Hubballi News: ಹುಬ್ಬಳ್ಳಿ: ನಮ್ಮ ಕಂಪನಿಯಿಂದ ಕೋ ಆಪರೇಟಿವ್ ಬ್ಯಾಂಕ್ ಮತ್ತು ಸಾಫ್ಟ್ವೇರ್ಗಳಲ್ಲಿ ಹಣ ತೊಡಗಿಸುತ್ತಿದ್ದು, ನೀವು ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದೆಂದು ನಂಬಿಸಿ ಬೆಂಗಳೂರು ಮೂಲದ ನಾಲ್ವರು, ಹುಬ್ಬಳ್ಳಿಯ 20ಕ್ಕೂ ಹೆಚ್ಚು ಜನರಿಂದ ಒಟ್ಟು 1.05 ಕೋಟಿ ರೂ. ಪಡೆದು ವಂಚಿಸಿದ್ದಾರೆ.
ಶ್ರೀಕಂಠ ಮಗಜಿ, ಸತೀಶ ಮಗಜಿ, ದೀಪಕ ಕಬಾಡೆ, ರೂಪಾ ಕಲಬುರ್ಗಿ ಎಂಬುವರು ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಜಿ.ಜಿ. ಆನ್ಲೈನ್ ಪ್ರೖೆ.ಲಿ. ಕಂಪನಿ ತೆಗೆದಿರುವುದಾಗಿ ಹೇಳಿದ್ದಾರೆ. ಈ ಕಂಪನಿಯಿಂದ ಕೋಆಪರೇಟಿವ್ ಬ್ಯಾಂಕ್ ಮತ್ತು ಸಾಫ್ಟ್ವೇರ್ನಲ್ಲಿ ಹಣ ತೊಡಗಿಸಲಾಗುತ್ತಿದೆ. ನಮ್ಮ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಶೇ. 15ರಷ್ಟು ರಿಟರ್ನ್ಸ್ ಕೊಡುವುದಾಗಿ ಹೇಳಿದ್ದಾರೆ.
ಹುಬ್ಬಳ್ಳಿಯ ವಿದ್ಯಾನಗರ, ಗೋಕುಲ ರಸ್ತೆಯ ಹೋಟೆಲ್ ಮತ್ತು ಜಿಮ್ಖಾನ ಮೈದಾನದ ಸೆಮಿನಾರ್ ಮಾಡಿ ಜನರನ್ನು ನಂಬಿಸಿದ್ದಾರೆ. ಒಟ್ಟು 25 ಜನರು ಹಂತ ಹಂತವಾಗಿ 1,05,18,000 ರೂ. ಹಣ ಹೂಡಿಕೆ ಮಾಡಿದ್ದೇವೆ. ಹೇಳಿದಂತೆ ನಡೆದುಕೊಳ್ಳದೇ ಗ್ರಾಹಕರು ಹೂಡಿಕೆ ಮಾಡಿದ ಹಣವನ್ನು ವಾಪಸ್ ಕೊಡದೇ ಮೋಸ ಮಾಡಿದ್ದಾರೆ ಎಂದು ಗೋಕುಲ ರಸ್ತೆಯ ಪ್ರಿಯದರ್ಶಿನಿ ಕಾಲನಿಯ ಸಂಜೀವ ದೇಶಪಾಂಡೆ ಎನ್ನುವವರು ಉಪನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಶಿಕ್ಷಕರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅ.21 ರಂದು ಹುಬ್ಬಳ್ಳಿಯಿಂದ ಧಾರವಾಡಕ್ಕೆ ಪಾದಯಾತ್ರೆ
ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಪ್ರಸ್ತಾಪ ವಿಚಾರಕ್ಕೆ ಸ್ಪಷ್ಟನೆ ನೀಡಿದ ಸವದಿ..




