Wednesday, February 5, 2025

Latest Posts

ರಾಮಲಲ್ಲಾನ ವಿಗ್ರಹ ಕೆತ್ತನೆ ಮಾಡಿದ ಕಲ್ಲನ್ನು ಪರೀಕ್ಷಿಸಿ ಅಂತಿಮಗೊಳಿಸಿದ್ದು ಕೋಲಾರದ ವಿಜ್ಞಾನಿ

- Advertisement -

Kolar News: ಕೋಲಾರ: ಅಯೋಧ್ಯೆ ರಾಮ ಮಂದಿರ ನಿರ್ಮಾಣದಲ್ಲಿ ಚಿನ್ನದ ನಾಡು ಕೋಲಾರದ ಕೊಡುಗೆ ಸಹ ಅಪಾರವಾಗಿದ್ದು, ರಾಮಲಲ್ಲಾನ ವಿಗ್ರಹ ಕೆತ್ತನೆ ಮಾಡಿದ ಕಲ್ಲನ್ನು ಕೋಲಾರದ ವಿಜ್ಞಾನಿ ಅಂತಿಮಗೊಳಿಸಿದ್ದಾರೆ. ರಾಮ‌ ಮಂದಿರ ನಿರ್ಮಾಣಕ್ಕೆ ಬಳಸುವ ಒಂದೊಂದು ಕಲ್ಲಿನ ಗುಣಮಟ್ಟವನ್ನು ಪರೀಕ್ಷಿಸಿ ಅಂತಿಮ ಮಾಡಿದ್ದು, ಇದೇ ಚಿನ್ನದ ನಾಡಿನ ಕೆಜಿಎಫ್​ನ (NIRM) ಹಿರಿಯ ವಿಜ್ಞಾನಿ ರಾಜನ್ ಬಾಬು ಅವರ ತಂಡವಾಗಿದ್ದು. ಮಂದಿರಕ್ಕೆ ಬಳಸಿದ ಸಂಪೂರ್ಣ ಕಲ್ಲುಗಳ ಗುಣಮಟ್ಟವನ್ನು ಕೆಜಿಎಫ್ ನಲ್ಲಿರುವ NIRM ಲ್ಯಾಬ್​ನಲ್ಲಿ ಪರೀಕ್ಷಿಸಲಾಗಿದೆ. ರಾಮ ಮಂದಿರಕ್ಕೆ ಕರ್ನಾಟಕ, ತೆಲಂಗಾಣ, ಆಂಧ್ರ, ರಾಜಾಸ್ಥಾನ ರಾಜ್ಯಗಳ ಕಲ್ಲನ್ನು ಬಳಕೆ‌ ಮಾಡಲಾಗಿದು ಇವುಗಳ ಗುಣಮಟ್ಟ ಪರಿಶೀಲನೆ ನಡೆಸಿದ್ದು ರಾಜನ್ ಬಾಬು ರವರ ತಂಡವಾಗಿದೆ.

ಬಾಲ ರಾಮನ ವಿಗ್ರಹಕ್ಕೂ ಸಹ ಕರ್ನಾಟಕದ ಕಲ್ಲನ್ನೇ ಬಳಿಸಿದ್ದು ಕಲ್ಲಿನ ದೃಡತೆ ಸೇರಿದಂತೆ ರಾಮ‌ ಮಂದಿರ ನಿರ್ಮಾಣದಲ್ಲಿ ಕೇವಲ‌ ಕಲ್ಲನ್ನು ಮಾತ್ರ ಬಳಕೆ ಮಾಡಲಾಗಿದ್ದು ಕಲ್ಲಿನಲ್ಲಿ ಇಂಟರ್ ಲಾಕಿಂಗ್ ಸಿಸ್ಟಮ್ ಬಳಸಿ ನಿರ್ಮಾಣ ಕಾರ್ಯ ನಡೆಸಿದ್ದು ಮಂದಿರಕ್ಕೆ ಸಿಡಿಲು, ಗುಡುಗು, ಬಿಸಿಲು, ಮಳೆ ಮತ್ತು ಭೂಕಂಪ ಆದರೂ ಏನೂ ಆಗದ ರೀತಿ ನಿರ್ಮಿಸಲಾಗಿದ್ದು ರಾಮ‌ ಮಂದಿರಕ್ಕೆ ಒಂದು ಸಾವಿರಕ್ಕೂ ಅಧಿಕ ವರ್ಷಗಳ ಆಯಸ್ಸು ಇದೆ. ಮಂದಿರದ ಸುಸ್ಥಿತಿಗೆ ಬೇಕಾದ ಕಲ್ಲಿನ ಆಯ್ಕೆಯಲ್ಲಿ ಹೆಚ್ಚು ನಿಕರತೆಯನ್ನು ಬಳಸಿ ಮಾಪನ ಮಾಡಲಾಗಿದ್ದು , ಅಗತ್ಯ ಹಾಗೂ ಹೆಚ್ಚು ದೃಡತೆಯನ್ನು ಹೊಂದಿರುವ ಕಲ್ಲುಗಳನ್ನು ಮಾತ್ರ ಆಯ್ಕೆ ಮಾಡಿರುವುದು ಕೋಲಾರದ ವಿಜ್ಞಾನಿ ಯಾಗಿದ್ದಾರೆ.

