Tuesday, April 15, 2025

Latest Posts

1150 ಪ್ಯಾಕೇಟ್ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿ ವಶ

- Advertisement -

Ballary News: ಬಳ್ಳಾರಿ: ಬಳ್ಳಾರಿಯಲ್ಲಿ 1150 ಪ್ಯಾಕೇಟ್ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿ ವಶಪಡಿಸಿಕೊಳ್ಳಲಾಗಿದೆ. ಈ ಘಟನೆ ನಡೆದು ಹಲವು ದಿನಗಳಾಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ತೆಕ್ಕಲಕೋಟೆ ಸುಂದರೇಶ ಅವರ ಮಾರ್ಗದರ್ಶನದಲ್ಲಿ, ಸಿರಿಗೇರಿ ಪೋಲೀಸರು ಪಡಿತರ ಅಕ್ಕಿ ತುಂಬಿದ ಲಾರಿ ವಶಪಡಿಸಿಕೊಂಡಿದ್ದು, ಜಿಲ್ಲೆಯ ಸಿರುಗುಪ್ಪ ತಾಲೂಕಿನ ಶಾನವಾಶಪುರ ಗ್ರಾಮದ  ಸ್ಪೈಸಿ ಡಾಬಾದ ಬಳಿ ಘಟನೆ ನಡೆದಿದೆ.

ಸಿರುಗುಪ್ಪ ಆಹಾರ ನೀರಿಕ್ಷಕ ಮಹಾರುದ್ರಗೌಡ ಅವರು ನೀಡಿದ ಮಾಹಿತಿ ಆಧರಿಸಿ, ಸುಮಾರು 6,48,785-ರೂ ಬೆಲೆ ಬಾಳುವ ಪಡಿತರ ಅಕ್ಕಿಯಿದ್ದ ಲಾರಿ ವಶಪಡಿಸಿಕೊಳ್ಳಲಾಗಿದೆ. ಆರೋಪಿ ನಾಗೇಂದ್ರ 1125 ಅಕ್ಕಿ ಪ್ಯಾಕೇಟ್ ಲೋಡ್ ಮಾಡಿಸಿಕೊಂಡು ತುಮಕೂರುಗೆ ಸಾಗಿಸುತ್ತಿದ್ದ. ಈ ವೇಳೆ ಲೋಡ್ ಮಾಡಿಕೊಂಡು ಹೋಗುತ್ತಿದ್ದ ಲಾರಿಗೆ ಅಡ್ಡಗಟ್ಟಿ ದಾಳಿ ಮಾಡಿದ ಅಧಿಕಾರಿಗಳು, ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.

ಪಡಿತರ ಅಕ್ಕಿ ಸಾಗಾಟಕ್ಕೆ ಬಳಕೆ ಮಾಡಿರುವ ಲಾರಿಯನ್ನು  ಆಹಾರ ಇಲಾಖೆಯವರ ಸಮ್ಮುಖದಲ್ಲಿ ಪೊಲೀಸರು ಜಪ್ತಿ ಮಾಡಿಕೊಂಡಿದ್ದು, ಈ ಕುರಿತು ಸಿರಿಗೇರಿ ಪೋಲೀಸ್ ಠಾಣಾಯಲ್ಲಿ ಎಫ್.ಐ.ಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

‘ನಾನೇ ಅಂತರ್ಜಾತಿ ವಿವಾಹ ಆಗಿದ್ದೇನೆ. ನಾನೇನು ಚೇಂಜ್ ಆಗಿದ್ದೀನಾ..?’

ಕೊಲೆ ಮಾಡಿ ಕಾಣೆಯಾದಳೆಂದು ಕಥೆ ಕಟ್ಟಿದವರು 3 ವರ್ಷದ ಬಳಿಕ ಅಂದರ್‌..

MTB Nagaraj : ಶಾಸಕ ಶರತ್ ಬಚ್ಚೇಗೌಡ ವಿರುದ್ಧ ಮತ್ತೆ ಆರೋಪಿಸಿದ ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್

- Advertisement -

Latest Posts

Don't Miss