Hubballi News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿಂದು ಕೂದಲೆಳೆ ಅಂತರದಿಂದ ಜನ ಪಾರಾಗಿದ್ದು, ಬದುಕಿತು ಬಡಜೀವ ಎಂಬಂತೆ ಮನೆಗೆ ಹೋಗಿದ್ದಾರೆ. ರೇಲ್ವೆ ಇಲಾಖೆಯ ಆಲಸ್ಯವೋ ಅಥವಾ ನಿರ್ಲಕ್ಷ್ಯತನವೋ ಗೊತ್ತಿಲ್ಲ. ಕೂದಲೆಳೆ ಅಂತರದಲ್ಲಿ ಬಹುದೊಡ್ಡ ದುರಂತ ತಪ್ಪಿದೆ.
ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಬಳಿ ಬೃಹದಾಕಾರದ ಕಬ್ಬಿಣದ ಕಂಬ ನೆಲಕ್ಕುರುಳಿದ್ದು, ಈ ದೃಶ್ಯ ಸ್ಥಳದಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯ ನೋಡಲು ಭಯಂಕರವಾಗಿದ್ದು, ನೋಡುವವರ ಎದೆ ಝಲ್ ಅನ್ನುವಂತೆ ಮಾಡತ್ತೆ.
ಬ್ರಿಡ್ಜ್ ಬಳಿ ಬೃಹತ್ ವಾಹನಗಳ ಪ್ರವೇಶ ನಿರ್ಬಂಧಿಸುವ ದೃಷ್ಟಿಯಿಂದ ಕಬ್ಬಿಣದ ಬೃಹತ್ ಕಂಬ ಹಾಕಲಾಗಿತ್ತು. ಆದರೆ ತುಕ್ಕು ಹಿಡಿದ ಈ ಕಂಬ ತನ್ನಷ್ಟಕ್ಕೆ ತಾನೇ ನೆಲಕ್ಕುರುಳಿದೆ. ಕಳೆದ ಮೂರು ತಿಂಗಳ ಹಿಂದೆ ಅಷ್ಟೇ ಈ ರೀತಿಯ ದುರ್ಘಟನೆ ನಡೆದಿತ್ತು. ಆದರೂ ಕೂಡ ರೈಲ್ವೆ ಇಲಾಖೆ ಎಚ್ಚೆತ್ತುಕೊಳ್ಳದೇ, ನಿರ್ಲಕ್ಷ್ಯ ತೋರಿದ್ದಕ್ಕೆ, ಇಂದು ಇದೇ ರೀತಿಯ ಘಟನೆ ಮರುಕಳಿಸಿದೆ.
ಈ ಸ್ಥಳದಲ್ಲಿ ಬಸ್, ಕಾರು, ಸೇರಿ ಹಲವು ವಾಹನಗಳು ಓಡಾಡುತ್ತಿರುತ್ತದೆ. ಜನರೂ ಓಡಾಡುತ್ತಾರೆ. ಹುಬ್ಬಳ್ಳಿ-ಗದಗ ಎನ್‌ಎಚ್-63 ರಸ್ತೆ ಸಂಪರ್ಕಿಸುವ ಮುಖ್ಯ ರಸ್ತೆ, ಜನಜಂಗುಳಿಯಿಂದ ತುಂಬಿದ ಈ ಪ್ರದೇಶದಲ್ಲಿ ಈ ರೀತಿ ಹಾನಿ ಸಂಭವಿಸಿದ್ದು, ಜನ ಆಕ್ರೋಶ ಹೊರಹಾಕಿದ್ದಾರೆ. ಅಪ್ಪಿತಪ್ಪಿ ವಾಹನಗಳ ಮೇಲೆ ಈ ಕಂಬ ಬಿದ್ದಿದ್ದರೆ, ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು. ಆದರೆ ಅದೃಷ್ಟವಶಾತ್, ಯಾವುದೇ ಪ್ರಾಣಹಾನಿಯಾಗಲಿಲ್ಲ. ದಿವ್ಯ ನಿರ್ಲಕ್ಷ್ಯ ವಹಿಸಿದ ರೇಲ್ವೆ ಇಲಾಖೆಯ ಅಧಿಕಾರಗಳ ವಿರುದ್ಧ ಕ್ರಮಕ್ಕೆ ಹುಬ್ಬಳ್ಳಿಯ ಜನರ ಆಗ್ರಹಿಸಿದ್ದಾರೆ.
ಗೊಂಬೆಗಳ ಮದುವೆ ಮಾಡುವ ಮೂಲಕ ಮಳೆಗಾಗಿ ವರುಣನಲ್ಲಿ ಪ್ರಾರ್ಥಿಸಿದ ಅನ್ನದಾತರು..
‘ವಿದ್ಯುತ್ ದರ ಹೆಚ್ಚಿಸಿ ಇತರರಿಗೆ ತೊಂದರೆ ತಂದೊಡ್ಡುತ್ತಿರುವುದು ಸರಿಯಾದ ಕ್ರಮವಲ್ಲ’