National News: ರಾಮನನ್ನು ಕಾಣಲು ಅದೆಷ್ಟೋ ಜನ ಚಡಪಡಿಸುತ್ತಿದ್ದಾರೆ. ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಾವೂ ಭಾಗಿಯಾಗಬೇಕೆಂದು ಹಲವರು ಇಷ್ಟಪಡುತ್ತಿದ್ದಾರೆ. ಆದರೆ ಅದು ಸಾಧ್ಯವಾಗುವುದಿಲ್ಲ. ಅಲ್ಲಿ ಕೆಲವೇ ಕೆಲವು ಗಣ್ಯರು, ಭಕ್ತರು ಮಾತ್ರ ಸೇರುವಷ್ಟು ವ್ಯವಸ್ಥೆ ಇದೆ. ಆದರೂ ಕೆಲ ಭಕ್ತರು ಸೈಕಲ್ ಏರಿ, ಪಾದಯಾತ್ರೆ ಮಾಡಿಯಾದರೂ, ನಾವು ರಾಮಲಲ್ಲಾ ದರ್ಶನ ಮಾಡೇ ಮಾಡುತ್ತೇವೆ ಎಂದು ಹೊರಟಿದ್ದಾರೆ.
ಇನ್ನು ವಿಶೇಷ ಅಂದ್ರೆ, ಕನಸಿನಲ್ಲಿ ರಾಮ ಕಂಡನೆಂದು, ಮುಸ್ಲಿಂ ಮಹಿಳೆ ತನ್ನೂರಿನಿಂದ ಅಯೋಧ್ಯೆಗೆ 700 ಕಿ.ಮೀ ನಡೆದು, ಅಯೋಧ್ಯೆಗೆ, ಶ್ರೀರಾಮನ ದರ್ಶನ ಮಾಡಲು ಹೊರಟು ನಿಂತಿದ್ದಾರೆ. ದೆಹಲಿಯ ಮಯೂರ್ ವಿಹಾರ್‌ನಿಂದ ಅಯೋಧ್ಯೆಗೆ ಪಾದ ಯಾತ್ರೆ ಹೊರಟಿರುವ ಶಬ್ನಂ ಖಾನ್, ತನಗೆ ಕನಸು ಬಿದ್ದಿದ್ದು, ಅದರಲ್ಲಿ ಬಂದ ರಾಮ, ಅಯೋಧ್ಯೆಯಲ್ಲಿ ನಡೆಯುವ ಪ್ರಾಣಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದು ಹೇಳಿದ್ದಾನೆ. ಹಾಗಾಗಿ ನಾನು ಅಯೋಧ್ಯೆಗೆ ಪಾದಯಾತ್ರೆ ಹೊರಟಿದ್ದೇನೆ ಎಂದು ಹೇಳಿದ್ದಾರೆ.
ಅಲ್ಲದೇ, ಅಯೋಧ್ಯೆ ನಿರ್ಮಾಣವಾಗುವಾಗ ನೀನು ಹೋರಾಟ ಮಾಡುತ್ತಿದೆ. ಈಗ ಅಯೋಧ್ಯೆ ಮಂದಿರ ನಿರ್ಮಾಣವಾಗಿ, ಪ್ರಾಣಪ್ರತಿಷ್ಠೆ ನಡೆಯುತ್ತಿದೆ. ಈಗ್ಯಾಕೆ ಬರುತ್ತಿಲ್ಲವೆಂದು ಶ್ರೀರಾಮ ನನ್ನನ್ನು ಪ್ರಶ್ನಿಸಿದ. ಹಾಗಾಗಿ ನಾನು ಅಯೋಧ್ಯೆಗೆ ಹೋರಟಿದ್ದೇನೆ ಎಂದು ಶಬ್ನಂ ಹೇಳಿದ್ದಾರೆ.
ಶಬ್ನಂ ಮಾನವ ಹಕ್ಕುಗಳ ಹೋರಾಟಗಾರ್ತಿಯಾಗಿದ್ದು, ಜನವರಿ 3ಕ್ಕೆ ಇವರು ಪಾದಯಾತ್ರೆ ಆರಂಭಿಸಿದ್ದಾರೆ. ಈಗಾಗಲೇ 400 ಕೀ.ಮೀ ಸಾಗಿದ್ದು, ಇನ್ನು 300 ಕೀ.ಮೀ ಪಾದಯಾತ್ರೆ ಮಾಡಿದರೆ, ಇವರ ಅಯೋಧ್ಯೆ ಪಾದಯಾತ್ರೆ ಪೂರ್ಣಗೊಳ್ಳುತ್ತದೆ.
ಇಸ್ಲಾಂ ದೇಶದಲ್ಲೂ ರಾಮನಾಮ ಜಪ: ಕೇಸರಿ ಧ್ವಜ ಹಿಡಿದು ಜೈ ಶ್ರೀರಾಮ್ ಎಂದ ಪಾಕ್ ಮಾಜಿ ಕ್ರಿಕೇಟಿಗ
‘ನಾನು ಮೋದಿ ವಿರೋಧಿ ಎಂದು 3 ಪಕ್ಷಗಳು ನನಗೆ ಟಿಕೇಟ್ ಕೊಡಲು ಮುಂದಾಗಿದೆ. ಆದರೆ…’