ವೃದ್ಧನ ಶವವನ್ನು ಫ್ರಿಜ್‌ನಲ್ಲಿರಿಸಿ, ಪೆನ್ಶನ್‌ ಹಣದಿಂದ ಮೋಜು ಮಾಡುತ್ತಿದ್ದ ವ್ಯಕ್ತಿ ಅರೆಸ್ಟ್..

ಯುಕೆ: ವೃದ್ಧನ ಪಿಂಚಣಿ ಹಣ ಸಿಗುತ್ತದೆ ಎಂದು ಆ ಮನೆಯವರು ಅವನ ಹೆಣವನ್ನ ಇರಿಸಿಕೊಂಡು, ಅವನಿಗೆ ಬರುವ ಪಿಂಚಣಿಹಣದಿಂದ ಮಜಾ ಮಾಡಿದ ಘಟನೆ ಬರ್ಮಿಂಗ್ ಹ್ಯಾಮ್‌ನಲ್ಲಿ ನಡೆದಿದೆ.

ಎರಡು ವರ್ಷಗಳ ಹಿಂದೆ ಜಾನ್‌ವೈನ್‌ರೈಟ್‌(71) ಎಂಬ ವೃದ್ಧ ತೀರಿಹೋಗಿದ್ದರು. ಡೇಮಿಯನ್ ಜಾನ್ಸನ್(52) ಎಂಬಾತ ಈ ವೃದ್ಧನೊಂದಿಗೆ ಬರ್ಮಿಂಗ್ ಹ್ಯಾಮ್‌ನ ಡೌನ್‌ಟೌನ್ ಕ್ಲೀವ್‌ಲ್ಯಾಂಡ್ ಟವರ್‌, ಹೋಲಿವೆಲ್ ಹೆಡ್‌ನಲ್ಲಿರುವ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದ್ದರು. ಆದರೆ ಜಾನ್ ಎರಡು ವರ್ಷದ ಹಿಂದೆಯೇ ತೀರಿಕೊಂಡಿದ್ದಾನೆ.

ಇವನ ಸಾವು ಹೇಗಾಯಿತು ಎಂದು ತಿಳಿದುಬಂದಿಲ್ಲ. ಆದರೆ ತಾನು ಎರಡು ವರ್ಷದಿಂದ ವೃದ್ಧನ ಹೆಣವನ್ನು ಫ್ರಿಜ್‌ನಲ್ಲಿ ಇರಿಸಿದ್ದೇನೆ. ಮತ್ತು ಅವರಿಗೆ ಬರುವ ಪಿಂಚಣಿ ಹಣದಿಂದ ಶಾಪಿಂಗ್ ಮಾಡುತ್ತಿದ್ದೆ ಎಂದು ಡೇಮಿಯನ್ ಜಾನ್ಸನ್‌ ತಪ್ಪೊಪ್ಪಿಕೊಂಡಿದ್ದಾನೆ. ಡೇಮಿಯನ್ ವೃದ್ಧನ ಪುತ್ರನಾಗಿದ್ದಾನೆಂದು ಹೇಳಲಾಗಿದೆ.

‘ಅಗತ್ಯವಿದ್ದರೆ ನಮ್ಮ ರಾಜ್ಯದಲ್ಲೂ ಭಜರಂಗದಳವನ್ನ ಬ್ಯಾನ್ ಮಾಡುತ್ತೇವೆ’..

ಹೇಮಾವತಿ ನಗರದಲ್ಲಿ ಸ್ವರೂಪ್‌ಗೆ ಅದ್ಧೂರಿ ಸ್ವಾಗತ: ಸುಳ್ಳಾಯ್ತಾ ಪ್ರೀತಂ ಚಾಲೆಂಜ್..?

ಪ್ರಿಯಾಂಕ್ ಖರ್ಗೆ ಪತ್ನಿಗೆ ಬ್ರೇನ್ ಟ್ಯೂಮರ್: ಸಹೋದರನಿಗೂ ಅನಾರೋಗ್ಯ..

About The Author