- Advertisement -
ಬಳ್ಳಾರಿ : ಇಂದು ರಾಜ್ಯದಲ್ಲಿ ನಡೆದ ಚುನಾವಣೆ ನಡೆದಿದ್ದು, ತುಂಬು ಗರ್ಭಿಣಿ, ಬಾಣಂತಿ, ವಿಕಲಚೇತನರು, ಶತಾಯುಷಿಗಳು ಹೀಗೆ ಹಲವಾರು ಜನ ಮತ ಚಲಾಯಿಸಿದ್ದಾರೆ. ಆದರೆ ಬಳ್ಳಾರಿಯಲ್ಲಿ ಓರ್ವ ವಿಶೇಷಚೇತನ ವ್ಯಕ್ತಿ ಮತ ಚಲಾಯಿಸಿದ್ದಾರೆ. ಅವರಿಗೆ ಕೈ ಇಲ್ಲವಾಗಿದ್ದು, ಅವರ ಕಾಲಿಗೆ ಶಾಯಿ ಹಾಕಲಾಗಿದೆ.
ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕೊಳಗಲ್ಲು ಗ್ರಾಮದ ಮುಸ್ತಫಾ ಎಂಬ ವ್ಯಕ್ತಿ ಈ ರೀತಿ ಮತದಾನ ಮಾಡಿದ್ದು, ಹಲವರಿಗೆ ಮಾದರಿಯಾಗಿದ್ದಾರೆ. ಮುಸ್ತಫಾಗೆ ಎರಡೂ ಕೈಗಳಿಲ್ಲ. ಆದರೆ ಮನೆಯವರ ಸಹಾಯ ಪಡೆದು ಮತಗಟ್ಟೆವರೆಗೂ ಬಂದು, ಮತ ಚಲಾಯಿಸಿದ್ದಾರೆ. ಇದೇ ರೀತಿ ರಾಜ್ಯದ ಹಲವು ಭಾಗಗಳಲ್ಲಿ ಹಲವು ವಿಶೇಷ ಚೇತನರು, ಶತಾಯುಷಿಗಳು ಮತಗಟ್ಟೆ ತನಕ ಬಂದು, ಮತ ಚಲಾಯಿಸಿ, ಇತರರಿಗೆ ಮಾದರಿಯಾಗಿದ್ದಾರೆ.
- Advertisement -

