Sunday, June 1, 2025

Latest Posts

ಫ್ಲೈಟ್‌ನಲ್ಲಿ ಅಪ್ಪನನ್ನು ಮುಂಬೈಗೆ ಕರೆದುಕೊಂಡು ಬಂದ ಮಗ, ಅಪ್ಪ ಫುಲ್ ಖುಷ್..

- Advertisement -

ಮುಂಬೈ: ಗ್ರಾಮದಲ್ಲಿ ಅಥವಾ ಒಂದು ಪುಟ್ಟ ಹಳ್ಳಿಯಲ್ಲಿ ಇರುವ ತಂದೆ ತಾಯಿಗೆ, ತಮ್ಮ ಮಕ್ಕಳೊಂದಿಗೆ, ಮಕ್ಕಳ ಖರ್ಚಿನಲ್ಲೇ ಫ್ಲೈಟ್ ಏರಿ, ಮಕ್ಕಳು ವಾಸಿಸುವ ರೂಮಿಗೆ ಹೋದಾಗ. ಆ ಮಗ ಸಿಟಿಯಲ್ಲಿ ದುಡಿಯುತ್ತ , ನೆಮ್ಮದಿಯಾಗಿದ್ದಾನೆ ಎಂದು ನೋಡಿದಾಗ, ಆಗುವ ಖುಷಿ ಇದೆ ಅಲಾ, ಅದನ್ನು ವ್ಯಕ್ತಪಡಿಸೋಕ್ಕೆ ಆಗಲ್ಲಾ.

ಇದೇ ರೀತಿ ಮಗ ತನ್ನ ಖರ್ಚಿನಲ್ಲಿ ತಂದೆಯನ್ನ ತನ್ನ ಗ್ರಾಮದಿಂದ ಫ್ಲೈಟಿನಲ್ಲಿ ಮುಂಬೈಗೆ ಕರೆ ತಂದಿದ್ದು, ಅವನ ರೂಮಿನಿಂದ ತಂದೆ ಮುಂಬೈಯನ್ನು ಕಣ್ತುಂಬಿಕೊಳ್ಳುವ ವೀಡಿಯೋ, ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಜತಿನ್ ಲಾಂಬಾ ಎಂಬಾತ, ತನ್ನ ತಂದೆಯನ್ನು ಫ್ಲೈಟ್‌ನಲ್ಲಿ ಮುಂಬೈನಲ್ಲಿ ತಾನು ವಾಸಿಸುತ್ತಿರುವ ರೂಮಿಗೆ ಕರೆ ತಂದಿದ್ದಾನೆ. ಈ ವೀಡಿಯೋದಲ್ಲಿ ಅವರ ತಂದೆ ವಿಮಾನಯಾನವನ್ನ ಎಂಜಾಯ್ ಮಾಡುತ್ತಿದ್ದಾರೆ. ಮತ್ತು ಮುಂಬೈನ ಮಗ ರೂಮಿಗೆ ಬಂದು, ಅಲ್ಲಿನ ಕಿಟಕಿಯಿಂದ, ಮುಂಬೈ ಶಹರವನ್ನ ಕಣ್ತುಂಬಿಕೊಂಡಿದ್ದಾರೆ.

ಇವೆಲ್ಲವನ್ನೂ ಜತಿನ್‌ ವೀಡಿಯೋ ಮಾಡಿ, ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಆ ವೀಡಿಯೋನ್ನ ನೋಡಲು ಇಲ್ಲಿ ಕ್ಲಿಕ್ ಮಾಡಿ.

ಫೋಟೋಶೂಟ್‌ ವಿಷಯವಾಗಿ ಮದುವೆ ಮನೆಯಲ್ಲಿ ಗಲಾಟೆ: ವೀಡಿಯೋ ವೈರಲ್

ಖುಷಿಯಿಂದ ಡಾನ್ಸ್ ಮಾಡುತ್ತಲೇ, ಹೃದಯಾಘಾತದಿಂದ ಮೃತಪಟ್ಟ ವ್ಯಕ್ತಿ: ವೀಡಿಯೋ ವೈರಲ್

ವರದಕ್ಷಿಣೆಯಲ್ಲಿ ಬೈಕ್ ಕೇಳಿದ್ದಕ್ಕೆ, ಅಪ್ಪನಿಂದಲೇ ಚಪ್ಪಲಿ ಏಟು ತಿಂದ ವರ: ವೀಡಿಯೋ ವೈರಲ್

- Advertisement -

Latest Posts

Don't Miss