Tuesday, September 16, 2025

Latest Posts

ಮೈಮೇಲೆ Rs.500/- ನೋಟು ಇಟ್ಟು ಮಲಗಿದ ರಾಜಕಾರಣಿ ಫೋಟೋ ವೈರಲ್.. ಆದರೆ ಸತ್ಯವೇ ಬೇರೆ..

- Advertisement -

Political News: ಅಸ್ಸಾನ ರಾಜಕಾರಣಿ ಬೆಂಜಮಿನ್ ಬಾಸುಮತರಿ ಎಂಬುವವರು ಮೈಮೇಲೆ 500 ರೂಪಾಯಿ ನೋಟು ಇಟ್ಟು ಮಲಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋ ಚುನಾವಣೆ ಸಮಯದಲ್ಲಿ ವೈರಲ್ ಆಗಿದ್ದು, ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡುವ ಹಾಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಬೆಂಜಮಿನ್ ಬಾಸುಮತರಿ, ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ ಪಕ್ಷದ ಅಮಾನತುಗೊಂಡ ಸದಸ್ಯರಾಗಿದ್ದಾರೆ. ಇವರು ವೈರಲ್ ಆಗಿರುವ ವೀಡಿಯೋದಲ್ಲಿ ಬರೀ ಮೈಮೇಲೆ ನೋಟುಗಳನ್ನಿಟ್ಟುಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಬೆಂಜಮಿನ್, ಇದು 5 ವರ್ಷಗಳ ಹಿಂದೆ ಮಿತ್ರರೊಂದಿಗೆ ಪಾರ್ಟಿ ಮಾಡುವಾಗ ತೆಗೆದ ಫೋಟೋವಾಗಿದೆ. ಇದು ನನ್ನ ಸಹೋದರಿಯ ಹಣವಾಗಿತ್ತು. ಇದನ್ನು ತಮಾಷೆಗಾಗಿ ನಾನು ಮೈಮೇಲೆ ಇರಿಸಿಕೊಂಡು ಫೋಟೋ, ವೀಡಿಯೋ ಮಾಡಿದ್ದು, ಚುನಾವಣೆ ವೇಳೆಯಲ್ಲೇ ಇದನ್ನು ಲೀಕ್ ಮಾಡಲಾಗಿದೆ ಎಂದಿದ್ದಾರೆ.

ಅಲ್ಲದೇ, ಈ ಫೋಟೋ ಇಟ್ಟುಕೊಂಡು ಹೆಸರು ಹಾಳು ಮಾಡುವುದಾಗಿ, ಬೆಂಜಮಿನ್ ರನ್ನು ಬೆದರಿಸಿದ್ದಾರೆಂದು ಬೆಂಜಮಿನ್ ಆರೋಪಿಸಿದ್ದಾರೆ. ಇನ್ನು ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ ಪಕ್ಷದವರು, ಬೆಂಜಮಿನ್ ನಮ್ಮ ಪಕ್ಷದಿಂದ ಅಮಾನತುಗೊಂಡಿದ್ದು, ಅವರು ಯಾವುದೇ ಕೆಲಸ ಮಾಡಿದರೂ, ಅದಕ್ಕೂ ನಮ್ಮ ಪಕ್ಷಕ್ಕೂ ಯಾವುದೇ ಸಂಬಂಧವಿರುವುದಿಲ್ಲವೆಂದು ಹೇಳಿದೆ.

ಹುಟ್ಟುಹಬ್ಬದ ದಿನ ಪತ್ನಿ, ಮಗುವಿನೊಂದಿಗೆ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ ನಟ ರಾಮ್‌ ಚರಣ್

ಈ ಸವಾಲು ಸ್ವೀಕರಿಸುವ ದಮ್ಮು ತಾಕತ್ತು ನಿಮಗಿದೆಯಾ?: ಬಿಜೆಪಿಗೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ

ಬೆಳಗಾವಿಯಲ್ಲಿ ಶೆಟ್ಟರ್ ಪರ ಮಾಜಿ ಸಿಎಂ ಯಡಿಯೂರಪ್ಪ ಭರ್ಜರಿ ಕ್ಯಾಂಪೇನ್

- Advertisement -

Latest Posts

Don't Miss