Hubballi News: ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಸಮೀಪಿಸುತ್ತಿದ್ದಂತೆ, ಬಿಜೆಪಿ ನಾಯಕರನ್ನು ದಾಂಡೇಲಿ ರೆಸಾರ್ಟ್‌ಗೆ ಕರೆದೊಯ್ಯಲಾಗಿದೆ. ಇಂದಿಗೆ ಮೂರನೇ ದಿನವಾಗಿದ್ದು, ಹು-ಧಾ ಮಹಾನಗರ ಪಾಲಿಕೆಯ ಸದಸ್ಯರ ರೆಸಾರ್ಟ್ ರಾಜಕೀಯ ಮುಂದುವರೆದಿದೆ.
ಇನ್ನೊಂದೆಡೆ ಪಾಲಿಕೆ ಅಧಿಕಾರಕ್ಕೆ ಕೈ ನಾಯಕರು ತಂತ್ರ ನಡೆಸಿದ್ದು, ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಟೀಮ್ ರೆಡಿ ಮಾಡಲಾಗಿದೆ. ಕಾಂಗ್ರೆಸ್ ನಾಯಕರು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ನೇತೃತ್ವದಲ್ಲಿ ರಣತಂತ್ರ ರೂಪಿಸಿ, ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಪ್ಲಾನ್ ಮಾಡಿದೆ.
ರಾಜ್ಯ ರಾಜಕಾರಣದಲ್ಲಿ ವಿಧಾನಸಭಾ ಚುನಾವಣಾ ಮುಗಿಯುತ್ತಿದ್ದಂತೆಯೇ ಪಾಲಿಕೆ ಅಧಿಕಾರದ ಕಾವು ಜೋರಾಗಿದ್ದು, ಈಗಾಗಲೇ ಮೇಯರ್, ಉಪಮೇಯರ್ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಶಾಸಕ ಪ್ರಸಾದ ಅಬ್ಬಯ್ಯ, ಗ್ರಾಮೀಣ ಅಧ್ಯಕ್ಷ ಅನಿಲಕುಮಾರ್ ಪಾಟೀಲ ಸೇರಿ ಸಭೆ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಸಭೆ ನಡೆಸಿ ಮತ್ತೊಂದು ತಂತ್ರ ರೂಪಿಸುವ ಮೂಲಕ ಶತಾಯು ಗತಾಯು ಪಾಲಿಕೆ ಕೈ ವಶ ಮಾಡಿಕೊಳ್ಳಲು ಟೀಮ್ ರೆಡಿ ಮಾಡಿ, ಪ್ಲಾನ್ ಮಾಡಲಾಗುತ್ತಿದೆ.
ಹುಬ್ಬಳ್ಳಿಯಲ್ಲಿ ಆಪರೇಶನ್ ಹಸ್ತಕ್ಕೆ ಶೆಟ್ಟರ್ ಟೀಂ ಪ್ಲಾನ್: ಓರ್ವ ಸದಸ್ಯನಿಗೆ ಎಷ್ಟು ಅಮೌಂಟ್ ಗೊತ್ತಾ..?
‘ನಮ್ಮಂಥವರ ಸಲಹೆ ಇಂದಿನ ಸಚಿವರು, ಅಧಿಕಾರಿಗಳು ಕೇಳಬೇಕು. ನಮ್ಮಂಥರಿಗೆ ಸಾಕಷ್ಟು ಜ್ಞಾನ ಇದೆ.’
‘ಗ್ಯಾರಂಟಿ ಭ್ರಮೆ ಹುಟ್ಟಿಸಿದ್ದು ನೋಡಿದ್ರೆ ಸರಕಾರದ ಜನಪ್ರಿಯತೆ ಬಹಳ ದಿನ ಉಳಿಯಲ್ಲ’

