Friday, April 18, 2025

Latest Posts

598 ಅಂಕ ಗಳಿಸಿದ ಎ.ವಿದ್ಯಾಲಕ್ಷ್ಮೀಗೆ 1 ಲಕ್ಷ ರೂಪಾಯಿ ಬಹುಮಾನ ನೀಡಿದ ಚೌಗಲಾ ಶಿಕ್ಷಣ ಸಂಸ್ಥೆ

- Advertisement -

Hubli News: ಹುಬ್ಬಳ್ಳಿ: ಇಂದು ದ್ವೀತಿಯ ಪಿಯುಸಿ ಪರೀಕ್ಷೆ ಫಲಿತಾಂಶ ಹೊರ ಬಿದ್ದಿದ್ದು,ನಗರದ ಭೈರಿದೇವರಕೊಪ್ಪದಲ್ಲಿರುವ ಚೌಗಲಾ ಶಿಕ್ಷಣ ಸಂಸ್ಥೆಯ ವಿದ್ಯಾನಿಕೇತನ ಕಾಲೇಜಿನ ವಿದ್ಯಾರ್ಥಿನಿ ಎ.ವಿದ್ಯಾಲಕ್ಷ್ಮೀ ಕರ್ನಾಟಕ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದು ಮಹಾವಿದ್ಯಾಲಯಕ್ಕೆ ಅವರ ಪಾಲಕರಿಗೆ, ಧಾರವಾಡ ಜಿಲ್ಲೆಯ ಹಿರಿಮೆ- ಗರಿಮೆಯನ್ನು ಹೆಚ್ಚಿಸಿದ್ದಾಳೆ ಎಂದು ಕಾಲೇಜಿನ ಮುಖ್ಯಸ್ಥರಾದ, ಅನಿಲಕುಮಾರ್ ಚೌಗಲಾ ಹೇಳಿದರು.

ಕಾಲೇಜಿನಲ್ಲಿ ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, 600 ಅಂಕಗಳಿಗೆ 598 ಅಂಕಗಳನ್ನು ಪಡೆದು ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾಳೆ. ಹಿಂದಿಯೊಂದನ್ನು ಬಿಟ್ಟು ಉಳಿದೆಲ್ಲಾ ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು ಪಡೆದ ಹೆಗ್ಗಳಿಕೆ ಅವಳದ್ದು ಎಂದರು..

ಇದರ ಜೊತೆಗೆ ಕಾಲೇಜಿನ ಆದಿತ್ಯಾ ಅವಸೇರಕರ (594) ಮತ್ತು ಸಹನಾ ಇಳಗೇರ (594) 5ನೇ ರಾಂಕ್, ಕೃಪಾ ವಡೊನಿ (593) ಹಾಗೂ ಸಂಕಲ್ಪ ಕುಂತೆ (593) 6ನೇ ರ್ಯಾಂಕ್, ಅನಿರುದ್ಧ ಕುಲಕರ್ಣಿ (591), ಶ್ರೇಯಾ ಗೌಡರ್ (591) ಹಾಗೂ ವೈಷ್ಣವಿ ಕುರಿ (591) 8ನೇ ರಾಂಕ್. ಕಿರಣ ತೊಳೆ (590) ಮತ್ತು ಸಮೀದ್ ಟಕ್ಕೆ (590) 9ನೇ ರಾಂಕ್. ರಮ್ಯಾ ಕಾಕೋಳ (589) ಮತ್ತು ಸಾಗರ ಗೌರನ್ನವರ (589) 10ನೇ ಬ್ಯಾಂಕ್‌ನ್ನು ಪಡೆದಿದ್ದಾರೆ. ರಾಜ್ಯಕ್ಕೆ 10 ಸ್ಥಾನಗಳಲ್ಲಿ ಒಟ್ಟು 12 ವಿದ್ಯಾರ್ಥಿಗಳು ಸ್ಥಾನವನ್ನು ಪಡೆದಿದ್ದಾರೆ.

ಒಟ್ಟು 619 ವಿದ್ಯಾರ್ಥಿಗಳು ಪಿ.ಯು.ಸಿ. ದ್ವಿತೀಯ ವರ್ಷಕ್ಕೆ ಪರೀಕ್ಷೆಯನ್ನು ಬರೆದಿದ್ದರು. ಎಲ್ಲ 619 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಮಹಾವಿದ್ಯಾಲಯವು ಪ್ರತಿಶತ 100 ರಷ್ಟು ಪರಿಣಾಮವನ್ನು ಪಡೆದಿದೆ. 2019 ರಿಂದ ಸತತ ೫ ವರ್ಷಗಳವರೆಗೆ ಮಹಾವಿದ್ಯಾಲಯವು ಪ್ರತಿಶತ 100 ರಷ್ಟು ಫಲಿತಾಂಶವನ್ನು ಪಡೆದಿದೆ ಎಂದರು.

ಈ ವೇಳೆ ಚೌಗಲಾ ಶಿಕ್ಷಣ ಸಂಸ್ಥೆಯ ಪರವಾಗಿ ವಿದ್ಯಾರ್ಥಿನಿ ಎ. ವಿದ್ಯಾಲಕ್ಷ್ಮೀಗೆ ಒಂದು ಲಕ್ಷ ರೂಪಾಯಿ ಹಣವನ್ನು ಕಾಣಿಕೆಯಾಗಿ ಕೊಡಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಪ್ರಾಚಾರ್ಯರಾದ ಡಾ. ಆನಂದ ಮುಳಗುಂದ, ಕಾರ್ಯದರ್ಶಿ ಶ್ರೀದೇವಿ ಚೌಗಲಾ, ಗಂಗಾಧರ ಕುಮಡೊಳ್ಳಿ, ಡಾ. ರಮೇಶ ಬಂಡಿವಾಡ ಉಪಸ್ಥಿತರಿದ್ದರು.

ಫೇಕ್‌ ಫ್ಯಾಕ್ಟರಿಯನ್ನು ಕಾನೂನಿನ ಮೂಲಕ ಬೇರು ಸಹಿತ ಕಿತ್ತೆಸೆಯುತ್ತೇವೆ: ಸಿಎಂ ಸಿದ್ದರಾಮಯ್ಯ

ಮೊದಲ ಬಾರಿಗೆ ಮೈತ್ರಿ ಅಭ್ಯರ್ಥಿ ಪರ ಮತಯಾಚಿಸಿದ ಪ್ರೀತಂಗೌಡ, ಆದರೆ..

ಶ್ರೀ ಶ್ರೀ ನಿರ್ಮಲಾನಂದ ಸ್ವಾಮೀಜಿಗಳ ಆಶೀರ್ವಾದ ಪಡೆದ ಮೈತ್ರಿ ನಾಯಕರು..

- Advertisement -

Latest Posts

Don't Miss