Hassan News: ಹಾಸನ: ತಾಳಿ ಕಟ್ಟುವ ವೇಳೆ ಸಿನಿಮೀಯ ರೀತಿಯಲ್ಲಿ ಮದುವೆ ಮುರಿದು ಬಿದ್ದ ಘಟನೆ ಹಾಸನ ಜಿಲ್ಲೆಯ ಬೇಲೂರಿನಲ್ಲಿ ನಡೆದಿದೆ.
ಇಂದು ಬೇಲೂರಿನ ಒಕ್ಕಲಿಗರ ಸಂಘದಲ್ಲಿ ಈ ಮದುವೆ ನಡೆಯಬೇಕಿತ್ತು. ಬೇಲೂರಿನ ತೇಜಸ್ವಿನಿ ಮತ್ತು ಶಿವಮೊಗ್ಗ ಮೂಲದ ಪ್ರಮೋದ್ ಕುಮಾರ್ ಮದುವೆ ನಿಶ್ಚಯವಾಗಿತ್ತು. ಆದರೆ ತಾಳಿ ಕಟ್ಟುವ ಸಮಯದಲ್ಲೇ ಬಂದ ವಧುವಿನ ಮಾಜಿ ಪ್ರಿಯಕರ ನವೀನ್, ರಾದ್ಧಾಂತ ಮಾಡಿ, ಮದುವೆಗೆ ಅಡ್ಡಿಪಡಿಸಿದ್ದಾನೆ. ತಾಳಿ ಕಿತ್ತುಕೊಂಡು, ತೇಜಸ್ವಿನಿ ನನ್ನನ್ನು ಪ್ರೀತಿಸುತ್ತಿದ್ದಾಳೆ. ನನ್ನ ಜೊತೆ ಆಕೆಯ ಮದುವೆ ಮಾಡಿಕೊಡಿ ಎಂದು ಪಟ್ಟು ಹಿಡಿದಿದ್ದಾನೆ.
ಮದುವೆ ಮಂಟಪದಲ್ಲಿ ಕೆಲ ಕಾಲ ಗೊಂದಲ ನಿರ್ಮಾಣವಾಗಿದ್ದು, ಬೇಲೂರು ಪೊಲೀಸರು ಸ್ಥಳಕ್ಕೆ ಬಂದು, ನವೀನ್‌ನನ್ನು ವಶಕ್ಕೆ ಪಡೆದು ವಿಚಾರಣೆಗೆ ಕರೆದೊಯ್ದರು. ಇನ್ನು ತೇಜಸ್ವಿನಿ ಮತ್ತು ನವೀನ್ ಪ್ರೀತಿಯ ವಿಚಾರ ತಿಳಿದು, ಮಧುಮಗ ಪ್ರಮೋದ್ ಕುಮಾರ್ ಮದುವೆ ಬೇಡವೆಂದು ಎದ್ದು ಹೋಗಿದ್ದಾನೆ. ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಕಾಂಗ್ರೆಸ್ ಸರ್ಕಾರ ಹಾಸನದ ರೈತರಿಗೂ ದ್ರೋಹ ಬಗೆದಿದೆ: ಮಾಜಿ ಶಾಸಕ ಪ್ರೀತಂಗೌಡ
ಮಾಜಿ ಸಿಎಂ ಯಡಿಯೂರಪ್ಪ, ವಿಜಯೇಂದ್ರ ಅವರನ್ನು ಭೇಟಿಯಾದ ಮಾಜಿ ಸಚಿವ ರೇವಣ್ಣ, ಪ್ರಜ್ವಲ್