ಕ್ರೇನ್ ವಾಹನ ಹರಿದು ವಿದ್ಯಾರ್ಥಿನಿ ದಾರುಣ ಸಾವು…

 ಬೆಂಗಳೂರು: ಕ್ರೇನ್ ವಾಹನ ಚಾಲಕನ ಅಜಾಗರೂಕತೆಯಿಂದ ಕ್ರೇನ್ ವಾಹನ ಹರಿದು ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಮಹದೇವಪುರ ಕ್ಷೇತ್ರದ ಕನ್ನಮಂಗಲದ ಜೈನ್ ಸ್ಕೂಲ್ ಬಳಿ ನಡೆದಿದೆ. ಕುಮಾರಿ ನೂರ್ ಫಿಜ (19) ಮೃತ ಯುವತಿ.

ಮಹದೇವಪುರದ ವೈಟ್ ಫೀಲ್ಡ್- ಹೊಸಕೋಟೆ ಮಾರ್ಗವಾಗಿ ತೆರಳುತ್ತಿದ್ದ ಕ್ರೇನ್ ಚಾಲಕನ ಅಜಾಗರೂಕತೆಯಿಂದ ಯುವತಿಯ ಮೇಲೆ ಹರಿದಿರುವ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಇನ್ನೂ ತೀವ್ರ ರಕ್ತಗಾಯದಿಂದ ಬಳಲುತ್ತಿದ್ದ ಯುವತಿಯನ್ನು ಸಮೀಪದ ವೈದೇಹಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ತದನಂತರ ಹೆಚ್ಚಿನ ಚಿಕಿತ್ಸೆ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಚಿಕಿತ್ಸೆ ಫಲಿಕಾರಿಯಾಗದೇ ಯುವತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಇನ್ನೂ ಕ್ರೇನ್ ಮಾಲೀಕ ಪೆರಿಯಸ್ವಾಮಿ ವಿರುದ್ಧ ಯುವತಿ ತಂದೆ ರೆಹಮಾನ್ ಖಾನ್ ಎಂಬುವವರು ವೈಟ್ ಫೀಲ್ಡ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕೆ.ಆರ್.ಪೇಟೆಯಲ್ಲಿ ಮಳೆ ಹಾನಿಗೊಳಗಾದ ರಸ್ತೆಗಳ ದುರಸ್ಥಿಗೆ 15 ಕೋಟಿ ಬಿಡುಗಡೆ: ಸಚಿವ ಡಾ.ನಾರಾಯಣಗೌಡ

ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ನಟಿ ಅದಿತಿ ಪ್ರಭುದೇವ್

About The Author