ಹಾಸನದ ಕಾಫಿ ತೋಟದಲ್ಲಿ ಕಾಣಿಸಿಕೊಂಡ ಬೃಹತ್ ಕಾಳಿಂಗ ಸರ್ಪ

Hassan News: ಹಾಸನ: ಹಾಸನದ ಕಾಫಿ ತೋಟದಲ್ಲಿ ಬೃಹತ್ ಕಾಳಿಂಗ ಸರ್ಪ ಕಾಣಿಸಿಕೊಂಡಿದ್ದು, ಬ್ಲಾಕ್ ಕೋಬ್ರಾ ಕಂಡು ಕಾರ್ಮಿಕರು ಬೆಚ್ಚಿಬಿದ್ದಿದ್ದಾರೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ, ಚಿಮ್ಮಿಕೋಲು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ದಸ್ತಗೀರ್‌ ಬಂದು ಕಾಳಿಂಗ ಸರ್ಪವನ್ನು ಹಿಡಿದಿದ್ದಾರೆ.

ಗ್ರಾಮದ ಚಿಮ್ಮಿಕೋಲು ಕಾಫಿ ಎಸ್ಟೇಟಿನಲ್ಲಿ ಕಾಫಿ ಗಿಡದಲ್ಲಿ ಕಾಳಿಂಗ ಸರ್ಪ ಅಡಗಿ ಕುಳಿತಿದ್ದು, ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸೆರೆ ಹಿಡಿಯಲಾಗಿದೆ. ಬಳಿಕ ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.

ಕೂಲಿ ಕೆಲಸಕ್ಕೆ ತೆರಳುತ್ತಿದ್ದವರ ಮೇಲೆ ಕಾಡಾನೆ ದಾಳಿ: ಕಾಲು ಮುರಿತ

ದರ್ಶನ್ ಕೇಸ್ ಬಗ್ಗೆ ಹುಬ್ಬಳ್ಳಿಯಲ್ಲಿ ಇಂದ್ರಜೀತ್‌ ಲಂಕೇಶ್ ಮಾತು

ಹಿಂದಿನ ಕೇಸ್‌ನಲ್ಲಿ ಕಠಿಣ ಕ್ರಮ ಕೈಗೊಂಡಿದ್ದರೆ, ಇಂದು ಇಂಥ ಪರಿಸ್ಥಿತಿ ಬರುತ್ತಿರಲಿಲ್ಲ: ಮಾಜಿ ಶಾಸಕ ಎ.ಟಿ.ರಾಮಸ್ವಾಮಿ

About The Author