ನಿವೃತ್ತ ಪೊಲೀಸ್ ಅಧಿಕಾರಿ ಮನೆ ಬಾಡಿಗೆ ಪಡೆದು ವೇಶ್ಯಾವಾಟಿಕೆ ದಂಧೆ

Mysuru Crime News: ಮೈಸೂರು: ಪೊಲೀಸ್ ಅಧಿಕಾರಿಯಾಗಿದ್ದವರ ಮನೆ ಇದು ಎನ್ನುವ ಭಯ ಇಲ್ಲದೇ ಅವರ ಕಟ್ಟಡ ಬಾಡಿಗೆ ಪಡೆದು ವೇಶ್ಯಾವಾಟಿಕೆ  ದಂಧೆ ನಡೆಸುತ್ತಿರುವ ಪ್ರಕರಣ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ. ಮೈಸೂರಿನ ಲಲಿತ‌ಮಹಲ್ ನಗರದ ಮುಖ್ಯ ರಸ್ತೆಯಲ್ಲಿರುವ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಮನೆಯನ್ನು ಬಾಡಿಗೆ ಪಡೆದು ಫ್ಯಾಮಿಲಿ ಸಲೂನ್ ಹೆಸರಲ್ಲಿ ಮಹೇಶ್ ಎಂಬಾತ ವೇಶ್ಯಾವಾಟಿಕೆ ನಡೆಸುತ್ತಿರುವುದು ಬಟಾಬಯಲಾಗಿದೆ. ಒಡನಾಡಿ, ಪೊಲೀಸ್ ಕಮಿಷನರ್ ವಿಶೇಷ ದಳ ಕಾರ್ಯಾಚರಣೆ ನಡೆಸಿ ವೇಶ್ಯಾವಾಟಿಕೆ ದಂಧೆಯನ್ನು ಪತ್ತೆ ಮಾಡಿದೆ.

ಮಹೇಶ್ ಎಂಬಾತ ಸಲೂನ್ ನಡೆಸುವುದಾಗಿ ಮೈಸೂರಿನ ಲಲಿತ‌ಮಹಲ್ ನಗರದ ಮುಖ್ಯ ರಸ್ತೆಯಲ್ಲಿರುವ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಕಟ್ಟಡವನ್ನು ಬಾಡಿಗೆ ಪಡೆದುಕೊಂಡಿದ್ದ. ಅದರಂತೆ ಹೊರಗಡೆ ನೋಡುವವರುಗೆ ಫ್ಯಾಮಿಲಿ ಸಲೂನ್ ಅಂತ ಬೋರ್ಡ್ ಹಾಕಿದ್ದ. ಆದ್ರೆ, ಒಳಗಡೆ ಮಾತ್ರ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ. ಇದನ್ನು ಒಡನಾಡಿ, ಪೊಲೀಸ್ ಕಮಿಷನರ್ ವಿಶೇಷ ದಳ ಕಾರ್ಯಾಚರಣೆ ನಡೆಸಿ ಪತ್ತೆ ಹಚ್ಚಿದೆ. ಈ ಬಗ್ಗೆ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Rajyotsava : ಕರನಾಡಿನಾದ್ಯಂತ ಕರ್ನಾಟಕ ರಾಜ್ಯೋತ್ಸವದ ಸಂಭ್ರಮ ಧಾರವಾಡದಲ್ಲೂ ರಾಜ್ಯೋತ್ಸವ ಆಚರಣೆ

Shivasene : ಕಲಬುರಗಿಯಲ್ಲಿ ಪ್ರತ್ಯೇಕ ರಾಜ್ಯದ ಕೂಗು; ಇತ್ತ ಗಡಿಯಲ್ಲಿ ಶಿವಸೇನೆ ಪುಂಡಾಟಿಕೆ

ಕಾರ್ಯಕ್ರಮಕ್ಕೆ ಆಗಮಿಸಿದ ಮಾಜಿ ಶಾಸಕ ರೇಣುಕಾಚಾರ್ಯ ಜೊತೆ ವಿದ್ಯಾರ್ಥಿಗಳು ಸೆಲ್ಫೀ..!

About The Author