Saturday, July 5, 2025

Latest Posts

ಹುಬ್ಬಳ್ಳಿಯ ಆಟೋ ಡ್ರೈವರ್ ಮನೆಯಲ್ಲಿ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್..!

- Advertisement -

Hubballi News: ಹುಬ್ಬಳ್ಳಿ: ಹುಬ್ಬಳ್ಲಿಯ ಮೋರಾರ್ಜಿ ನಗರದಲ್ಲಿ ಮೂರು ಮದುವೆಯಾಗಿದ್ದ ಶಾಂತಾ(26) ಮತ್ತು ಆಕೆಯ ಅಕ್ಕನ ಗಂಡ ಲೋಕೇಶ್(35) ಸಾವಿಗೆ ಟ್ವಿಸ್ಟ್ ಸಿಕ್ಕಿದೆ. ಇವರಿಬ್ಬರು ಅಕ್ರಮ ಸಂಬಂಧ ಹೊಂದಿದ್ದು, ಆಟೋ ಹಿಡಿದು ಹುಬ್ಬಳ್ಳಿಯಿಂದ ಹೊರಟಿದ್ದ ಶಾಂತಾ ಮತ್ತು ಲೋಕೇಶ್, ಆಟೋ ಡ್ರೈವರ್ ಮನೆಯಲ್ಲೇ ನೇಣಿಗೆ ಶರಣಾಗಿದ್ದರು.

ಆದರೆ ಈ ಮೊದಲೇ ಅವರು ಸೆಲ್ಫಿ ವೀಡಿಯೋ ಕೂಡ ಮಾಡಿದ್ದು, ಇದೀಗ ಪೊಲೀಸರಿಗೆ ಆ ವೀಡಿಯೋ ಲಭ್ಯವಾಗಿದೆ. ಈ ವೀಡಿಯೋದಲ್ಲಿ ಲೋಕೇಶ್ ಮತ್ತು ಶಾಂತಾ, ನಮ್ಮ ಸಾವಿಗೆ ನಾವೇ ಕಾರಣ. ನಾವು ಮಾಡಿದ ಪಾಪ‌ ಕರ್ಮ‌ ನಮ್ಮ ಸಾವಿಗೆ ಕಾರಣ. ಆಟೋ ಅಣ್ಣ ಕ್ಷಮಿಸಿ. ನೀವು ನಮ್ಮನ್ನು ನಂಬಿ ಮನೆ ಕೊಟ್ಟಿದ್ರಿ. ಮರಾಠಾ ಎಂದು ನಮಗೆ ಮನೆ ಕೊಟ್ಟಿದ್ರಿ. ನಮ್ಮ ಸಾವಿಗೆ ನಾವೇ ಕಾರಣ.

ನಾವು ಆಟೋ ಚಾಲಕರಿಗೆ ಕ್ಷಮೆ ಕೇಳಬೇಕು. ಆದ್ರೆ ನಾವು ನಿಮೆಗೆ ಮೋಸ ಮಾಡಿದ್ದೇವೆ. ನಮ್ದು ತಪ್ಪು. ಇದರಲ್ಲಿ ಆಟೋ ಅಣ್ಣಂದು ಏನೂ ತಪ್ಪಿಲ್ಲ. ನಾವು ನಂಬಿಕೆ ದ್ರೋಹಿಗಳು. Sorry ಅಣ್ಣ ಎಂದು ಕೈಮುಗಿದು ಕೇಳಿದ ಶಾಂತಾ ಲೋಕೇಶ್, ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ.

ವಾರಣಾಸಿಯ ಬಾಲಕಿಯ ಕವಿತೆಗೆ ಮಾರುಹೋದ ಪ್ರಧಾನಿ ಮೋದಿ

ಕೋಲಾರದ ವಿದ್ಯಾರ್ಥಿಗಳನ್ನು ಭೇಟಿಯಾಗಿ, ಸಾಂತ್ವಾನ ಹೇಳಿದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ

‘ಚಿತ್ರರಂಗದಲ್ಲಿ ಚಾಪುಮೂಡಿಸಲು ಸಲಕರಣೆ ಸಿಗದ ಅಲೆಮಾರಿಗಳು ಬೊಗಳಿದರೆ ಇತಿಹಾಸ ಬದಲಾಗುತ್ತಾ?’

- Advertisement -

Latest Posts

Don't Miss