Saturday, October 19, 2024

Latest Posts

ಆನ್‌ಲೈನ್‌ನಲ್ಲಿ ಬೆಡ್ ಮಾರಾಟ ಮಾಡಲು ಹೋಗಿ 68 ಲಕ್ಷ ರೂಪಾಯಿ ಕಳೆದುಕೊಂಡ ಟೆಕ್ಕಿ

- Advertisement -

Bengaluru News: ಬೆಂಗಳೂರು: ಬೆಂಗಳೂರಿನಲ್ಲಿ ಇಂಜಿನಿಯರ್ ಒಬ್ಬರು ಬೆಡ್ ಮಾರಾಟ ಮಾಡಲು ಹೋಗಿ, 8 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ನಡೆದಿದ್ದು, ಓಟಿಪಿ ಹಂಚಿಕೊಂಡ ಇಂಜಿನಿಯರ್ ಎಡವಟ್ಟು ಮಾಡಿಕೊಂಡಿದ್ದಾರೆ.

ಓಎಲ್‌ಎಕ್ಸ್‌ನಲ್ಲಿ ಬಳಸಿದ ಬೆಡ್ ಮಾರಾಟ ಮಾಡಲು ಹೋಗಿರುವ ಟೆಕ್ಕಿಯೊಬ್ಬರು 15 ಸಾವಿರ ರೂಪಾಯಿಗೆ ತಮ್ಮ ಬೆಡ್ ಮಾರಾಟ ಮಾಡುವ ಬದಲು, ತಾವೇ 68 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. 39 ವರ್ಷದ ಆದೀಶ್ ಎಂಬುವವರು ಬೆಡ್ ಮಾರಾಟ ಮಾಡುವಾಗ, ತಮ್ಮ ಓಟಿಪಿಯನ್ನು ಗ್ರಾಹಕನಿಗೆ ನೀಡಿದ್ದಾರೆ. ಅವನು ಆ ಓಟಿಪಿಯನ್ನು ಬಳಸಿಕೊಂಡು ಮೂರು ಬಾರಿ ಆದೀಶ್ ಅಕೌಂಟ್‌ನಿಂದ ದುಡ್ಡು ಪೀಕಿದ್ದಾನೆ.

ಘಟನೆಯ ವಿವರ ನೋಡುವುದಾದರೆ, ರೋಹಿತ್ ಶರ್ಮಾ ಎಂಬ ಗ್ರಾಹಕನಿಗೆ ಆದಿಶ್ ಬೆಡ್ ಮಾರಿದ್ದು, ಶರ್ಮಾ 5 ರೂಪಾಯಿಯಿಂದ ಪೇಮೆಂಟ್ ಮಾಡಲು ಶುರು ಮಾಡಿದ್ದಾನೆ. 30 ಸಾವಿರದ ವರೆಗೂ ಬಿಲ್ ಎಕ್ಸ್‌ಚೆಂಜ್ ಆದ ಬಳಿಕ, ಉಳಿದ ಹಣವನ್ನು ಹಿಂದಿರಿಗಿಸಬೇಕಾದರೆ, ನೀವು ಈಗ ಬರುವ ಓಟಿಪಿ ಶೇರ್ ಮಾಡಬೇಕು ಎಂದ ರೋಹಿತ್ ಶರ್ಮಾ, ಆದೀಶ್‌ಗೆ ಹೇಳಿದ್ದಾನೆ.

ಆ ಸಮಯದಲ್ಲಿ ಬೆಡ್ ಮಾರಿಹೋದ ಖುಷಿಯಲ್ಲಿದ್ದ ಆದೀಶ್, ಶರ್ಮಾ ಮೇಲೆ ನಂಬಿಕೆಯನ್ನಿಟ್ಟು, ಓಟಿಪಿ ಶೇರ್ ಮಾಡಿ, ಮೂರ್ಖತನ ತೋರಿಸಿದ್ದಾನೆ. ಈ ಸುದ್ದಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇಂಜಿನಿಯರ್ ಮೂರ್ಖತನಕ್ಕೆ ಜನ ಬೈಯ್ಯುತ್ತಿದ್ದಾರೆ.

‘ಮುಟ್ಟು ಅನ್ನೋದು ಅಂಗವೈಕಲ್ಯವಲ್ಲ. ಹೆಣ್ಣು ಮಕ್ಕಳಿಗೆ ವೇತನ ಸಹಿತ ರಜೆಯ ಅಗತ್ಯವಿಲ್ಲ’

ಎಚ್ಚರಿಕೆ: ಮತ್ತೆ ಕೋವಿಡ್ ಪ್ರಕರಣ ಏರಿಕೆ!

ಶಿರಡಿ ಸಾಯಿಬಾಬಾ ದೇಗುಲಕ್ಕೆ ಶಾರುಖ್ ಖಾನ್ ಭೇಟಿ!

- Advertisement -

Latest Posts

Don't Miss