Dharwad News: ಧಾರವಾಡ: ಧಾರವಾಡದಲ್ಲಿ ಕೇಬಲ್ ಕಟ್ ಮಾಡುವ ವಿಕೃತ ಗ್ಯಾಂಗ್ ಆ್ಯಕ್ಟಿವ್ ಆಗಿದ್ದು, ಈ ವಿಚಿತ್ರ ಗ್ಯಾಂಗ್ ರಾತ್ರೋರಾತ್ರಿ ಕೇಬಲ್ ಕಟ್ ಮಾಡಿ, ಪರಾರಿಯಾಗುತ್ತದೆ.
ಇವರ ಉದ್ದೇಶವೇನು ಎಂಬುದನ್ನ ಆ ದೇವರೇ ಬಲ್ಲ. ಆದರೆ ಈ ಗ್ಯಾಂಗ್ನ ಇಬ್ಬರು ಸದಸ್ಯರು ಮಾತ್ರ, ಪ್ರತೀ ರಾತ್ರಿ ಬಂದು, ಟಿವಿ, ಇಂಟರ್ನೆಟ್ ಫೈಬರ್ ಕೇಬಲ್ ಕಟ್ ಮಾಡುತ್ತಾರೆ. ಈಗಾಗಲೇ ಧಾರವಾಡ ನಗರದ ಬಹುತೇಕ ಕಡೆ ವಿವಿಧ ಕಂಪನಿಗಳ ಕೇಬಲ್ ಕಟ್ ಮಾಡಿದ್ದಾರೆ. ಕಳೆದ 6 ತಿಂಗಳಿನಿಂದ ಇವರಿಗೆ ಇದೇ ಕೆಲಸವಾಗಿದ್ದು, ನಿನ್ನೆ ರಾತ್ರಿ ಕೇಬಲ್ ಕಟ್ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಹಿನ್ನೆಲೆಯಲ್ಲಿ ಧಾರವಾಡ ಕೇಬಲ್ ಆಪರೇಟರ್ ಮಾಲೀಕರ ಸಂಘದವರು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬೆಲೆ ಬಾಳುವ ಕೇಬಲ್ ಕಟ್ ಮಾಡುವ ಹಿಂದಿನ ಉದ್ದೇಶ ನಿಗೂಢವಾಗಿದ್ದು, ಏರಟೇಲ್, ಜಿಯೋ, ಬಿಎಸ್ಎನ್ಎಲ್ ಫೈಬರ್ ಕೇಬಲ್ ಗಳಿಗೂ ಕತ್ತರಿ ಹಾಕಿದ್ದಾರೆ. ಹೀಗಾಗಿ ಈ ಕಂಪನಿಗಳ ಆಪರೇಟರ್ಗಳಿಗೆ ಕಂಟಕ ಎದುರಾಗಿದ್ದು, ಪದೇ ಪದೇ ಕೇಬಲ್ ಕಟ್ ಮಾಡುತ್ತಿರುವ ಹಿನ್ನೆಲೆ ಗ್ರಾಹಕರಿಂದಲೂ ದೂರು ಕೊಡಲಾಗಿತ್ತು. ಎಲ್ಲ ತಪ್ಪು ಕೇಬಲ್ ಆಪರೇಟರ್ ಮೇಲೆ ಬರುತ್ತಿತ್ತು.
ಇವರು ಸರಿಯಾಗಿ ಸರ್ವಿಸ್ ನೀಡುತ್ತಿಲ್ಲವೆಂದು ಗ್ರಾಹಕರೆಲ್ಲ ಆರೋಪಿಸುತ್ತಿದ್ದರು. ಆದರೆ ಕೇಬಲ್ ಕಟ್ ಮಾಡುತ್ತಿದ್ದುದ್ದು ಮಾತ್ರ ಈ ಕಿಡಿಗೇಡಿಗಳು ಎಂದು ತಿಳಿದುಬಂದಿದೆ. ಹಾಗಾಗಿ ಕೇಬಲ್ ಕತ್ತರಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ, ಸಿಸಿ ಕ್ಯಾಮರಾ ದೃಶ್ಯ ಸಮೇತ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ.
ನಾರಾಯಣಗೌಡ ಸೇರಿ 29 ಜನ ಕರವೇ ಕಾರ್ಯಕರ್ತರಿಗೆ 13 ದಿನ ನ್ಯಾಯಾಂಗ ಬಂಧನ