ರಾಮ ಮಂದಿರ ನಿರ್ಮಾಣದಲ್ಲಿ ಸಿಮೆಂಟ್ ಸೇರಿದಂತೆ ಯಾವುದೇ ವಸ್ತುಗಳನ್ನು ಬಳಸಿಲ್ಲ , ಕೇವಲ ಉತ್ತಮ ಗುಣಮಟ್ಟದ ಕಲ್ಲುಗಳನ್ನು ಮಾತ್ರ ಬಳಸಿ ಒಂದಕ್ಕೊಂದು ಇಂಟರ್ ಲಾಕಿಂಗ್ ಹಾಗೂ ಕೋರ್ ಲಾಕಿಂಗ್ ಮೂಲಕ ಕಲ್ಲುಗಳು ಒಂದಕ್ಕೊಂದು ಹಿಡಿತ ಸಾದಿಸುವಂತೆ ಮಾಡಲಾಗಿದ್ದು ಸಾವಿರ ವರ್ಷಗಳ ವರಿಗೂ ದೀರ್ಘಕಾಲದ ಬಾಳಿಕೆ ಬರುವಂತೆ ತಂತ್ರಜ್ಞಾನ ವನ್ನು ಬಳಕೆ ಮಾಡಲಾಗಿದ್ದು ಮಂದಿರದ ಸದೃಡತೆ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ, ಸುಮಾರು ಒಂದು ಲಕ್ಷಕ್ಕೂ ಅಧಿಕ ಕಲ್ಲುಗಳ ಸ್ಯಾಂಪಲ್ಸ್ ನ್ನು ಪರೀಕ್ಷೆ ಮಾದಲಾಗಿದ್ದು ನಮ್ಮ ಕರ್ನಾಟಕದ ಸಾದರಹಳ್ಳಿ, ದೇವನಹಳ್ಳಿ , ಮತ್ತು ಶಿರಾ ದ ಕಲ್ಲುಗಳನ್ನು ಹೆಚ್ಚು ಬಳಸಲಾಗಿದ್ದ ಆಂದ್ರದ ಕರೀಂನಗರ್ , ಸೇರಿದಂತೆ ವಿವಿಧ ಕಡೆಗಳ ಕಲ್ಲುಗಳನ್ನು ಸಹ ಬಳಸಲಾಗಿದೆ , ಮಂದಿರದ ಅಡಿಪಾಯಕ್ಕೆ ಕರ್ನಾಟಕದ ಕಲ್ಲನ್ನು ಹೆಚ್ಚಾಗಿ ಬಳಸಲಾಗಿದ್ದು ವಿವಿಧ ಹಂತಗಳಲ್ಲಿ ವಿವಿಧ ಬಲಾಡ್ಯತೆ ಯನ್ನು ಹೊಂದಿರುವ ಕಲ್ಲುಗಳನ್ನು ಬಳಸಲಾಗಿದೆ ಎಂದು ಹಿರಿಯ ವಿಜ್ಞಾನಿ ರಾಜನ್ ಬಾಬು ಮಂದಿರದ ರಚನೆ ಬಗ್ಗೆ ವಿವರಿಸಿದ್ದಾರೆ.

‘ಇದು ಮುಂದುವರಿದರೆ ಪ್ರಾಮಾಣಿಕವಾಗಿ ತೆರಿಗೆ ಕಟ್ಟುವ ಈ ನಾಡಿನ ಪ್ರಭುಗಳಿಗೆ ಮೋಸ ಮಾಡಿದಂತಾಗುತ್ತದೆ’

ಅಯೋಧ್ಯೆ ಮಸೀದಿ ಧ್ವಂಸದ ಬ್ಯಾನರ್: ಸಿಟಿ ಪೂರ್ತಿ ಖಾಕಿ ಹೈ ಅಲರ್ಟ್

ವೇದಿಕೆಯಲ್ಲೇ ಮಗನಿಗೆ ಗದರಿದ ರೇವಣ್ಣ: ತಂದೆಯ ಆವಾಜ್‌ಗೆ ಪ್ರಜ್ವಲ್ ಸೈಲೆಂಟ್

- Advertisement -

Latest Posts

Don't Miss