Kerala News: ಕೇರಳದ ಕಟ್ಟಿಪುರಂ ಬಸ್ ನಿಲ್ದಾಣದ ಬಳಿ, ವ್ಯಕ್ತಿಯೋರ್ವ ಪ್ಲಾಸ್ಟಿಕ್‌ನಲ್ಲಿದ್ದ ತಿಂಡಿಯನ್ನು ತಿನ್ನುತ್ತಿದ್ದ. ಆದರೆ ಆ ಆಹಾರ ಸಿಕ್ಕಾಪಟ್ಟೆ ಗಬ್ಬು ಗಬ್ಬಾಗಿ ವಾಸನೆ ಬರುತ್ತಿದ್ದ ಕಾರಣ, ಸ್ಥಳದಲ್ಲೇ ಇದ್ದ ಕೆಲವರು ಏನು ಸೇವಿಸುತ್ತಿದ್ದಿ ಎಂದು ಆ ವ್ಯಕ್ತಿಗೆ ಕೇಳಿದ್ದಾರೆ. ಬಳಿಕ ಆತ ಬೆಕ್ಕಿನ ಹಸಿ ಮಾಂಸ ತಿನ್ನುತ್ತಾ ಇರುವುದಾಗಿ ತಿಳಿಸಿದ್ದಾನೆ.
ಬಳಿಕ ಅಲ್ಲಿದ್ದ ಜನ ಪೊಲೀಸರನ್ನು ಕರೆಸಿದ್ದು, ಆ ವ್ಯಕ್ತಿಯನ್ನು ವಿಚಾರಿಸಿದಾಗ, ತಾನು ನಾಲ್ಕು ದಿನದಿಂದ ಏನೂ ತಿನ್ನಲಿಲ್ಲ. ತನಗೆ ಯಾರೂ ಊಟ ಕೊಟ್ಟಿಲ್ಲ. ಹಾಗಾಗಿ ಹಸಿವು ತಡೆಯಲಾಗದೇ, ತಾನು ಬೆಕ್ಕಿನ ಹಸಿ ಮಾಂಸ ತಿನ್ನುತ್ತಾ ಇರುವುದಾಗಿ ಹೇಳಿದ್ದಾನೆ, ಬಳಿಕ ಪೊಲೀಸರು ಅವನನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ನೀಡಿದ್ದಾರೆ.
ಬಳಿಕ ಆ ವ್ಯಕ್ತಿಗೆ ಪೊಲೀಸರು ಊಟ ಕೊಡಿಸಿದ್ದಾರೆ. ವಿಚಾರಣೆ ನಡೆಸಿದಾಗ, ಆ ವ್ಯಕ್ತಿ ಅಸ್ಸಾನ ಧುಬ್ರಿ ಜಿಲ್ಲೆಯ ವ್ಯಕ್ತಿಯಾಗಿದ್ದು, ಚೆನ್ನೈನಲ್ಲಿರುವ ಸಹೋದರನ ಮನೆ ಬಿಟ್ಟು ಕೇರಳಕ್ಕೆ ಬಂದಿದ್ದಾನೆ ಎಂದು ಗೊತ್ತಾಗಿದೆ. ಅಲ್ಲದೇ ಈತ ಮಾನಸಿಕ ರೋಗಿಯಾಗಿದ್ದು, ಮನೆಯಿಂದ ತಪ್ಪಿಸಿಕೊಂಡು ಬಂದಿದ್ದಾನೆ. ಅತ್ತ ಚೈನ್ನೈನಲ್ಲಿ ಈತನ ಸಹೋದರ, ತಮ್ಮ ಕಳೆದು ಹೋಗಿ ನಾಲ್ಕು ದಿನಗಳಾಗಿದೆ ಎಂದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆಂದು ತಿಳಿದು ಬಂದಿದೆ. ಸದ್ಯ ಈ ವ್ಯಕ್ತಿಯನ್ನು ಕೇರಳದ ಕೊಝಿಕ್ಕೋಡ್ ಆಸ್ಪತ್ರೆಗೆ ದಾಖಲಿಸಿ, ಮಾನಸಿಕ ರೋಗಕ್ಕೆ ಚಿಕಿತ್ಸೆ ಕೊಡಿಸಲಾಗುತ್ತಿದೆ.
ವಿಜಯೇಂದ್ರ ಬದಲು ಯತೀಂದ್ರ ಹೆಸರು: ಭಾಷಣದುದ್ದಕ್ಕೂ ಸಚಿವ ಸಂತೋಷ್ ಲಾಡ್ ಯಡವಟ್ಟು
ರಾಜ್ಯಕ್ಕೆ ಅನ್ಯಾಯವಾಗಿದರೂ ಒಬ್ಬ ಸಂಸದರೂ ಧ್ವನಿ ಎತ್ತಿಲ್ಲ- ಡಿಸಿಎಂ ಡಿ.ಕೆ.ಶಿವಕುಮಾರ್..!
ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ; ಉಸ್ತುವಾರಿಗಳನ್ನು ನೇಮಕ ಮಾಡಿದ ಜೆಡಿಎಸ್