Dharwad News: ಧಾರವಾಡ: ಧಾರವಾಡದಲ್ಲಿ ರಿಯಲ್ ಎಸ್ಟೇಟ್ ದ್ವೇಷಕ್ಕೆ ವ್ಯಕ್ತಿಯ ಹೆಣ ಬಿದ್ದಿದ್ದು, ಪೊಲೀಸರ ಕುಟುಂಬದಲ್ಲೇ ಊಹಿಸಲು ಸಾಧ್ಯವಾಗದ ಘಟನೆ ನಡೆದಿದೆ.
ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗರಗ ಪೋಲಿಸ್ ಠಾಣೆಯ 100 ಮೀಟರ್ ಅಂತರದಲ್ಲಿ ಚಾಕುವಿನಿಂದ ಚುಚ್ಚಿ ಬರ್ಬರ ಕೊಲೆ ಮಾಡಲಾಗಿದೆ. ರಿಯಲ್ ಎಷ್ಟೆಟ್ ಉದ್ಯಮಿ ಗೀರಿಶ ಕರಡಿಗುಡ್ಡ 45 ಎಂಬುವವರ ಬರ್ಬರ ಕೊಲೆ ಮಾಡಲಾಗಿದೆ.
ಗಿರೀಶ್ ಸೊಸೆ ಧಾರವಾಾಡ ಎಸ್ಪಿ ಕಚೇರಿಯಲ್ಲೇ ಹವಾಲ್ದಾರ್ ಆಗಿ ಕೆಲಸ ಮಾಡುತ್ತಿದ್ದ ಪೊಲೀಸ್ ಪೇದೆಯಾಗಿದ್ದಾರೆ. ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ, ಗಿರೀಶ್ ನಿದ್ದೆ ಮಾಡುತ್ತಿದ್ದರು. ಈ ವೇಳೆ ಮನೆಗೆ ನುಗ್ಗಿದ ದುಷ್ಕರ್ಮಿಗಳು, ಮನೆಯಲ್ಲಿ ಯಾರು ಇಲ್ಲದೆ ವೇಳೆ ಚಾಕು ಮತ್ತು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿದ್ದಾರೆ.
ಸ್ಥಳಕ್ಕೆ, ಎಸ್ಪಿ ಗೋಪಾಲ ಬ್ಯಾಕೋಡ, ಎ ಎಸ್ ಪಿ ಬರಮಣಿ, ಸಿಪಿಐ ಸಮಿರ್ ಮುಲ್ಲಾ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸ್ವಾನದಳ, ಬೆರಳಚ್ಚು ತಜ್ಞರು ಕೂಡ ಕೃತ್ಯ ನಡೆದ ಸ್ಥಳದಲ್ಲಿ ಪರಿಶಿಲನೆ ನಡೆಸಿದ್ದಾರೆ. ಗರಗ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಆರೋಪಿಗಳ ಶೋಧನೆಗಾಗಿ ಎಸ್ಪಿ ಎರಡು ತಂಡ ರಚನೆ ಮಾಡಿದ್ದಾರೆ. ಆದಷ್ಟು ಬೇಗ ಆರೋಪಿಗಳನ್ನ ಪತ್ತೆ ಹಚ್ಚಲಾಗುವುದು ಎಂದ ಎಸ್ಪಿ ಗೋಪಾಲ ಬ್ಯಾಕೋಡ ಹೇಳಿದ್ದಾರೆ. ಪೊಲೀಸರ ಮನೆಯಲ್ಲೇ ಹೀಗಾದರೆ, ಜನ ಸಾಮಾನ್ಯರ ಪರಿಸ್ಥಿತಿ ಏನು ಎಂಬ ಪ್ರಶ್ನೆ ಸದ್ಯ ಉದ್ಭವಿಸಿದೆ.