್ ಆಗಿ, ಇದೀಗ ಎಲ್ಲ ಸಬ್ಜೆಕ್ಟ್ ಕ್ಲೀಯರ್ ಮಾಡಿಕೊಂಡಿದ್ದಾನೆ.

ಈ ಮೂಲಕ, ಒಂದು ಬಾರಿ ಫೇಲ್ ಆದ್ರೆ ಸಾಕು ಆತ್ಮಹತ್ಯೆಯ ಯೋಚನೆ ಮಾಡುವ ಮಕ್ಕಳಿಗೆಲ್ಲ ಈತ ಮಾದರಿಯಾಗಿದ್ದಾನೆ. ಫೇಲ್ ಆಗೋದು ದೊಡ್ಡ ವಿಷಯವಲ್ಲ. ಬದಲಾಗಿ, ಅದನ್ನು ಧೈರ್ಯದಿಂದ ಎದುರಿಸಿ, ಪಾಸ್ ಆಗಬೇಕು ಅನ್ನೋದು ಇವನಿಂದ ಕಲಿಯಬಹುದಾಗಿದೆ.

ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಸಿಂಹ ಘರ್ಜನೆ ಮಾಡುತ್ತಿರುವ ನೂತನ ಡಿ.ಸಿ.ಪಿ.ಕುಶಾಲ್ ಚೌಕ್ಸೆ

ಜೂನ್ 2ರಿಂದ ಜೂನ್ 5ರವರೆಗೆ ಕೃ.ವಿ.ವಿ ಮತ ಎಣಿಕೆ ಕೇಂದ್ರದ ಸುತ್ತ ಪ್ರತಿಬಂಧಕಾಜ್ಞೆ ಜಾರಿ

ಎಲ್ಲರೆದುರು ನಟಿಯನ್ನು ತಳ್ಳಿದ ನಟ ಬಾಲಯ್ಯ. ವೀಡಿಯೋ ವೈರಲ್

About The Author