Thailand News: ಥಾಯ್‌ಲ್ಯಾಂಡ್‌ನ ಬೌದ್ಧ ಮಂದಿರವೊಂದರಲ್ಲಿ ಬುದ್ಧನ ವಿಗ್ರಹ ಕೆಡವಲು ಬಂದಿದ್ದ ವ್ಯಕ್ತಿಯೋರ್ವ, ಆ ವಿಗ್ರಹದ ಎದುರೇ ಬಿದ್ದು ಸಾವನ್ನಪ್ಪಿದ್ದಾನೆ.
ಕಂಠ ಪೂರ್ತಿ ಕುಡಿದಿದ್ದ ವ್ಯಕ್ತಿ ಮೂರ್ತಿ ಕೆಡವಲು ಬಂದಾಗ, ಅಲ್ಲಿದ್ದ ಚೂಪಾದ ವಸ್ತು ಅವರ ಎದೆಯ ಭಾಗಕ್ಕೆ ತಾಗಿ, ರಕ್ತಸ್ರಾವವಾಗಿದೆ. ಈ ಕಾರಣಕ್ಕೆ, ಸ್ಥಳದಲ್ಲೇ ಕುಸಿದು ಬಿದ್ದ ವ್ಯಕ್ತಿ, ಅಲ್ಲೇ ಸಾವನ್ನಪ್ಪಿದ್ದಾನೆ.
ಥಾಯ್ಲೆಂಡ್‌ನ ಬಾನ್‌ಬಂಗ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಏಕಾಏಕಿ ಮಂದಿರದೊಳಗೆ ನುಗ್ಗಿದ ದುಷ್ಕರ್ಮಿ, ಅಲ್ಲಿದ್ದ ಎಲ್ಲ ವಸ್ತುಗಳನ್ನು ಕೆಡವಿದ್ದಾನೆ. ಆಗ ಅಲ್ಲಿದ್ದ ಬೌದ್ಧ ಭಿಕ್ಷುಗಳು, ಅವನನ್ನು ತಡೆಯಲು ಯತ್ನಿಸಿದ್ದಾರೆ. ಆದರೆ ಅವರ ಮೇಲೂ ಹಲ್ಲೆಗೆ ಯತ್ನಿಸಿದ ವ್ಯಕ್ತಿ, ದೇವರ ವಿಗ್ರಹ ಕೆಡವಲು ಮುಂದಾಗಿದ್ದಾನೆ.
ಆ ವಿಗ್ರಹದಲ್ಲಿದ್ದ ಚೂಪಾದ ವಸ್ತು ಅವನ ಎದೆಗೆ ತಾಗಿ, ರಕ್ತಸ್ರಾವವಾಗಿ, ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತ ದುಷ್ಕರ್ಮಿಯನ್ನು ಥಾಯ್ (49) ವರ್ಷದ ಥಾಯ್ ಎಂದು ಗುರುತಿಸಲಾಗಿದೆ. ಈ ಘಟನೆ ನಡೆದಿದ್ದು ಫೆಬ್ರವರಿಯಲ್ಲಾದರೂ, ಈ ವಿಚಾರ ಮಾತ್ರ ಇತ್ತೀಚೆಗೆ ಬೆಳಕಿಕೆ ಬಂದಿದೆ.

ಮಮತಾ ಬ್ಯಾನರ್ಜಿ ಬಗ್ಗೆ ವಿವಾದಾತ್ಮಕ ಹೇಳಿಕೆ: ಬಿಜೆಪಿ ಅಭ್ಯರ್ಥಿಗೆ 1 ದಿನದ ಪ್ರಚಾರ ನಿಷೇಧ
Baby Death: ಮನೆಯಲ್ಲಿ ಒಬ್ಬಂಟಿಯಾಗಿ ಮಗುವನ್ನು ಬಿಟ್ಟು ಹೋದ ಪೋಷಕರು: ಮಗು ಸಾವು
National News: ಎಮಿರೇಟ್ಸ್ ವಿಮಾನ ಡಿಕ್ಕಿ: 35ಕ್ಕೂ ಹೆಚ್ಚು ರಾಜಹಂಸ ಪಕ್ಷಿಗಳ ಸಾವು..?




