Tuesday, August 5, 2025

Latest Posts

ಕುಡಿದ ಮತ್ತಿನಲ್ಲಿ ಚಾಕು ಹಿಡಿದು ಓಡಾಟ – ಸ್ಥಳೀಯರಿಗೆ ಬೆದರಿಕೆ ಹಾಕುವ ದೃಶ್ಯ ಸೆರೆ

- Advertisement -

Hubballi News: ಹುಬ್ಬಳ್ಳಿ: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಚಾಕು ಹಿಡಿದು ಜನರಿಗೆ ಬೆದರಿಕೆ ಹಾಕಿರುವ ಘಟನೆ ಹುಬ್ಬಳಿಯಲ್ಲಿ (Hubballi) ನಡೆದಿದೆ. ಈತ ಹಲವು ದಿನಗಳಿಂದ ಹೀಗೆ ಕುಡಿದು ಚಾಕು ಹಿಡಿದು ಓಡಾಟ ಮಾಡುತ್ತಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಚಾಕು ಹಿಡಿದು ಓಡಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಿನೋದ್ ನಡುಗಟ್ಟಿ ಎಂದು ಗುರುತಿಸಲಾಗಿದೆ. ಆತ ಹುಬ್ಬಳ್ಳಿಯ ಧೀನಬಂದು ಕಾಲೋನಿಯಲ್ಲಿ ಚಾಕು ಹಿಡಿದು ಓಡಾಟ ನಡೆಸಿದ್ದಾನೆ. ಅಲ್ಲದೇ ಕೆಲವರಿಗೆ ಚಾಕು ತೋರಿಸಿ ಬೆದರಿಕೆ ಹಾಕಿದ್ದಾನೆ. ಜನರಿಗೆ ಆತ ಚಾಕು ತೋರಿಸುತ್ತಿರುವುದನ್ನು ಸ್ಥಳೀಯರು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ.

ದಿನನಿತ್ಯ ಜನರಿಗೆ ತೊಂದರೆ ಕೊಡುತ್ತಿರುವ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಆನ್‌ಲೈನ್ ಶಾಪಿಂಗ್ ಮಾಡುವ ಮುನ್ನ ಈ ಸ್ಟೋರಿ ಓದಿ: 300 ರೂ. ಲಿಪ್‌ಸ್ಟಿಕ್‌ಗೆ 1 ಲಕ್ಷ ಕಳೆದುಕೊಂಡ ವೈದ್ಯೆ

ಟ್ರೋಫಿ ಮೇಲೆ ಕಾಲಿಟ್ಟು ಕುಳಿತ ಆಸ್ಟ್ರೇಲಿಯಾ ಆಟಗಾರ: ಭಾರತಕ್ಕೆ ಸಿಕ್ಕಿದ್ರೆ ಪೂಜಿಸುತ್ತಿದ್ದೆವು ಎಂದ ನೆಟ್ಟಿಗರು

ಕುಡಿದ ಮತ್ತಿನಲ್ಲಿ ಗಗನಸಖಿಯನ್ನು ಮುದ್ದಾಡಲು ಹೋದ ಭೂಪ: ಲ್ಯಾಂಡ್ ಆಗುತ್ತಿದ್ದಂತೆ ಅರೆಸ್ಟ್..

- Advertisement -

Latest Posts

Don't Miss