ಹಾಸನ: ಹಾಸನದ ರಾಜಕೀಯದಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದೆ. ಜೆಡಿಎಸ್ ಅಭ್ಯರ್ಥಿಗಳನ್ನು ಬೆಂಬಲಿಸಲು ಪ್ರಭಾವಿ ಮುಖಂಡ ನಾರ್ವೆ ಸೋಮಶೇಖರ್ ನಿರ್ಧಾರ ಮಾಡಿದ್ದಾರೆ. ಹಾಸನದ ಅಶೋಕ ಹೋಟೆಲ್ ನಲ್ಲಿ ಹಲವು ತಾಸುಗಳ ಚರ್ಚೆ ನಡೆದಿದ್ದು, ಜೆಡಿಎಸ್ ಪಕ್ಷದ ಪ್ರಮುಖರು ಭಾಗಿಯಾಗಿದ್ದರು.
ಮಾಜಿ ಸಚಿವ ಎಚ್.ಡಿ.ರೇವಣ್ಣ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರೊಂದಿಗೆ ಚರ್ಚಿಸಲು, ಚನ್ನರಾಯಪಟ್ಟಣದ ಗನ್ನಿಕಡ ಫ಼ಾರ್ಮ್ ಹೌಸ್ ಗೆ ಜೆಡಿಎಸ್ ತಾಲೂಕು ಅದ್ಯಕ್ಷ ಎಸ್. ದ್ಯಾವೇಗೌಡ ಹಾಗೂ ಜೆಡಿಎಸ್ ಮುಖಂಡರ ಜೊತೆ ನಾರ್ವೆ ಸೋಮಶೇಖರ್ ಒಂದೇ ಕಾರಿನಲ್ಲಿ ತೆರಳಿದರು. 2018ರ ಚುನಾವಣೆಯಲ್ಲಿ ಸಕಲೇಶಪುರ ಮೀಸಲು ಕ್ಷೇತ್ರ ದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ನಾರ್ವೆ ಸೋಮಶೇಖರ್ ಪರಾಭವಗೊಂಡಿದ್ದರು.
‘ಬೈಕ್ ಗಲಾಟೆಗೆ ಬಣ್ಣ ಬಳಿದು, ಆರೋಪ ಮಾಡುತ್ತಿರುವ ಪ್ರತಾಪ್ ಸಿಂಹ ವಿರುದ್ಧ ಕ್ರಮ ಕೈಗೊಳ್ಳಿ’
ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್‌ಗೆ ಬಂಧನದ ಭೀತಿ..
ಪ್ರಚಾರದ ವೇಳೆ ಮಾಜಿ ಡಿಸಿಎಂ ಪರಮೇಶ್ವರ್ ತಲೆಗೆ ಕಲ್ಲಿನೇಟು, ಡಿಕೆಶಿ ಆಕ್ರೋಶ..